ಸರ್ಕಾರಕ್ಕೆ ನೋಟ್ ಪ್ರಿಂಟ್ ಮಾಡೋಕೆ ಆಗಲ್ಲ, ಸ್ವಲ್ಪ ಎಚ್ಚರಿಕೆಯಿಂದ ಅಂಕಿ ಅಂಶ ಕೊಡಿ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೀಡಾಗಿದೆ.
ಅತಿವೃಷ್ಟಿ ನಷ್ಟದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ‘ಬೆಳೆಹಾನಿಯ ಅಂದಾಜು ಸಿದ್ಧಪಡಿಸಲು ಅವಸರ ಬೇಡ. ಕೇಳಿದಷ್ಟು ಹಣ ನೀಡಲು ಸರ್ಕಾರದಲ್ಲಿ ನೋಟ್ ಪ್ರಿಂಟ್ ಮಾಡುವ ಯಂತ್ರವಿಲ್ಲ. 8ರಿಂದ 10 ದಿನಗಳು ಸಮಯ ತೆಗೆದುಕೊಂಡು ನಿಖರ ವರದಿ ನೀಡಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮನೆ-ಆಸ್ತಿ ಕಳೆದುಕೊಂಡು ನಿರಾಶ್ರಿತರಾದ ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸಲು ಬೇಡಿದರೆ, @BSYBJP ಅವರು “ಹಣ ನೀಡಲು ಸರ್ಕಾರದಲ್ಲಿ ನೋಟ್ ಪ್ರಿಂಟ್ ಮಾಡುವ ಯಂತ್ರವಿಲ್ಲ” ಎಂದಿದ್ದಾರೆ.
ಹಾಗಾದರೆ, ಅನರ್ಹ ಅತೃಪ್ತ ಶಾಸಕರಿಗೆ ವಿಶೇಷ ವಿಮಾನ, ಸ್ಟಾರ್ ಹೋಟೆಲ್ ವಾಸ್ತವ್ಯ ಕಲ್ಪಿಸಲು ನೋಟ್ ಪ್ರಿಂಟ್ ಮಾಡಿಕೊಟ್ಟವರು ಯಾರು? pic.twitter.com/JivYBIJR4v
— Janata Dal Secular (@JanataDal_S) August 14, 2019
ಪ್ರವಾಹ ಹಾನಿ ಕುರಿತು ಕೇಳಿದಷ್ಟು ಹಣ ಕೊಡಲು ಇಲ್ಲಿ ನೋಟ್ ಪ್ರಿಂಟ್ ಮಾಡಲಾಗುವುದಿಲ್ಲ ಎಂಬ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಕಿಡಿಕಾರಿರುವ ಜೆಡಿಎಸ್, ಅನರ್ಹ ಶಾಸಕರಿಗೆ ವಿಶೇಷ ವಿಮಾನ, ಸ್ಟಾರ್ ಹೋಟೆಲ್ ವಾಸ್ತವ್ಯ ಕಲ್ಪಿಸಲು ನೋಟ್ ಪ್ರಿಂಟ್ ಮಾಡಿಕೊಟ್ಟವರು ಯಾರು? ಎಂದು ಪ್ರಶ್ನಿಸಿದೆ.
ಇನ್ನು ಕಾಂಗ್ರೆಸ್ ಕೂಡ ಸಿಎಂ ಹೇಳಿಕೆಗೆ ಖಂಡಿಸಿದ್ದು, ಏಕಾಧಿಪತ್ಯದ ಆಡಳಿತ ನಡೆಸುತ್ತಿರುವ ಬಿಎಸ್ ಯಡಿಯೂರಪ್ಪ ಸರ್ವಾಧಿಕಾರಿಯಂತೆ ವರ್ತಿಸುವುದು ಸರಿಯಲ್ಲ. ಸಂತ್ರಸ್ತರಿಗೆ ನೀಡುವ ನೆರೆ ಪರಿಹಾರ ಜನರ ತೆರಿಗೆ ಹಣ ಹೊರತು. ನಿಮ್ಮ ಸ್ವಂತ ದುಡ್ಡಲ್ಲ ಎಂದು ಟೀಕಿಸಿದ್ದಾರೆ.
.@CMofKarnataka @BSYBJP does not have printing machine to provide relief funds for those people who have lost their livelihood in natural disaster.
But,
He has Akshaya Patra to fund those MLAs' whose greed far exceeds the imagination of the common man.https://t.co/0MWwbKmWxl
— Siddaramaiah (@siddaramaiah) August 14, 2019
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
