fbpx
ಸಮಾಚಾರ

ಮೊಣಕಾಲುದ್ದ ನೀರಲ್ಲಿ ತೆಪ್ಪ ಸಾಗಿಸಿದ ನಾಟಕವನ್ನೂ ಸಮರ್ಥಿಸಿಕೊಂಡ ರೇಣುಕಾಚಾರ್ಯ!

ಮೊಣಕಾಲುದ್ದದ ನೀರಿನಲ್ಲಿ ತೆಪ್ಪ ಸಾಗಿಸುವ ನಾಟಕವಾಡಿ ರಾಜ್ಯದಂತ ನಗೆಪಾಟಲಿಗೀಡಾಗಿದ್ದ ಬಿಜೆಪಿ ಶಾಸಕ ರೇಣುಕಾಚಾರ್ಯ ತಮ್ಮ ಡ್ರಾಮಾವನ್ನು ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

‘ತೆಪ್ಪಕ್ಕೆ ಹುಟ್ಟು ಹಾಕಿದನ್ನು ದೊಡ್ಡ ವಿಷಯ ಮಾಡಿದರು. ನಾನು ಪ್ರಚಾರಕ್ಕಾಗಿ ತೆಪ್ಪಕ್ಕೆ ಹುಟ್ಟು ಹಾಕಿಲ್ಲ. ಶನಿವಾರ ಕ್ಷೇತ್ರದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದರಿಂದ ಆಯಾಸವಾಗಿತ್ತು. ಜನರು ತೆಪ್ಪದಲ್ಲಿ ಕುಳಿತುಕೊಳ್ಳುವಂತೆ ತಿಳಿಸಿದರು. ಈ ವೇಳೆ ಇಳಿ ವಯಸ್ಸಿನ ಯಜಮಾನರೊಬ್ಬರು ಹುಟ್ಟು ಹಾಕುತ್ತಿದ್ದರು. ಅದನ್ನು ನೋಡಿ ಅವರಿಂದ ಹುಟ್ಟು ಪಡೆದು ಎರಡು ನಿಮಿಷ ತೆಪ್ಪವನ್ನು ನಡೆಸಿದೆ. ಅದನ್ನೇ ಮಾಧ್ಯಮಗಳು ಟ್ರೋಲ್ ಮಾಡಿದರು. ಈ ಘಟನೆಯನ್ನು ಯಾರು ಹೇಗೆ ಬಿಂಬಿಸಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಕ್ಷೇತ್ರದ ಜನತೆಗೆ ನನ್ನ ಬಗ್ಗೆ ಗೊತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

ಏನಿದು ಸಮಾಚಾರ?
ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಬೆಳಿಮಲ್ಲೂರ್ ಗ್ರಾಮದಲ್ಲಿ ಕೃಷಿಭೂಮಿಗೆ ನೀರು ನುಗ್ಗಿದ್ದು, ಈ ಕುರಿತಂತೆ ವೀಕ್ಷಣೆಗೆ ಆಗಮಿಸಿದ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಸ್ಥಳೀಯರ ಬಳಿ ಇದ್ಜ ತೆಪ್ಪವನ್ನು ಹತ್ತಿದ್ದಾರೆ. ಈ ವೇಳೆ ಹುಟ್ಟನ್ನು ಕೈಗೆ ತೆಗೆದುಕೊಂಡು ತೆಪ್ಪವನ್ನು ನಡೆಸಲು ಮುಂದಾಗಿದ್ದಾರೇ.

ಜನರನ್ನು ರಕ್ಷಿಸಲು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯರವರೆ ಸ್ವತಃ ನೀರಿಗಿಳಿದಿದ್ದು ತೆಪ್ಪದಲ್ಲಿ ನಿಂತು NDRF, SDRF, ನಾವಿಕರೇ ನಾಚುವ ರೀತಿಯಲ್ಲಿ ಮೊಣಕಾಲುದ್ದದ​ ನೀರಲ್ಲಿ ರೇಣುಕಾಚಾರ್ಯ ಹುಟ್ಟು ಹಾಕುವ ಮೂಲಕ ಸಾಹಸ ಮಾಡಿದ್ದಾರೆ. ರೇಣುಕಾಚಾರ್ಯ ಎಷ್ಟೇ ಹರಸಾಹಸ ಪಟ್ಟರೂ ತೆಪ್ಪ ಮಾತ್ರ ಮುಂದಕ್ಕೆ ಹೋಗ್ತಿಲ್ಲ. ಇನ್ನೂ ರೇಣುಕಾಚಾರ್ಯರ ತೆಪ್ಪದ ಅಕ್ಕ ಪಕ್ಕದ ಜನರು ನಡೆದುಕೊಂಡು ಓಡಾಡುತ್ತಿದ್ದರೆ, ರೇಣುಕಾಚಾರ್ಯರವರು ಮಾತ್ರ ತೆಪ್ಪದಿಂದ ಕೆಳಗಿಳಿಯದೇ ಸಂತ್ರಸ್ತರ ಸಮಸ್ಯೆ ಕೇಳುವ ಬದಲಿಗೆ ಕ್ಯಾಮೆರಾಗೆ ಫುಲ್ ಫೋಸ್ ನೀಡಿದ್ದಾರೆ.

ರೇಣುಕಾಚಾರ್ಯ ಅವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ಆಹಾರವಾಗಿದೆ. ‘‘ಇದೇನು ಪ್ರವಾಹದಲ್ಲೂ ನಾಟಕವೇ ? ರೇಣುಕಾಚಾರ್ಯರೇ ಇದೆಲ್ಲವೂ ಬೇಕಿತ್ತೇ ?, ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದ ನೀರು!’’ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top