fbpx
ಸಮಾಚಾರ

ಚೊಚ್ಚಲ ಮಗುವಿಗೆ ಜನ್ಮ ನೀಡಿದ ನಟಿ ಶ್ರುತಿ ಹರಿಹರನ್!

ನಟಿ ಶ್ರುತಿ ಹರಿಹರನ್ ಅವರು ಚೊಚ್ಚಲ ಮಗುವಿಗೆ ತಾಯಿಯಾಗಿದ್ದಾರೆ. ಹೌದು ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಶ್ರುತಿ ಹರಿಹರನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇತ್ತೀಚಿಗಷ್ಟೇ ಶ್ರುತಿ ಹರಿಹರನ್ ಬ್ಲರ್ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಶ್ರುತಿ ತಾವು ತಾಯಿಯಾಗುತ್ತಿರುವುದಾಗಿ ಹೇಳಿಕೊಂಡಿದ್ದರು., “ಈ ಸರ್ಕಸ್‍ಗೆ ನಿನಗೆ ಸ್ವಾಗತ ಪುಟ್ಟ. ನಿನ್ನನ್ನು ನೋಡಲು ನಮಗೆ ಕಾಯಲು ಆಗುತ್ತಿಲ್ಲ. ನಿನ್ನ ತಂದೆ ರಾಮ್ ಕಳಾರಿ ಉತ್ಸುಕರಾಗಿದ್ದಾರೆ” ಎಂದು ಬರೆದುಕೊಂಡಿದ್ದರು. ಈ ಮೂಲಕ ಶ್ರುತಿ ಅವರು ತಾವೂ ಗರ್ಭಿಣಿ ಎಂಬುದನ್ನು ಅಧಿಕೃತವಾಗಿ ಹೇಳಿಕೊಂಡಿದ್ದರು.

ಅಂದಹಾಗೆ ನಟಿ ಶ್ರುತಿ ಹರಿಹರನ್ ಅವರು ತಾನು ಮದುವೆಯಾಗಿದ್ದೇನೆ ಎನ್ನುವ ವಿಚಾರವನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ ಆರೋಪ ಕೇಳಿ ಬಂದ ಸಂದರ್ಭದಲ್ಲಿ ದೂರು ನೀಡುವಾಗ ಮದುವೆಯಾಗಿದ್ದ ವಿಚಾರ ಬಹಿರಂಗವಾಗಿತ್ತು. ಅರ್ಜುನ್ ಸರ್ಜಾ ಅವರ ವಿರುದ್ಧ ದೂರು ನೀಡಿದ್ದರು. ಇದರಲ್ಲಿ ತಮ್ಮ ಹೆಸರಿನ ವಿಳಾಸದೊಂದಿಗೆ ವೈಫ್ ಆಫ್ ರಾಮ್ ಕುಮಾರ್ ಎಂದು ನಮೂದಿಸಿದ್ದರು.

ಕನ್ನಡ ಚಿತ್ರ “ಹ್ಯಾಪಿ ನ್ಯೂ ಇಯರ್” ನಂತರ ಶ್ರುತಿ ಹರಿಹರನ್-ರಾಮ್ ಅವರ ವಿವಾಹವಾಗಿತ್ತು. ಇಬ್ಬರೂ ಹೆಚ್ಚು ಸದ್ದು ಗದ್ದಲವಿಲ್ಲದೆ ವಿವಾಹವಾಗಿದ್ದು 2017ರ ನವೆಂಬರ್ ನಲ್ಲಿ ಜಾಲತಾಣವೊಂದರ ವರದಿ ಮೂಲಕ ಬಹಿರಂಗವಾಗಿತ್ತು. ಕೇರಳದಲ್ಲಿ ನೃತ್ಯ ಮಾಸ್ಟರ್ ಆಗಿರುವ ರಾಮ್ ಅಲ್ಲಿನ ಪ್ರಸಿದ್ದ ಸಮರ ಕಲೆ ಕಲರಿ ಪಟ್ಟು ಕಲಾವಿದರಾಗಿ ಅಂತರಾಷ್ಟ್ರೀಯ ಮನ್ನಣೆ ಗಿಟ್ಟಿಸಿದ್ದಾರೆ.

ಶ್ರುತಿ ಹರಿಹರನ್ ಪಾಲಿಗೆ ಇನ್ನೂ ಒಂದು ಖುಷಿ ವಿಚಾರವೆಂದರೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2018 ಪ್ರಕಟವಾಗಿದ್ದು ನಾತಿಚರಾಮಿ ಚಿತ್ರದ ಪಾತ್ರಕ್ಕೆ ವಿಶೇಷ ತೀರ್ಪುಗಾರರ ಪ್ರಶಸ್ತಿ ಲಭಿಸಿದೆ. ಇದೂ ಸೇರಿ ಅವರ ಚಿತ್ರಕ್ಕೆ ಒಟ್ಟು ಆರು ಪ್ರಶಸ್ತಿಗಳು ಸಿಕ್ಕಿದೆ ಇದು ಕೂಡಾ ಹೆಮ್ಮೆಯ ವಿಚಾರವಾಗಿದೆ. ಒಂದು ಕಡೆ ವರಮಹಾಲಕ್ಷ್ಮೀ, ಇನ್ನೊಂದು ಕಡೆ ಮನೆಗೆ ಪುಟ್ಟಲಕ್ಷ್ಮೀ ಆಗಮನ, ಇನ್ನೊಂದು ಕಡೆ ರಾಷ್ಟ್ರೀಯ ಪ್ರಶಸ್ತಿ! ಒಟ್ಟಿನಲ್ಲಿ ಈ ವರಮಹಾಲಕ್ಷ್ಮಿ ಹಬ್ಬ ಶ್ರುತಿ ಬದುಕಲ್ಲಿ ಮರೆಯಲಾಗದ ಸುದಿನ ಎಂದೇ ಹೇಳಬಹುದು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top