fbpx
ಸಿನಿಮಾ

ಮತ್ತೊಮ್ಮೆ ರವಿಮಾಮನ ಕೈಹಿಡಿದ ಕಿಚ್ಚ ಸುದೀಪ್, ಶೋಮ್ಯಾನ್ ಐಸ್ ಬ್ಯಾಕ್ ಅಗೇನ್

ಕನ್ನಡ ಚಿತ್ರರಂಗದ ಪಾಲಿನ ಶೋಮ್ಯಾನ್ ಎಂದೇ ಕರೆಸಿಕೊಳ್ಳುವ ಕ್ರೇಜಿಸ್ಟಾರ್ ರವಿಚಂದ್ರನ್ ಈವರೆಗೆ ಮಾಡಿರೋ ಪಾತ್ರಗಳೆಲ್ಲಾ ವಿಭಿನ್ನವಾದವುಗಳೇ. ಮೊದಲು ಕೈಯಲ್ಲಿ ಗುಲಾಬಿ ಹಿಡಿದು ಮರ ಸುತ್ತುವ ಪ್ರೇಮಕತೆಯುಳ್ಳ ಚಿತ್ರಗಳನ್ನು ಮಾಡುತ್ತಿದ್ದ ರವಿಚಂದ್ರನ್ ನಂತರ ದೊಡ್ಡ ಆಕ್ಷನ್ ಚಿತ್ರಗಳನ್ನ ಕೂಡ ಮಾಡಿದ್ದರು., ಕೊನೆಗೆ ಸುದೀಪ್ ನಿರ್ದೇಶನದ ಮಾಣಿಕ್ಯ ಚಿತ್ರದ ಮೂಲಕ ಪೋಷಕ ಮಾತ್ರಗಳನ್ನ ಮಾಡಲು ರವಿಚಂದ್ರನ್ ಪ್ರಾರಂಭಿಸಿದ್ದರು. ಹಿರೋ ಆಗುವುದಕ್ಕೂ ಮುಂಚೆ ಅಂದರೆ ಚಕ್ರವ್ಯೂಹ, ಖದೀಮ ಕಳ್ಳರು ಸೇರಿದಂತೆ ಕೆಲವು ಚಿತ್ರಗಳಲ್ಲಿ ರವಿಚಂದ್ರನ್ ಖಳನಟನಾಗಿ ಕಾಣಿಸಿಕೊಂಡಿದ್ದರು

ಈವರೆಗೆ ಕನಸುಗಾರ ಕೈಗೆತ್ತಿಕೊಂಡಿರೋದೆಲ್ಲವೂ ಸವಾಲಿನ ಪಾತ್ರಗಳೇ. ಲವರ್ ಬಾಯ್ ಆಗಿ ಕಾಣಿಸಿಕೊಂಡಾಗಲೂ, ತಂದೆಯ ಪಾತ್ರ ಮಾಡಿದಾಗಲೂ ಅದರಲ್ಲೇನೋ ವಿಭಿನ್ನತೆ ಇದ್ದೇ ಇತ್ತು. ಸ್ಯಾಂಡಲ್ ವುಡ್ ನ ಸದ್ಯದ ಸೂಪರ್ ಅಪ್ಪ ಮಕ್ಕಳ ಕಾಂಬಿನೇಶನ್ ನಲ್ಲಿ ಸಂಚಲನ ಮೂಡಿಸಿರುವ ಜೋಡಿಯೆಂದರೆ ಸುದೀಪ್ ಹಾಗು ಕ್ರೇಜಿಸ್ಟಾರ್ ರವಿಚಂದ್ರನ್ ಜೋಡಿ .

 

 

ಈ ಹಿಂದೆ ಈ ಜೋಡಿ ‘ಮಾಣಿಕ್ಯ’ ಮತ್ತು ‘ಹೆಬ್ಬುಲಿ’ ಚಿತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನಗೆದ್ದಿತ್ತು , ಪತ್ತೆದಾರಿ ಥ್ರಿಲ್ಲರ್ ಸಿನೆಮಾವೊಂದು ರವಿಮಾಮ ನಾಯಕತ್ವದಲ್ಲಿ ಮೂಡಿಬಂದಿದ್ದು ‘ರವಿ ಬೋಪಣ್ಣ’ ಚಿತ್ರಕ್ಕೆ ರವಿಚಂದ್ರನ್ ಆ್ಯಕ್ಷನ್ ಕಟ್ ಹೇಳಲಿರುವುದು ಮತ್ತೊಂದು ವಿಶೇಷ .

ದೇಹಾಂಗಗಳ​ ಮಾಫಿಯಾ ಜಾಲದ ಸುತ್ತ ಹೆಣೆಯಲಾಗಿರುವ ಈ ಚಿತ್ರದಲ್ಲಿ ರವಿಚಂದ್ರನ್ ಪೊಲೀಸ್ ಕಾನ್​ಸ್ಟೇಬಲ್ ಪಾತ್ರದಲ್ಲಿ ನಟಿಸಲಿದ್ದಾರೆ. ಮಲಯಾಳಂನಲ್ಲಿ ಸೂಪರ್ ಡೂಪರ್ ಆಗಿದ್ದ ‘ಜೋಸೆಫ್’ ಚಿತ್ರದ ರಿಮೇಕ್ ಕೊಡಗಿನಲ್ಲಿ ಚಿತ್ರೀಕರಣ ನಡೆಯಲಿದ್ದು ನೇಟಿವಿಟಿಗೆ ತಕ್ಕಂತೆ ಚಿತ್ರಕ್ಕೆ ‘ರವಿ ಬೋಪಣ್ಣ’ ಎಂದು ಹೆಸರಿಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top