fbpx
ಸಮಾಚಾರ

ಟ್ವಿಟ್ಟರ್ ಖಾತೆಯಲ್ಲಿ ದರ್ಶನ್ ಹೆಸರು ತೆಗೆದ ಪತ್ನಿ ವಿಜಯಲಕ್ಷ್ಮೀ!

ವಿಜಯಲಕ್ಷ್ಮೀ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ತಮ್ಮ ಹೆಸರು ಬದಲಿಸಿಕೊಂಡಿದ್ದು ವಿಜಯಲಕ್ಷ್ಮೀ ದರ್ಶನ್​ ಎಂದಿದ್ದ ಹೆಸರನ್ನು ಬದಲಿಸಿ ದರ್ಶನ್​ ಹೆಸರನ್ನು ತೆಗೆದುಹಾಕಿದ್ದಾರೆ. ಈಗ ಅವರ ಟ್ವಿಟರ್​ನಲ್ಲಿ ಬರೀ ವಿಜಯಲಕ್ಷ್ಮೀ ಎಂದಷ್ಟೇ ಹೆಸರಿದೆ. ಮೊನ್ನೆಯವರೆಗೂ ವಿಜಯಲಕ್ಷ್ಮೀ ದರ್ಶನ್​ ಎಂದೇ ಇದ್ದ ಹೆಸರು ಏಕಾಏಕಿ ಬದಲಾಗಿದೆ.

 

 

ಅಂದಹಾಗೆ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಮಧ್ಯೆ ಮತ್ತೆ ಗಲಾಟೆ ನಡೆದಿದೆ. ವಿಜಯಲಕ್ಷ್ಮಿ ಮತ್ತೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ’ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಈ ಎಲ್ಲ ವದಂತಿಗಳಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಟ್ವಿಟ್ಟರ್ ಮೂಲಕವೇ ತೆರೆ ಎಳೆದಿದ್ದಾರೆ.

‘ಹರಿದಾಡುತ್ತಿರುವ ಗಾಳಿಸುದ್ದಿಗೆ ಆಧಾರವಿಲ್ಲ’ ಎಂದು ಒಂದೇ ವಾಕ್ಯದಲ್ಲಿ ತಮ್ಮ ಸಂಸಾರದ ವಿರುದ್ಧ ಹಬ್ಬಿರುವ ಬಿರುಗಾಳಿ ಸುದ್ದಿಯನ್ನು ಅಲ್ಲಗಳೆದಿದ್ದಾರೆ. “All the rumours doing rounds are baseless…” ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top