fbpx
ಸಮಾಚಾರ

ದೆಹಲಿ-ಲಾಹೋರ್ ನಡುವಿನ ಬಸ್ ಸಂಚಾರ ರದ್ದು!

ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದನ್ನು ಖಂಡಿಸಿ ಪಾಕಿಸ್ತಾನ ಲಾಹೋರ್ – ದೆಹಲಿ ಬಸ್ ಸೇವೆ ಸ್ಥಗಿತಗೊಳಿಸಿದ ನಂತರ ಭಾರತ ಸಹ ದೆಹಲಿ – ಲಾಹೋರ್ ಬಸ್ ಸೇವೆಯನ್ನು ಸೋಮವಾರ ರದ್ದುಗೊಳಿಸಿದೆ.

ಸೋಮವಾರದಿಂದ ಬಸ್ ಸೇವೆ ರದ್ದುಗೊಳಿಸುವುದಾಗಿ ಪಾಕಿಸ್ತಾನದ ಹಿರಿಯ ಸಚಿವರು ಶನಿವಾರ ಹೇಳಿದ್ದರು. ಸೋಮವಾರ ಬೆಳಗ್ಗೆ 6 ಗಂಟೆಗೆ ದೆಹಲಿ ಸಾರಿಗೆ ಸಂಸ್ಥೆ(ಡಿಟಿಸಿ) ಬಸ್ ಲಾಹೋರ್‌ಗೆ ಹೊರಡುವುದು ನಿಗದಿಯಾಗಿತ್ತು. ಆದರೆ ಬಸ್ ಸೇವೆ ರದ್ದುಗೊಳಿಸುವುದಾಗಿ ಪಾಕ್ ನಿರ್ಧರಿಸಿದ್ದರಿಂದ ಬಸ್ ಹೊರಡಲಿಲ್ಲ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ದೆಹಲಿ- ಲಾಹೋರ್ ಬಸ್ ಸೇವೆ ಸ್ಥಗಿತಗೊಳಿಸುವ ಪಾಕ್ ನಿರ್ಧಾರದ ಹಿನ್ನೆಲೆಯಲ್ಲಿ ಆಗಸ್ಟ್ 12ರಂದು ಡಿಟಿಸಿ ಬಸ್ ಕಳುಹಿಸಿಲ್ಲ ಎಂದು ಡಿಟಿಸಿ ಹೇಳಿಕೆ ನೀಡಿದೆ.

1999 ರಲ್ಲಿ ಆಟಲ್‌ ಬಿಹಾರಿ ವಾಜ​ಪೇಯಿ ಹಾಗೂ ನವಾಜ್‌ ಶರೀಫ್‌ ಶಾಂತಿ ಒಪ್ಪಂದದ ಫಲವಾಗಿ ದೆಹಲಿ -ಲಾಹೋರ್‌ ಮಧ್ಯೆ ಬಸ್‌ ಸಂಚಾ​ರ​ ಆರಂಭ​ವಾ​ಗಿತ್ತು. 2001 ರ ಸಂಸತ್‌ ದಾಳಿ ಬಳಿಕ ಸ್ಥಗಿ​ತ​ವಾ​ಗಿದ್ದ ಈ ಸೇವೆಯನ್ನು ಮತ್ತೆ 2003 ಜುಲೈ​ನಲ್ಲಿ ಪುನ​ರಾ​ರಂಭಿ​ಸ​ಲಾ​ಗಿ​ತ್ತು. ಪುಲ್ವಾಮ ದಾಳಿ ಸಂದ​ರ್ಭ ಎರಡೂ ರಾಷ್ಟ್ರ​ಗ​ಳ ನಡು​ವಿನ ಸಂಬಂಧ ವಿಷ​ಮ​ವಾ​ಗಿ​ದ್ದರೂ ಬಸ್‌ ಸೇವೆಗೆ ಯಾವುದೇ ತೊಂದರೆ ಉಂಟಾ​ಗಿ​ರ​ಲಿ​ಲ್ಲ. ವಾರದ ಏಳೂ ದಿನವೂ ಈ ಬಸ್‌ ದೆಹಲಿ ಹಾಗೂ ಲಾಹೋರ್‌ ಮಧ್ಯೆ ಚಲಿ​ಸು​ತ್ತಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top