fbpx
ಸಮಾಚಾರ

ಮತ್ತೆ ಕಿತ್ತಾಡಿಕೊಂಡರೇ ದರ್ಶನ್-ವಿಜಯಲಕ್ಷ್ಮಿ ದಂಪತಿ: ಸ್ಪಷ್ಟನೆ ನೀಡಿದ ದಚ್ಚು ಪತ್ನಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ಕಳೆದ ವಾರ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದರ ಮಧ್ಯೆ ದರ್ಶನ್ ಮತ್ತು ವಿಜಯಲಕ್ಷ್ಮೀ ದಂಪತಿ ಮತ್ತೆ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಮಧ್ಯೆ ಮತ್ತೆ ಗಲಾಟೆ ನಡೆದಿದೆ. ವಿಜಯಲಕ್ಷ್ಮಿ ಮತ್ತೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ’ ಎಂಬ ಸುದ್ದಿ ಸೋಷಿಯಲ್ ಮೀಡಿಯಾ ಮೂಲಕ ಹರಿದಾಡಿತ್ತು. ‘ನಟ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಮತ್ತು ಅವರ ತಾಯಿಗೆ ಹೊಡೆದಿದ್ದಾರೆ’ ಎಂದು ಹರಿದಾಡುತ್ತಿರುವ ಸುದ್ದಿ ಕೇಳಿ ಹಲವರು ಮನಸ್ಸಿಗೆ ಬಂದಂತೆ ಮಾತನಾಡತೊಡಗಿದ್ದರು. ಆದರೆ ಈ ಎಲ್ಲ ವದಂತಿಗಳಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ತೆರೆ ಎಳೆದಿದ್ದಾರೆ.

 

 

 

 

‘ಹರಿದಾಡುತ್ತಿರುವ ಗಾಳಿಸುದ್ದಿಗೆ ಆಧಾರವಿಲ್ಲ’ ಎಂದು ಒಂದೇ ವಾಕ್ಯದಲ್ಲಿ ತಮ್ಮ ಸಂಸಾರದ ವಿರುದ್ಧ ಹಬ್ಬಿರುವ ಬಿರುಗಾಳಿ ಸುದ್ದಿಯನ್ನು ಅಲ್ಲಗಳೆದಿದ್ದಾರೆ. “All the rumours doing rounds are baseless…” ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಅಂದಹಾಗೆ ವಿಜಯಲಕ್ಷ್ಮೀ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ತಮ್ಮ ಹೆಸರು ಬದಲಿಸಿಕೊಂಡಿದ್ದು ವಿಜಯಲಕ್ಷ್ಮೀ ದರ್ಶನ್​ ಎಂದಿದ್ದ ಹೆಸರನ್ನು ಬದಲಿಸಿ ದರ್ಶನ್​ ಹೆಸರನ್ನು ತೆಗೆದುಹಾಕಿದ್ದಾರೆ. ಈಗ ಅವರ ಟ್ವಿಟರ್​ನಲ್ಲಿ ಬರೀ ವಿಜಯಲಕ್ಷ್ಮೀ ಎಂದಷ್ಟೇ ಹೆಸರಿದೆ. ಮೊನ್ನೆಯವರೆಗೂ ವಿಜಯಲಕ್ಷ್ಮೀ ದರ್ಶನ್​ ಎಂದೇ ಇದ್ದ ಹೆಸರು ಏಕಾಏಕಿ ಬದಲಾಗಿದೆ. ಹೀಗೆ ಏಕಾಏಕಿ ದರ್ಶನ್ ಹೆಸರನ್ನು ತೆಗಿದಿರೋದು ಏಕೆ? ಎಂಬ ಚರ್ಚೆಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top