fbpx
ಸಮಾಚಾರ

“ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದ ನೀರು” ಮೊಣಕಾಲುದ್ದದ ನೀರಿನಲ್ಲಿ ತೆಪ್ಪ ಚಾಲನೆ ಮಾಡಿ ಟ್ರೋಲ್ ಆದ ರೇಣುಕಾಚಾರ್ಯ.

ತುಂಗಾಭದ್ರ ಹೊಳೆ ನೀರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದಾವಣಗೆರೆಯ ಹೊನ್ನಾಳಿಯ ಕೆಲ ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿವೆ. ಹೀಗಾಗಿ ಪರಿಸ್ಥಿತಿಯನ್ನು ಅವಲೋಕಿಸಲು ಮುಳುಗಡೆಯಾದ ಪ್ರದೇಶಕ್ಕೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿದ್ದರು. ಆದರೆ ಅವರು ಅಲ್ಲಿಗೆ ತೆರಳಿದ ರೀತಿ ಈಗ ಭಾರೀ ಸುದ್ದಿಯಾಗಿದೆ. ಮೊಣಕಾಲುದ್ದವೂ ನೀರಿಲ್ಲದ ಜಾಗದಲ್ಲಿ ತೆಪ್ಪ ನಿಲ್ಲಿಸಿಕೊಂಡು ಅದನ್ನು ಚಲಿಸಲು ರೇಣುಕಾಚಾರ್ಯ ಅವರು ಪಟ್ಟ ಹರಸಾಹಸದ ವಿಡಿಯೋ ಇದೀಗ ವೈರಲ್ ಆಗಿದೆ.

 

 

ಪ್ರವಾಹದ ನೀರಿನಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ತೆಪ್ಪ ನಡೆಸಲು ಹೋಗಿ ನಗೆಪಾಟಲಿಗೀಡಾಗಿದ್ದಾರೆ. ಹೌದು.. ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಬೆಳಿಮಲ್ಲೂರ್ ಗ್ರಾಮದಲ್ಲಿ ಕೃಷಿಭೂಮಿಗೆ ನೀರು ನುಗ್ಗಿದ್ದು, ಈ ಕುರಿತಂತೆ ವೀಕ್ಷಣೆಗೆ ಆಗಮಿಸಿದ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಸ್ಥಳೀಯರ ಬಳಿ ಇದ್ಜ ತೆಪ್ಪವನ್ನು ಹತ್ತಿದ್ದಾರೆ. ಈ ವೇಳೆ ಹುಟ್ಟನ್ನು ಕೈಗೆ ತೆಗೆದುಕೊಂಡು ತೆಪ್ಪವನ್ನು ನಡೆಸಲು ಮುಂದಾಗಿದ್ದಾರೇ.

ಜನರನ್ನು ರಕ್ಷಿಸಲು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯರವರೆ ಸ್ವತಃ ನೀರಿಗಿಳಿದಿದ್ದು ತೆಪ್ಪದಲ್ಲಿ ನಿಂತು NDRF, SDRF, ನಾವಿಕರೇ ನಾಚುವ ರೀತಿಯಲ್ಲಿ ಮೊಣಕಾಲುದ್ದದ​ ನೀರಲ್ಲಿ ರೇಣುಕಾಚಾರ್ಯ ಹುಟ್ಟು ಹಾಕುವ ಮೂಲಕ ಸಾಹಸ ಮಾಡಿದ್ದಾರೆ. ರೇಣುಕಾಚಾರ್ಯ ಎಷ್ಟೇ ಹರಸಾಹಸ ಪಟ್ಟರೂ ತೆಪ್ಪ ಮಾತ್ರ ಮುಂದಕ್ಕೆ ಹೋಗ್ತಿಲ್ಲ. ಇನ್ನೂ ರೇಣುಕಾಚಾರ್ಯರ ತೆಪ್ಪದ ಅಕ್ಕ ಪಕ್ಕದ ಜನರು ನಡೆದುಕೊಂಡು ಓಡಾಡುತ್ತಿದ್ದರೆ, ರೇಣುಕಾಚಾರ್ಯರವರು ಮಾತ್ರ ತೆಪ್ಪದಿಂದ ಕೆಳಗಿಳಿಯದೇ ಸಂತ್ರಸ್ತರ ಸಮಸ್ಯೆ ಕೇಳುವ ಬದಲಿಗೆ ಕ್ಯಾಮೆರಾಗೆ ಫುಲ್ ಫೋಸ್ ನೀಡಿದ್ದಾರೆ.

ರೇಣುಕಾಚಾರ್ಯ ಅವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ಆಹಾರವಾಗಿದೆ. ‘‘ಇದೇನು ಪ್ರವಾಹದಲ್ಲೂ ನಾಟಕವೇ ? ರೇಣುಕಾಚಾರ್ಯರೇ ಇದೆಲ್ಲವೂ ಬೇಕಿತ್ತೇ ?, ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದ ನೀರು!’’ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top