fbpx
ಸಮಾಚಾರ

ನದಿ ಜೋಡಣೆ: ‘ಮಾರಕವೋ’? ಪೂರಕವೋ?

ಭಾರಿ ಪ್ರವಾಹಗಳನ್ನು ತಡೆಗಟ್ಟಲು ‘ನದಿ ಜೋಡಣೆಯೇ’ ಪರಿಹಾರ ಎಂದು ಹಲವು ಬಾರಿ ಸರ್ಕಾರ ಘೋಷಿಸಿದೆ. ಭಾರತದ ನದಿ ಜೋಡಣೆಯ ವಿಚಾರ ಇಂದು ನೆನ್ನೆಯದ್ದಲ್ಲ. ಭಾರತದಲ್ಲಿರುವ ನದಿ ಜೋಡಣೆ ಮಾಡುವ ವಿಚಾರ ಮೊದಲು ಬಂದಿದ್ದು 1858 ನಲ್ಲಿ. ಸರ್ ಆರ್ಥರ್ ಥಾಮಸ್ ಕಾಟನ್ ಎಂಬ ನೀರಾವರಿ ಇಂಜಿನಿಯರ್ ನದಿ ಜೋಡಣೆ ಬಗ್ಗೆ ಮೊದಲು ಚಿಂತಿಸಿದ್ದು. ಕಳೆದ ಹಲವು ವರ್ಷಗಳಿಂದ ಕೇಂದ್ರ ಸರ್ಕಾರ ಗೋದಾವರಿ-ಕೃಷ್ಣೆ ನದಿ ಜೋಡಣೆ; ಮತ್ತು ಕೆನ್-ಬಟ್ವಾ (ಮಧ್ಯ ಪ್ರದೇಶದಲ್ಲಿ) ಯೋಜನೆಗಳನ್ನು ಪೂರ್ಣ ಗೊಳಿಸಿದೆ. ನದಿ ಜೋಡಣೆಯಿಂದಾಗುವ ಸಮಸ್ಯೆಗಳೇನು; ಇದರ ಖರ್ಚು-ವೆಚ್ಚಗಳೆಷ್ಟು; ಜಲಚರಗಳಿಗೆ; ಮೀನುಗಾರಿಕೆಗೆ ಇದರಿಂದಾಗುವ ಪ್ರತಿಕೂಲ ಪರಿಣಾಮಗಳೇನು? ಬನ್ನಿ ನೋಡೋಣ:

ನದಿ ಜೋಡಣೆ ಮಾಡಿದಲ್ಲಿ. ನೀರಿನ pH ವ್ಯಾಲ್ಯೂ(ಸಂಭಾವ್ಯ ಜಲಜನಕ) ಬದಲಾಗುತ್ತದೆ. ಅಷ್ಟೇ ಅಲ್ಲದೆ, ಈ ರೀತಿಯಾದ ಬೃಹತ್ ಯೋಜನೆಗಳಿಗೆ ಹಣಕಾಸಿನ ಕಾರ್ಯಸಾಧ್ಯತೆ ಆಗುವುದಿಲ್ಲ. ಕೆರೆ, ಕಟ್ಟೆಗಳನ್ನು ಅಭಿವೃದ್ಧಿ ಗೊಳಿಸಬೇಕು. ಅಂತರ್ಜಲ ವೃದ್ಧಿಸಲು ಸರ್ಕಾರ ಯೋಜನೆಗಳನ್ನು ಹಮ್ಮಿಕೊಳ್ಳಬೇಕು.

ನದಿ ಜೋಡಣೆಯಿಂದ ಪರಿಸರವನ್ನು ವಿರೂಪಗೊಳಿಸುವ ಸಾಧ್ಯತೆಗಳು ಹೆಚ್ಚು. ಕಾಲುವೆ ಮತ್ತು ಜಲಾಶಯಗಳನ್ನು ನಿರ್ಮಿಸುವ ಭರದಲ್ಲಿ ಭಾರಿ ಪ್ರಮಾಣದಲ್ಲಿ ಅರಣ್ಯ ನಾಶವಾಗುವ ಸಂಭಾವ್ಯತೆ ಹೆಚ್ಚಿರುತ್ತದೆ. ಇದರಿಂದ ಮಳೆಯ ಪ್ರಮಾಣ ಕಡಿಮೆಯಾಗುವುದಲ್ಲದೆ, ಕಾಡು ಪ್ರಾಣಿಗಳು ನಿರಾಶ್ರಿತರಾಗುತ್ತವೆ, ನೀರಿಗೆ ಹಾಹಾಕಾರ ಉಂಟಾಗುತ್ತದೆ, ಬರಗಾಲ ಉಂಟಾಗುವ ಸಾಧ್ಯತೆ ಹೆಚ್ಚು.

ನೂರುವರ್ಷಕ್ಕೊಮ್ಮೆ ನೈಸರ್ಗಿಕವಾಗಿ ನದಿಗಳ ಮಾರ್ಗ ಬದಲಾಗುತ್ತದೆ. ನದಿ ಜೋಡಣೆಯ ನಂತರ ಈ ನೈಸರ್ಗಿಕ ಮಾರ್ಗ ಬದಲಾವಣೆಯಾಗಿದ್ದಲ್ಲಿ; ದೀರ್ಘಾವಧಿಯಲ್ಲಿ ಈ ಯೋಜನೆ ವೈಫಲ್ಯ ಕಾಣುತ್ತದೆ ಮತ್ತು ಕಾರ್ಯಸಾಧುವಲ್ಲ.

ಕಾಲುವೆ ಮತ್ತು ಜಲಾಶಯಗಳನ್ನು ಕಟ್ಟಲು ಸಾವಿರಾರು ಜನರನ್ನು ಸ್ಥಳಾಂತರಿಸಬೇಕಾಗುತ್ತದೆ. ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡಬೇಕಾಗುತ್ತದೆ. ನಿರಾಶ್ರಿತರ ಪುನರ್ವಸತಿಗೆ ಸಾವಿರಾರು ಕೋಟಿ ವೆಚ್ಚ ಮಾಡಬೇಕಾಗುತ್ತದೆ.

ನದಿ ಜೋಡಣೆಯಿಂದ ಸಮುದ್ರಕ್ಕೆ ನೈಸರ್ಗಿಕವಾಗಿ ಹರಿದುಕೊಂಡು ಹೋಗಬೇಕಾದ ‘ಸಿಹಿ ನೀರಿನ’ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಸಮುದ್ರದಲ್ಲಿ ವಾಸಿಸುವ ಮೀನು ಮತ್ತಿತರ ಸಾವಿರಾರು ಜೀವರಾಶಿಗಳ ಅಸ್ತಿತ್ವವಕ್ಕೆ ಧಕ್ಕೆ ಉಂಟಾಗುತ್ತದೆ.

ಪ್ರತಿಯೊಂದು ನದಿಗೂ ತನ್ನದೇ ಆದ ಜೀವಾವರಣ ವ್ಯವಸ್ಥೆ ಇರುತ್ತದೆ; ತನ್ನದೇ ಆದ ಸಂಭಾವ್ಯ ಜಲಜನಕ (pH value) ಇರುತ್ತದೆ, ಆ ನದಿ ನೀರಿನಲ್ಲಿ ಜೀವಿಸುವ ಮೀನುಗಳಿರುತ್ತವೆ. ನದಿ ಜೋಡಣೆಯಿಂದ ಸಂಭಾವ್ಯ ಜಲಜನಕ ಮತ್ತು ಜೀವಾವರಣ ವ್ಯವಸ್ಥೆ ಬದಲಾವಣೆಯಾಗುವುದರಿಂದ ನದಿಗಳು ಮತ್ತು ನದಿಗಳಿಂದ ಅವಲಂಬಿತವಾಗಿರುವ ಮೀನುಗಳು ಮತ್ತಿತರ ಜೀವರಾಶಿಗಳು ಉಳಿಯುವುದಿಲ್ಲ.

ನದಿ ಜೋಡಣೆಗೆ 10-15 ಲಕ್ಷದಷ್ಟು ಭೂಸ್ವಾಧೀನವನ್ನು ಮಾಡಬೇಕಾಗುತ್ತದೆ. ಭೂಸ್ವಾದೇನಕ್ಕೆ ಹಲವು ಕಾನೂನು ಒಡಕು-ತೊಡಕುಗಳಾಗುವುದು ಖಚಿತ, ಇದರಿಂದ ಯೋಜನೆಗೆ ಹಿನ್ನಡೆಯಾಗುತ್ತದೆ. .

ಜೂಲೈ 2001 ನೇ ಇಸವಿಯಲ್ಲಿ ಅಮೆರಿಕಾದ ಅಂದಿನ ರಾಷ್ಟ್ರಪತಿಗಳಾಗಿದ್ದ ಜಾರ್ಜ್ ಬುಷ್ ರವರು ಕೆನಡಾ ದೇಶದ ಪ್ರಧಾನಿಗಳಿಗೆ ಕೆನಡಾ ದೇಶದಿಂದ ಪೈಪ್ ಮೂಲಕ ನೈಋತ್ಯ ಅಮೆರಿಕೆಗೆ ನೀರು ಹರಿಸುವ ಪ್ರಸ್ತಾವನೆಯನ್ನು ಮಾಡಿದ್ದರು; ಆದರೆ, ಇದರಿಂದ ಪರಿಸರ ನಾಶವಾಗುವುದರಿಂದ ಕೆನಡಾ ದೇಶದ ಅಂದಿನ ಪರಿಸರ ಸಚಿವರು ಅಮೆರಿಕೆಯ ಪ್ರಸ್ತಾವನೆಯನ್ನು ಹಾಕಿದ್ದರು.

ಚೀನಾ ದೇಶದ ಸರ್ವಾಧಿಕಾರ ಆಳ್ವಿಕೆಯಲ್ಲಿ ಮಾತ್ರ ದಕ್ಷಿಣದಿಂದ —> ಉತ್ತರಕ್ಕೆ ನೀರನ್ನು ಮಾರ್ಗ ಬದಲಾವಣೆ (diversion) ಮಾಡಿ 2,400 ಕಿಲೋಮೀಟರ್ ಗಳ ಜಾಲಬಂದಧ ಮುಖೇನ, ಉತ್ತರ ಚೀನಾ ದಲ್ಲಿರುವ ಕೈಗಾರಿಕೆಗಳಿಗೆ ಮತ್ತು ಬರ ಭೂಮಿಗಳಿಗೆ ನೀರನ್ನು ಉಣಿಸಲು ಸಾಧ್ಯವಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top