fbpx
ಸಮಾಚಾರ

ಮೋಟುದ್ದ ನೀರಲ್ಲಿ ತೆಪ್ಪ ನಡೆಸಲು ಹೋಗಿ ಟ್ರೊಲ್ ಆದ ರೇಣುಕಾಚಾರ್ಯ , ವಿಡಿಯೋ ವೈರಲ್

ಸತತವಾಗಿಅಬ್ಬರಿಸುತ್ತಿರುವ ಮಳೆರಾಯ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಸಿ ಮರಣ ಮೃದಂಗ ಬಾರಿಸುತ್ತಿದ್ದಾನೆ.ಉತ್ತರ ಕರ್ನಾಟಕ , ಕೊಡಗು ಸೇರಿದಂತೆ ರಾಜ್ಯದ ವಿವಿದೆಡೆ ಧಾರಾಕಾರ ಮಳೆ ಮುಂದುವರಿದಿದ್ದು ಮಹಾಮಳೆಗೆ ಇಡೀ ಜನರ ಜೀವನ ಅಕ್ಷರಶಃ ಕೊಚ್ಚಿಹೋಗಿದೆ.. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ರಾಜ್ಯ ಸರ್ಕಾರ, ರಾಜ್ಯದ ಜನತೆ, ಚಿತ್ರರಂಗ, ಸ್ಟಾರ್ ನಟರ ಅಭಿಮಾನಿ ಸಂಘಗಳು ಸೇರಿದಂತೆ ಅನೇಕರು ಸ್ಪಂದಿಸಿದ್ದಾರೆ

ಕಾಫಿ ನಾಡಿನಲ್ಲಿ ಮಳೆಯ ರುದ್ರ ನರ್ತನ ಮುಂದುವರೆದಿದೆ. ಮನೆ ಮತ್ತು ತೋಟದ ಮೇಲೆ ಬೃಹತ್ ಗುಡ್ಡಗಳು ಕುಸಿದ ಘಟನೆ, ಚಿಕ್ಕಮಗಳೂರಿನ ಸಿರಿವಾಸೆ ಸಮೀಪದ ಅಡಲುಗದ್ದೆ ಗ್ರಾಮದಲ್ಲಿ ನಡೆದಿದೆ.ಭಾರಿ ಮಳೆಯಿಂದಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಮತ್ತು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ 80 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ.

ಹೊನ್ನಾಳಿ ಕ್ಷೇತ್ರದ ಹಾಲಿ ಶಾಸಕ ಹಾಗೂ ಬಿಜೆಪಿ ಮುಖಂಡ ಎಂ.ಪಿ. ರೇಣುಕಾಚಾರ್ಯ ಸದಾ ಒಂದಲ್ಲ ಒಂದು ವಿಷಯಕ್ಕೆ ಟ್ರೊಲ್ ಆಗುತ್ತಾ ಸದಾ ನ್ಯೂಸ್ ನಲ್ಲಿ ಇರುತ್ತಾರೆ , ಮತ್ತೊಂದು ಅವಾಂತರ ಮಾಡಿಕೊಂಡಿದ್ದಾರೆ ರೇಣುಕಾಚಾರ್ಯ.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಬೆಳಿಮಲ್ಲೂರ್ ಗ್ರಾಮದಲ್ಲಿ ಕೃಷಿಭೂಮಿಗೆ ನೀರು ನುಗ್ಗಿದ್ದು, ಸಾಕಷ್ಟು ಬೆಳೆ ಹಾನಿಯಾಗಿದೆ. ಈ ಕುರಿತಂತೆ ವೀಕ್ಷಣೆಗೆ ಆಗಮಿಸಿದ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಸ್ಥಳೀಯರ ಬಳಿ ಇದ್ಜ ತೆಪ್ಪವನ್ನು ಹತ್ತಿದ್ದಾರೆ. ಈ ವೇಳೆ ಹುಟ್ಟನ್ನು ಕೈಗೆ ತೆಗೆದುಕೊಂಡು ತೆಪ್ಪವನ್ನು ನಡೆಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ .

 

 

ಕನಿಷ್ಠ ಮೊಣಕಿನವರೆಗೂ ನೀರಿಲ್ಲದ ಜಾಗದಲ್ಲಿ ದೋಣಿ ನಡೆಸಲು ಹೋಗಿ ನಗೆಪಾಟಲಾಗಿದ್ದಾರೆ, ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು ಪ್ರವಾಹ ಸಂತ್ರಸ್ತರನ್ನು ದೋಣಿಯಲ್ಲಿ ಹುಟ್ಟು ಹಾಕುತ್ತಾ ಕರೆತರುತ್ತಿದ್ದಾರೆ. ಇಬ್ಬರು ದೋಣಿ ಎಳೆದು ತರುತ್ತಾರೆ .

ಫೋಟೋ ಗಾಗಿ ಪೋಸ್ ಕೊಡಲು ಹೋಗಿ ಆನಂತರ ಜಾರಿ ಬೀಳುತ್ತಿದ್ದ ಶಾಸಕ ಎಂಪಿ ರೇಣುಕಾಚಾರ್ಯರನ್ನು ಸ್ಥಳೀಯರು ಬೀಳದಂತೆ ಕಾಪಾಡಿದ್ದಾರೆ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಜನ ಬಿದ್ದು ಬಿದ್ದು ನಗುತ್ತಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top