fbpx
ಸಮಾಚಾರ

ಉತ್ತರ ಕರ್ನಾಟಕ ಪ್ರವಾಹ :ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಅಂದ್ರು ರಾಘಣ್ಣ.

ಉತ್ತರ ಕರ್ನಾಟಕದಲ್ಲಿ ಆಗಿರುವ ಪ್ರವಾಹದಿಂದ ನಟ ರಾಘವೇಂದ್ರ ರಾಜ್ ಕುಮಾರ್ ಮರುಗಿದ್ದಾರೆ. ಹೀಗಾಗಿ, ಈ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದೆ ಇರಲು ನಿರ್ಧಾರ ಮಾಡಿದ್ದಾರೆ. ಆಗಸ್ಟ್ 15 ರಾಘವೇಂದ್ರ ರಾಜ್ ಕುಮಾರ್ ಹುಟ್ಟಿದ ದಿನ. ಪ್ರತಿ ವರ್ಷ ಕೂಡ ಅಭಿಮಾನಿಗಳ ಜೊತೆಗೆ ಬರ್ತ್ ಡೇ ಆಚರಣೆ ಮಾಡುತ್ತಿದ್ದ ರಾಘಣ್ಣ ಈ ಬಾರಿ ಇದಕ್ಕೆ ಬ್ರೇಕ್ ಹಾಕಿದ್ದಾರೆ.

 

 

ಮಹಾ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಭಾರೀ ಹಾನಿಯಾಗಿದೆ. ಇಂತಹ ಸಮಯದಲ್ಲಿ ಕೇಕ್ ಕತ್ತರಿಸಿ, ಹೂವಿನ ಹಾರ ಹಾಕಿಕೊಂಡು, ಪಟಾಕಿ ಹೊಡೆದು ಸಂಭ್ರಮಿಸುವುದು ಸಂತ್ರಸ್ತರಿಗೆ ನೋವು ತರುತ್ತದೆ. ಅಷ್ಟೇ ಯಾಕೆ ನನಗೂ ಭಾರೀ ನೋವು ಉಂಟು ಮಾಡುತ್ತದೆ. ಇಂತಹ ಸಮಯದಲ್ಲಿ ನಾವು ಸಂತ್ರಸ್ತರ ಜೊತೆಗೆ ಇರಬೇಕಿದೆ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ನೀವು ಏನೇ ತಂದರೂ ಅದನ್ನು ಸಂತ್ರಸ್ತರಿಗೆ ತಲುಪಿಸುವ ಕೆಲಸವನ್ನು ಮಾಡುತ್ತೇವೆ. ನನ್ನ ತಂದೆ ಇದ್ದಿದ್ದರೆ ಇಂತಹ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಣೆ ಮಾಡುತ್ತಿರಲಿಲ್ಲ. ಸಂತ್ರಸ್ತರಲ್ಲಿ ನಮ್ಮ ಅಭಿಮಾನಿಗಳು ಕೂಡ ಇದ್ದಾರೆ. ಅವರೊಂದಿಗೆ ನಾವು ಇದ್ದೇವೆ ಎಂಬ ಪ್ರೀತಿಯನ್ನು ತೋರಿಸಬೇಕಿದೆ ಎಂದು ರಾಘಣ್ಣ ಮಾನವೀಯತೆ ಮೆರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top