fbpx
ಸಮಾಚಾರ

“ನಿಜವಾದ ಗಂಡಸು ಎಂದು ತೋರಿಸಲು ಕತ್ತಲಾಗಬೇಕಿಲ್ಲ” ಸುದೀಪ್ ಹೀಗೆ ಟ್ವೀಟ್ ಮಾಡಿದ್ದೂ ಏಕೆ?

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಮಾತುಕತೆ ನಡೆಸುತ್ತಿರುವ ಸುದೀಪ್ ಬಹಳ ಅರ್ಥಗರ್ಭಿತವಾದ ವಾಕ್ಯವನ್ನು ಟ್ವೀಟ್ ಮಾಡಿದ್ದಾರೆ. “ನಿಜವಾದ ಗಂಡಸು ಎಂದು ಪ್ರೂವ್ ಮಾಡಲು ಮದ್ಯ ಬೇಕಿಲ್ಲ. ಸೂರ್ಯ ಮುಳುಗುವುದು ಬೇಕಾಗಿಲ್ಲ” ಎಂದು ಬರೆದಿರುವ ಸಾಲನ್ನು ನಾನು ಓದಿದೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

 

 

ಅಷ್ಟೇ ಅಲ್ಲ, ‘ಯಾವುದೋ ಒಂದು ವಿಷಯವನ್ನು ಸಾಬೀತು ಮಾಡುವ ಉದ್ದೇಶದಿಂದ ನಾನು ಹೋರಾಡೋಲ್ಲ. ಆದರೆ, ವಿರೋಧಿಯೊಬ್ಬ ಹೋರಾಟಕ್ಕೆ ಅರ್ಹನೆಂದೆನಿಸಿದರೆ ಮಾತ್ರ ಅಖಾಡಕ್ಕೆ ಇಳಿಯುವೆ…’ ಎಂಬ ಕೋಟ್ ಇರುವ ಫೋಟೋವನ್ನೂ ಟ್ವೀಟ್ ಮಾಡಿದ್ದಾರೆ.

ಪೈಲ್ವಾನ್​ ಚಿತ್ರದ ಬಿಡುಗಡೆಗೂ ಮುನ್ನ ನಟ ಕಿಚ್ಚ ಮಾಡಿರುವ ಟ್ವೀಟ್​ ವೈರಲ್​ ಆಗಿದ್ದು, ಅಭಿಮಾನಿಗಳಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇನ್ನೊಂಡೆದೆ ಕಿಚ್ಚನ ‘ಪೈಲ್ವಾನ್​‘ ಕುಸ್ತಿ ಯಾರ ಮೇಲೆ? ಎಂಬ ಪ್ರಶ್ನೆ ಮೂಡಿದೆ. ಇನ್ನು ಆ ಡೈಲಾಗ್ ‘ಪೈಲ್ವಾನ್’ ಚಿತ್ರದ್ದು ಎಂದೂ ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top