fbpx
ಸಮಾಚಾರ

ಇಂದು ರಾತ್ರಿ ಡಿಸ್ಕವರಿಯಲ್ಲಿ ಬರಲಿದೆ ಪ್ರಧಾನಿ ಮೋದಿ ‘ಅರಣ್ಯ ಸಾಹಸ’!

ಹೊಸ ಕಾರ್ಯಕ್ರಮ, ಯೋಜನೆಗಳಲ್ಲಿ ಸದಾ ಒಂದು ಹೆಜ್ಜೆ ಮುಂದಿಡುವ ಪ್ರಧಾನಿ ಮೋದಿ ಅವರ ಮತ್ತೊಂದು ಮುಖ ಸೋಮವಾರ ಅನಾವರಣಗೊಳ್ಳಲಿದೆ. ಪ್ರಸಿದ್ಧ ಸಾಹಸಿಗ ಬೆಯರ್‌ ಗ್ರಿಲ್ಸ್‌ ಅವರು ನಡೆಸಿಕೊಡುವ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿರುವ ಸಂಚಿಕೆ ಸೋಮವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ ಡಿಸ್ಕವರಿ ಸಮೂಹದ 12 ಚಾನೆಲ್‌ಗಳಲ್ಲಿ ವಿಶ್ವದ 180 ದೇಶಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

 

 

 

 

ಜಾಗತಿಕಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆದಿರುವ ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮದಲ್ಲಿ ಈವರೆಗೂ ಕಂಡಿರದ ಮೋದಿ ಕಾಣಸಿಗಲಿದ್ದಾರೆ. ಡಿಸ್ಕವರಿ ಚಾನೆಲ್‌ ತನ್ನ ಟೀಸರ್‌ಗೆ ‘ಎಪಿಕ್‌ ಅಡ್ವೆಂಚರ್‌ ಆಫ್‌ ಎ ಲೈಫ್‌ ಟೈಮ್‌’ ಎಂದು ಹೆಸರಿಟ್ಟಿತ್ತು. ಜೀವಮಾನದ ಮಹಾ ಸಾಹಸದಲ್ಲಿ ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರ ದೇಶದ ನಾಯಕರೊಬ್ಬರು ಭಾಗವಹಿಸಿರುವುದು ಹೆಮ್ಮೆ ಎಂದು ಡಿಸ್ಕವರಿ ಚಾನೆಲ್‌ ಹೇಳಿಕೊಂಡಿದೆ.

ಪ್ರೊಮೋದಲ್ಲಿ ಇರುವುದೇನು?
ಗ್ರಿಲ್ಸ್‌ನ್ನು ಭಾರತಕ್ಕೆ ಸ್ವಾಗತಿಸುತ್ತಿದ್ದು, ಗ್ರಿಲ್‌ ಜತೆಗೆ ಕಾಡುದಾರಿಯಲ್ಲಿ ಸಾಗಿದ್ದಾರೆ. ಅಷ್ಟೇ ಅಲ್ಲದೆ, ನದಿಯಲ್ಲಿ ತೆಪ್ಪದಲ್ಲಿ ಕುಳಿತು ಅರಣ್ಯ ಸಂಪತ್ತಿನ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ. ನೀವು ಭಾರತದ ಅತ್ಯಂತ ಪ್ರಮುಖ ವ್ಯಕ್ತಿ, ನಿಮ್ಮನ್ನು ಜೀವಂತವಾಗಿರಿಸುವುದು ನನ್ನ ಆದ್ಯ ಕರ್ತವ್ಯ ಎಂದು ಗ್ರಿಲ್ಸ್‌ ವೀಡಿಯೋದಲ್ಲಿ ಹೇಳಿಕೆ ನೀಡಿ, ಮೋದಿಗೆ ವಿಶೇಷ ವಸ್ತ್ರಗಳನ್ನು ಧರಿಸಲು ನೀಡುವುದನ್ನೂ ಕಾಣಬಹುದು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top