fbpx
ಸಮಾಚಾರ

ಕರ್ನಾಟಕ ಪ್ರವಾಹಕ್ಕೆ ಮರುಗಿದ ತಲುಗು ನಟ- ಸಂತ್ರಸ್ತರ ಪರಿಹಾರಕ್ಕಾಗಿ ಉದಾರ ದೇಣಿಗೆ ಕೊಟ್ಟ ಸಂಪೂರ್ಣೇಶ್ ಬಾಬು.

ವಿಪರೀತ ಮಳೆ ಮತ್ತು ಭೀಕರ ಭೂಕುಸಿತದಿಂದಾಗಿ ಕಣ್ಣ ಎದುರೇ ಕುಸಿದು ಹೋದ ಉತ್ತರಕ ಕರ್ನಾಟಕ ಜನರ ಕಷ್ಟದ ಬಗ್ಗೆ ಎಂಥವರಿಗಾದರೂ ಕರುಣೆ ಹುಟ್ಟುತ್ತದೆ. ಇಡೀ ಕರ್ನಾಟಕದ ಎಲ್ಲ ಕಡೆಗಳಿಂದಲೂ ಉತ್ತರಕ ಕರ್ನಾಟಕ ಸಂತ್ರಸ್ತರಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಕನ್ನಡ ಚಿತ್ರರಂಗ ಕೂಡ ಸ್ಪಂದಿಸಿದ್ದು ಅನೇಕ ಕಲಾವಿದರು ಆಹಾರ,ಹಣ ಮತ್ತು ಅಗತ್ಯ ವಸ್ತುಗಳನ್ನು ನೀಡಿ ಒಂದೊಂದು ರೀತಿಯಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ.

ಈಗ ಉತ್ತರ ಕರ್ನಾಟಕ ಸ್ಥಿತಿ ಕಂಡು ತೆಲುಗು ನಟರೊಬ್ಬರು ಮರುಗಿದ್ದಾರೆ. ಸಂಪೂರ್ಣೇಶ್ ಬಾಬು ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದಾರೆ. ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗಾಗಿ ಸಂಪೂರ್ಣೇಶ್ ಅವರು 2 ಲಕ್ಷ ರೂ ನೆರವು ನೀಡಿದ್ದಾರೆ.. ಈ ಬಗ್ಗೆ ಸ್ವತಃ ಸಂಪೂರ್ಣೇಶ್ ಅವರೇ ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 


 

ಉತ್ತರ ಕರ್ನಾಟಕದ ಪ್ರವಾಹದ ಸುದ್ಧಿ ನನ್ನ ಮನ ಕಲಕಿಬಿಟ್ಟಿತು, ಕನ್ನಡದ ಜನ ತೆಲುಗು ಚಿತ್ರಗಳನ್ನು ದಶಾಬ್ದಗಳ ಕಾಲದಿಂದ ಆದರಿಸುತ್ತಾ ಬಂದಿದ್ದಾರೆ. ನನ್ನನ್ನು ಸಹ “ಹೃದಯಕಾಲೇಯಂ” ಚಿತ್ರದಿಂದ ಬಹಳ ಮೆಚ್ಚಿದ್ದೀರಿ, ಅದಕ್ಕೆ ನಾನು ಚಿರ ಋಣಿ, ಇತ್ತೀಚಿನ ಪ್ರವಾಹದ ಫೋಟೋಗಳನ್ನ ಮತ್ತು ಆ ಪ್ರಾಂತದ ಜನರ ನೋವನ್ನು ನೋಡಿ ನನಗೆ ತುಂಬಾ ದುಃಖ ಉಂಟಾಗಿದೆ, ಈಗ ತೆಲುಗು ಚಿತ್ರ್ಯೋದ್ಯಮ ಕನ್ನಡದ ಪ್ರಜೆಗಳಿಗೆ ಸಹಾಯ ಮಾಡುವ ಸಮಯ ಬಂದಿದೆ, ನನ್ನ ಅಳಿಲುಸೇವೆಯಾಗಿ 2,00,000 ರೂ ನೆರವು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ಜೈ ಹಿಂದ್” ಎಂದು ಸಂಪೂರೇಶ್ ಬಾಬು ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top