fbpx
ಸಿನಿಮಾ

ನೆರೆ ಸಂತ್ರಸ್ತರ ನೆರವಿಗೆ ನಿಂತ ರಾಕಿಂಗ್ ಸ್ಟಾರ್ ಯಶ್ ನೇತೃತ್ವದ ‘ಯಶೋಮಾರ್ಗ’ ತಂಡ

ಸತತವಾಗಿಅಬ್ಬರಿಸುತ್ತಿರುವ ಮಳೆರಾಯ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಸಿ ಮರಣ ಮೃದಂಗ ಬಾರಿಸುತ್ತಿದ್ದಾನೆ.ಉತ್ತರ ಕರ್ನಾಟಕ , ಕೊಡಗು ಸೇರಿದಂತೆ ರಾಜ್ಯದ ವಿವಿದೆಡೆ ಧಾರಾಕಾರ ಮಳೆ ಮುಂದುವರಿದಿದ್ದು ಮಹಾಮಳೆಗೆ ಇಡೀ ಜನರ ಜೀವನ ಅಕ್ಷರಶಃ ಕೊಚ್ಚಿಹೋಗಿದೆ.. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ರಾಜ್ಯ ಸರ್ಕಾರ, ರಾಜ್ಯದ ಜನತೆ, ಚಿತ್ರರಂಗ, ಸ್ಟಾರ್ ನಟರ ಅಭಿಮಾನಿ ಸಂಘಗಳು ಸೇರಿದಂತೆ ಅನೇಕರು ಸ್ಪಂದಿಸಿದ್ದಾರೆ.. ಅದೇ ರೀತಿ ರಾಕಿಂಗ್ ಸ್ಟಾರ್ ಯಶ್ ಅವರ ಯಶೋಮಾರ್ಗ ಫೌಂಡೇಶನ್ ಕೂಡ ಸಂತ್ರಸ್ತರಿಗೆ ನೆರವಾಗಿದೆ.

 

 

ನಟ ಯಶ್​ ಅವರ ಮುಂದಾಳತ್ವದ ಯಶೋಮಾರ್ಗ ಫೌಂಡೇಶನ್​​ ಮೂಲಕ ನಿರಾಶ್ರಿತರಿಗೆ ಮೂಲಭೂತ ಸೌಲಭ್ಯ ಒದಗಿಸಲಾಗುತ್ತಿದೆ. ಯಶೋಮಾರ್ಗ ತಂಡವು ವಸ್ತುಗಳನ್ನ ಟ್ರಕ್​ನಲ್ಲಿ ತುಂಬಿಸಿಕೊಂಡು ಕೊಡಗಿನತ್ತ ಹೊರಟಿದ್ದು ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ನೆರವು ನೀಡಿದೆ. ಪ್ರವಾಹದಲ್ಲಿ ಸಿಲುಕಿರುವ ಸಂತ್ರಸ್ತರಿಗಾಗಿ ಕುಡಿಯುವ ನೀರು, ಬ್ರೆಡ್ಡು, ಬಿಸ್ಕೆಟ್, ಸಿದ್ದ ಆಹಾರಗಳು, ಔಷಧ ಸೇರಿದಂತೆ ಅಗತ್ಯ ಸಂಗ್ರಹಿಸಿ ನಿರಾಶ್ರಿತರಿಗೆ ತಲುಪಿಸಿದ್ದಾರೆ.

 

 

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬಿಡುವಿಲ್ಲದೇ ಧಾರಾಕಾರ ಮಳೆ ಮುಂದುವರಿದಿದ್ದು ಮಹಾ ಮಳೆಗೆ ಜಿಲ್ಲೆಯೇ ಅಕ್ಷರಶಃ ಕೊಚ್ಚಿಹೋಗಿದೆ. ಭಾರಿ ಬಿರುಗಾಳಿ, ನೀರು ತುಂಬಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಳೆದುಕೊಂಡಿವೆ. ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಗ್ರಾಮಗಳು ಕಗ್ಗತಲಲ್ಲಿ ಮುಳುಗಿವೆ. ಜಿಲ್ಲೆಯಾದ್ಯಂತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸಂತ್ರಸ್ತ ಜನರು ರಕ್ಷಣೆಗಾಗಿ ಎದುರು ನೋಡುತ್ತಿದ್ದಾರೆ.

ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಬರಲು ಹಣ ಹಾಗೂ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ರಾಜ್ಯದ ವಿವಿಧ ಸಂಘಟನೆಗಳು ಮುಂದಾಗಿವೆ. ಸಂತ್ರಸ್ತರಿಗೆ ಹಾಸಿಗೆ, ಆಹಾರ ಧಾನ್ಯ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸಲು ಸಹಾಯ ಮಾಡುವಂತೆ ಉತ್ತರ ಕರ್ನಾಟಕದ ಜನರು ಮನವಿ ಮಾಡಿದ್ದಾರೆ.

 

 

ಯಶೋಮಾರ್ಗ ತಂಡದ ಇತರ ಕಾರ್ಯಗಳು

ಧಾರವಾಡ ಜಿಲ್ಲೆಯ ಅಂಧ ಮಕ್ಕಳ ನಿರಾಶ್ರಿತರ ಕೇಂದ್ರಕ್ಕೆ “ಯಶೋಮಾರ್ಗ” ತಂಡ ಭೇಟಿ ಮಾಡಿ ಅಗತ್ಯ ವಸ್ತುಗಳನ್ನು ಕೊಡಲಾಯಿತು, ಧಾರವಾಡ ಜಿಲ್ಲೆಯ ನಿರಾಶ್ರಿತರ ಕೇಂದ್ರಕ್ಕೆ “ಯಶೋಮಾರ್ಗ” ತಂಡ ಭೇಟಿ ನೀಡಿ ಅಲ್ಲಿ ಸಂತ್ರಸ್ತರಿಗೆ ದಿನಸಿ ವಸ್ತುಗಳು ಹಾಗೂ ಬೆಡ್ ಸೀಟುಗಳನ್ನು ಕೊಡಲಾಯಿತು, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಹಿಮ್ಮಾಪುರ್ ,ಗರಡಿಗುಡ್ಡ , ಹಿನಾಮೊಂಗಲ್ ಮತ್ತು ಮರೆಗೊಡ ಗ್ರಾಮಗಳ ನಿರಾಶ್ರಿತರ ಕೇಂದ್ರಗಳಿಗೆ ದಿನನಿತ್ಯದ ವಸ್ತುಗಳನ್ನು ತೆಗೆದುಕೊಂಡು ಯಶೋಮಾರ್ಗದ ಎರಡನೇ ತಂಡ ಹೊರಟಿದೆ, ಕಲ್ಲೆ ಮತ್ತು ಕಬ್ಬನೂರು ಗ್ರಾಮಗಳಲ್ಲಿ “ಯಶೋಮಾರ್ಗ” ತಂಡದಿಂದ ದಿನನಿತ್ಯದ ಬಳಕೆ ವಸ್ತುಗಳನ್ನು ಕೊಡಲಾಯಿತು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top