fbpx
ಸಮಾಚಾರ

ಮಾಜಿ ಸಂಸದೆ ರಮ್ಯಾಗೆ ಕೂಡಿ ಬಂತು ಕಂಕಣ ಭಾಗ್ಯ! ವರ ಯಾರು ಗೊತ್ತೇ?

ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆ, ಸ್ಯಾಂಡಲ್ ವುಡ್ ಕ್ವೀನ್ ಅಂತಲೇ ಕರೆಸಿಕೊಂಡು ಬೇಡಿಕೆ ಇರುವಾಗಲೇ ರಾಜಕಾರಣದಲ್ಲಿ ಕಳೆದು ಹೋದವರು ನಟಿ ರಮ್ಯಾ. ಆದರೆ ಖುದ್ದು ಕಾಂಗ್ರೆಸ್ ಕಾರ್ಯಕರ್ತರಿಗೇ ಆಕೆಯ ರಾಜಕೀಯ ನಡೆ ಏನು ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣಗಳಿಲ್ಲ.. ಆ ವಿಷ್ಯ ಹಾಗಿರಲಿ, ಈಗ ರಾಜಕೀಯ ಹೊರತುಪಡಿಸಿದರೆ ರಮ್ಯಾ ಹೆಚ್ಚಾಗಿ ಸುದ್ದಿಯಾಗುತ್ತಿರೋದು ಮದುವೆ ವಿಚಾರವಾಗಿ ಮಾತ್ರ., ಈಕೆಯ ಮದುವೆ ವಿಚಾರವಾಗಿ ಬಹಳ ಹಿಂದಿನಿಂದಲೂ ಪುಂಖಾನುಪುಂಖವಾಗಿ ನಾನಾ ರೀತಿಯ ಸುದ್ದಿ ಹರಿದಾಡುತ್ತಲೇ ಇತ್ತು ಹೀಗಿರೋವಾಗಲೇ ಈಗ ಮತ್ತೊಮ್ಮೆ ರಮ್ಯಾ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ.

 


 

ಸುದ್ದಿ ವಾಹಿನಿಯೊಂದರ ವರದಿಯ ಪ್ರಕಾರ ನಟಿ ರಮ್ಯಾ ವಿವಾಹ ನಿಶ್ಚಯವಾಗಿದ್ದು, ವಿದೇಶಿ ಹುಡುಗನನ್ನು ವರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪೋರ್ಚುಗಲ್ ಗೆಳೆಯ ರಾಫೆಲ್ ಜೊತೆ ರಮ್ಯಾ ವಿವಾಹ ಶೀಘ್ರವೇ ನಡೆಯಲಿದೆ. ರಮ್ಯ ಇತ್ತೀಚಿನ ದಿನಗಳಲ್ಲಿ ಸಕ್ರಿಯ ರಾಜಕಾರಣದಿಂದಲೂ ಅಂತರ ಕಾಯ್ದುಕೊಂಡಿದ್ದರು.. ಏಳೆಂಟು ವರ್ಷಗಳಿಂದ ರಿಲೇಷನ್​ಶಿಪ್​ನಲ್ಲಿರುವ ಪೋರ್ಚುಗಲ್ ದೇಶದ ರಾಫೆಲ್​- ರಮ್ಯಾ ಸದ್ಯದಲ್ಲೇ ಹಸೆಮಣೆಯೇರುವುದು ಪಕ್ಕಾ ಎನ್ನಲಾಗಿದೆ.

ಕಳೆದ ವರ್ಷವೇ ಈ ಬಗ್ಗೆ ಸುಳಿವು ನೀಡಿದ್ದ ರಮ್ಯಾ ಅವರ ತಾಯಿ ರಂಜಿತಾ, ಮುಂದಿನ ವರ್ಷ ರಮ್ಯಾ ಮದುವೆಯಾಗುವುದಾಗಿ ತಿಳಿಸಿದ್ದರು. ಇದೀಗ ಮದುವೆಯ ಸಿದ್ಧತೆಗಳು ನಡೆದಿದ್ದು, ದುಬೈನಲ್ಲಿ ರಾಫೆಲ್​ ಅವರನ್ನು ರಮ್ಯಾ ವರಿಸಲು ರೆಡಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top