fbpx
ಸಮಾಚಾರ

ಅಮ್ಮನಾಗುವ ಸಂಭ್ರಮದಲ್ಲಿರುವ ‘ಪುಟ್ಟಗೌರಿ’ ನಟಿಯ ಸೀಮಂತ ಕಾರ್ಯಕ್ರಮ.

ಕಿರುತೆರೆಯ ಖ್ಯಾತ ನಟಿ ನಯನಾ ಕೆ.ಎಂ ಈಗ ಅಮ್ಮಯಾಗುತ್ತಿರುವ ಸಂತಸದಲ್ಲಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಯನಾ ಸದ್ಯ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡು, ತಾಯಿಯಾಗುತ್ತಿರುವ ಖುಷಿಯನ್ನು ಅನುಭವಿಸುತ್ತಿದ್ದಾರೆ.

ಇತ್ತೀಚಿಗಷ್ಟೇ ನಯನ ಅವರಿಗೆ ಸೀಮಂತ ಕಾರ್ಯ ಕೂಡ ನೆರವೇರಿದ್ದು ಚೆಂದದ ಫೋಟೋಶೂಟ್ ಅನ್ನು ಕೂಡ ಮಾಡಿಸಿಕೊಂಡಿದ್ದಾರೆ. ನಯನ ಅವರ ಬೇಬಿ ಬಂಪ್ ಮತ್ತು ಸೀಮಂತ ಕಾರ್ಯಕ್ರಮದ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಅಂದಾಹಾಗೆ ನಯನಾ ಕೆ ಎಂ ‘ಚಿಕ್ಕಮ್ಮ’ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ‘ಮನೆದೇವ್ರು’ ಸೀರಿಯಲ್ ಬಿಗ್ ಬ್ರೇಕ್ ಕೊಟ್ಟಿತು. ಪುಟ್ಟಗೌರಿ, ವಸುದೈವ ಕುಟುಂಬ, ಕನಕ, ಕರ್ಪೂರದ ಬೊಂಬೆ, ವಾರಸ್ದಾರ ಹಾಗೂ ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ಮಿಂಚಿದ್ದಾರೆ. ಖಳ ನಟಿಯಾಗಿಯೇ ಕಿರುತೆರೆಯಲ್ಲಿ ಹೆಚ್ಚು ಮಿಂಚಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top