fbpx
ಸಮಾಚಾರ

ಮಂಡ್ಯ ಚುನಾವಣೆ ಬಳಿಕ ನಿಖಿಲ್ ಬೆನ್ನುತಟ್ಟಿದ ಸುಮಲತಾ!

ಕನ್ನಡ ಚಿತ್ರರಂಗದ ಅದ್ದೂರಿ ಸಿನಿಮಾ ‘ಮುನಿರತ್ನ ಕುರುಕ್ಷೇತ್ರ’ ಕೊನೆಗೂ ಇಂದು ತೆರೆ ಕಂಡಿದ್ದು ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಗುರುವಾರ ರಾತ್ರಿ ಸೆಲಬ್ರೆಟಿಗಳಿಗೋಸ್ಕರ ‘ಮುನಿರತ್ನ ಕುರಕ್ಷೇತ್ರ’ ಚಿತ್ರದ ಪ್ರೀಮಿಯರ್​ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸಿನಿಮಾ ವೀಕ್ಷಿಸಿದ ಮಂಡ್ಯ ಸಂಸದೆ ಸುಮಲತಾ ನಿಖಿಲ್ ಅವರನ್ನು ಹೋಗಲಿ ಗಮನ ಸೆಳೆದರು.

ಸಿನಿಮಾ ನೋಡಿದ ನಂತರ ಮಾತನಾಡಿದ ಸುಮಲತಾ “ಕುರುಕ್ಷೇತ್ರ ಎಂಬುದನ್ನು ಸಿನಿಮಾ ಎಂದರೆ ತಪ್ಪಾಗಲಿದೆ. ಅದೊಂದು‌ ಅನುಭವ ಮತ್ತು ಜರ್ನಿ. ನನಗೆ ಈ ಸಿನಿಮಾ ತುಂಬಾ ಭಾವನಾತ್ಮಕ ವಿಚಾರವಾಗಿದೆ. ಅಂಬರೀಶ್ ಅವರನ್ನ ಮತ್ತೆ ಈ ಸಿನಿಮಾದಲ್ಲಿ ನೋಡುತ್ತಿದ್ದೇವೆ. ಪ್ರತಿಯೊಬ್ಬ ನಟರು ಕೂಡ ಉತ್ತಮವಾಗಿ ನಟಿಸಿದ್ದಾರೆ. ಅರ್ಜುನ್ ಸರ್ಜಾರ ನಟನೆ ಹೃದಯ ಸ್ಫರ್ಶಿಯಾಗಿದೆ. ನಿಖಿಲ್ ಅವರ ನಟನೆಯೂ ಸೂಪರ್ ಆಗಿದೆ. ” ಎಂದರು

ಇದೇ ವೇಳೆ ದರ್ಶನ್​ಗೆ ಸುಮಲತಾ ಹೊಸ ಬಿರುದು ನೀಡಿದರು. ದರ್ಶನ್​ಗೆ ಎಲ್ಲಾ ಅಭಿಮಾನಿಗಳು ಡಿ ಬಾಸ್​ ಎಂದು ಕರೆಯುವುದು ಗೊತ್ತಿರುವ ವಿಚಾರವೇ! ಆದರೆ ಸುಮಲತಾ ಈ ಬಿರುದನ್ನೇ ಸ್ವಲ್ಪ ಬದಲಾಯಿಸಿದ್ದಾರೆ. “ದರ್ಶನ್‌ಗೆ ‘ಸಂಗೊಳ್ಳಿ ರಾಯಣ್ಣ’ ಆದ ನಂತರ ಇದೊಂದು ಮೈಲಿಗಲ್ಲು. ದುರ್ಯೋಧನನೇ ದರ್ಶನ್, ದರ್ಶನ್ ಅವ್ರೇ ದುರ್ಯೋಧನ. ಅಷ್ಟು ಕರಾರುವಕ್ಕಾಗಿ ಅವರು ನಟಿಸಿದ್ದಾರೆ.. ದರ್ಶನ್​ ದುರ್ಯೋಧನನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ದರ್ಶನ್ ಬರಿ ಡಿ‌ ಬಾಸ್ ಅಲ್ಲ. ಅವರನ್ನು ದೂರ್ಯೋಧನ ಬಾಸ್ ಎಂದು ಕರಿಯಬೇಕು,” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top