fbpx
ಸಿನಿಮಾ

ಡಾಲಿ ಜೊತೆಗೆ ಡುಯೆಟ್ ಹಾಡಲು ಜೊತೆಯಾದರು ಡಿಂಪಲ್ ಕ್ವೀನ್

ಟಗರು ಚಿತ್ರದ ಡಾಲಿ ಪಾತ್ರದ ಮೂಲಕ ಏಕಾಏಕಿ ಸ್ಟಾರ್ ಆಗಿ ಹೊರ ಹೊಮ್ಮಿರುವವರು ಧನಂಜಯ. ಅಭಿಮಾನಿಗಳಿಂದ ಡಾಲಿ ಅಂತಲೇ ಕರೆಸಿಕೊಳ್ಳುವಷ್ಟರ ಮಟ್ಟಿಗೆ ಟಗರು ಪಾತ್ರದಿಂದ ಧೂಳೆಬ್ಬಿಸಿರೋ ಧನಂಜಯ್‌ ಇದೀಗ ಮತ್ತೊಮ್ಮೆ ವಿಲನ್ ಪಾತ್ರದಲ್ಲಿ ಅಬ್ಬರಿಸಲು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.. ದರ್ಶನ್ ಮುಖ್ಯ ಭೂಮಿಕೆಯಲ್ಲಿ ಮೂಡಿಬಂದ ಯಜಮಾನ ಚಿತ್ರದಲ್ಲಿ ಧನಂಜಯ್ ಖಳನಟನಾಗಿ ಅಭಿನಯಿಸಿದ್ದಾರೆ.

ಡಾಲಿಗೆ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆಯಾಗಲಿದ್ದಾರೆ. ಶುಭ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದಂದು ಚಿತ್ರತಂಡ ರಚಿತಾ ರಾಮ್ ಸಿನಿಮಾದ ನಾಯಕಿ ಎಂದು ತಿಳಿಸಿದ್ದಾರೆ, ಗಣಪ ಸಿನಿಮಾ ನಿರ್ದೇಶನ ಮಾಡಿ ಪ್ರಖ್ಯಾತಿ ಪಡೆದಿರುವ ಪ್ರಭು ಶ್ರೀನಿವಾಸ್ ಡಾಲಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ, ಈ ಚಿತ್ರ ಭೂಗತ ಲೋಕದ ಸಾರವನ್ನು ಹೊಂದಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದ್ದು , ನಟ ಧನಂಜಯ ಅವರಿಗೆ ಒಳ್ಳೆಯ ಮೈಲೇಜ್ ನೀಡುವ ನಿರೀಕ್ಷೆ ಹುಟ್ಟು ಹಾಕಿದೆ.

 

 

ಮೊದಲಸಲಾ ಮತ್ತು ಎರಡನೇ ಸಲ ಖ್ಯಾತಿಯ ಯೋಗೇಶ್ ನಾರಾಯಣ್ ನಿರ್ಮಾಣದಲ್ಲಿ ಡಾಲಿ ಮೂಡಿ ಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top