fbpx
ಸಮಾಚಾರ

ಕೋಮಲ್​ ಮೇಲೆ ಹಲ್ಲೆ ಪ್ರಕರಣ: “ಸುದೀಪ್‌ ಹೆಸರನ್ನು ಎಳೆದು ತಂದರೆ ಕ್ಷಮೆಯಿಲ್ಲ” ಜಗ್ಗೇಶ್‌ ಗುಡುಗು.

ನಟ ಕೋಮಲ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಕರುನಾಡ ಚಕ್ರವರ್ತಿ, ಕಿಚ್ಚ ಸುದೀಪ್ ಹೆಸರು ತಳುಕು ಹಾಕಲಾಗಿದ್ದು ಇದಕ್ಕೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಾಬಂಧು ಸುದೀಪ್ ಹೆಸರು ಯಾರಾದರೂ ಈ ವಿಷಯದಲ್ಲಿ ಎಳೆದು ತಂದರೆ ಕ್ಷಮೆಯಿಲ್ಲಾ! ಸುದೀಪ್ ನನ್ನ ಒಡಹುಟ್ಟದಿದ್ದರು ನನ್ನ ಹೆಮ್ಮೆಯ ತಮ್ಮನಂತೆ.. ಅವನು ನನ್ನ ಮೇಲೆ ಇಟ್ಟಿರುವ ಪ್ರೀತಿ ಬೆಲೆಕಟ್ಟಲಾಗದ್ದು..ಬರೆಯುವ ಆಸೆ ಇದ್ದರೆ ಉತ್ತಮ ಸಾಮಾಜಿಕ ವಿಷಯ ಬರೆಯಿರಿ! ಕೆಡಿಸದಿರಿ ಮನಗಳ! ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಸುದೀಪ್ ಕೆಂಪೇಗೌಡ ಸಿನಿಮಾ ಮಾಡಿದ್ದರು. ಕೆಂಪೇಗೌಡ -2 ನ್ನು ಅವರೇ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ನಿರ್ಮಾಪಕ ಶಂಕರ್ ಗೌಡ – ಸುದೀಪ್ ನಡುವಿನ ಮುನಿಸಿನಿಂದ ಅದು ಸಾಧ್ಯವಾಗಲಿಲ್ಲ. ಕೋಮಲ್ ಕೇಂಪೇಗೌಡ-2 ನ್ನು ಮಾಡಿದರು. ಇದೇ ಮುನಿಸಿನಿಂದ ಸುದೀಪ್, ಕೋಮಲ್ ಮೇಲೆ ಹಲ್ಲೆ ಮಾಡಿಸಿದ್ದಾರೆಂದು ಕೆಲಸಿಲ್ಲದ ಕಿಡಿಗೇಡಿಗಳು ಲಿಂಕ್ ಮಾಡುತ್ತಿದ್ದಾರೆ.

ಏನಿದು ಘಟನೆ?
ನಟ ಕೋಮಲ್ ಮೇಲೆ ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್​​​ ಬಳಿ ನೆನ್ನೆ ಸಂಜೆ ಹಲ್ಲೆ ನಡೆದಿತ್ತು. ಮಗಳನ್ನು ಟ್ಯೂಶನ್​ ಕ್ಲಾಸ್​ಗೆ ಬಿಟ್ಟು ಬರುತ್ತಿರುವ ವೇಳೆ ಈ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಲಾಗಿದೆ. ಸದ್ಯ ಕೋಮಲ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಲ್ಲೆ ಮಾಡಿರುವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಗಲಾಟೆಯಲ್ಲಿ ಕೋಮಲ್ ಅವರ ಮುಖ ಹಾಗೂ ಮೂಗಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top