fbpx
ಸಮಾಚಾರ

ಗ್ರಾಫಿಕ್ಸ್ ಪ್ರವಾಹದಲ್ಲಿ ಮುಳುಗಿದ ಸುದ್ದಿವಾಚಕಿ -ಟ್ರೋಲಿಗರಿಗೆ ಆಹಾರವಾದ ಬಿಟಿವಿ.

ಬ್ರೇಕಿಂಗ್ ನ್ಯೂಸ್ ಹಸಿವಿಗೆ ಬಿದ್ದಿರುವ ಕನ್ನಡದ ಬಹುತೇಕ ಸುದ್ದಿ ವಾಹಿನಿಗಳು ಸಮಾಜದಲ್ಲಿ ಯಾವುದೇ ವಿದ್ಯಮಾನಗಳು ನಡೆದರೂ ಅಥವಾ ಯಾವುದೇ ವಿಷಯಗಳು ವೈರಲ್ ಆದರೂ ಅವಕ್ಕೆ ತಮಗೆ ಬೇಕಾದ ರೀತಿಯಲ್ಲಿ ಸುಣ್ಣ ಬಣ್ಣ ಬಳಿದು ಸುಳ್ಳು ಸುದ್ದಿಯನ್ನು ಬಿತ್ತರಿಸುವುದರಲ್ಲಿ ಮಗ್ನವಾಗಿವೆ . ಸುದ್ದಿಬಾಕತನ ಹುಚ್ಚಿಗೆ ಬಿದ್ದಿರುವ ಇವರುಗಳು ತಮ್ಮ ವೃತ್ತಿಧರ್ಮವನ್ನು ಮರೆತು, ನೋಡುಗರಿಗೆ ಅಸಹ್ಯ ಹುಟ್ಟುವ ರೀತಿಯಲ್ಲಿ ಪೈಪೋಟಿಗಿಳಿದಿವೆ.. ಇದೀಗ ಇಂಥದೇ ಮನಸ್ಥಿತಿಯ ನ್ಯೂಸ್ ಚಾನೆಲ್ ವೊಂದು ಜನರ ಕೋಪಕ್ಕೆ ಕಾರಣವಾಗಿದೆ.

 

 

ವಿಪರೀತ ಮಳೆ ಮತ್ತು ಭೀಕರ ಭೂಕುಸಿತದಿಂದಾಗಿ ಕಣ್ಣ ಎದುರೇ ಕುಸಿದು ಹೋದ ಉತ್ತರಕ ಕರ್ನಾಟಕ ಜನರ ಕಷ್ಟದ ಬಗ್ಗೆ ಎಂಥವರಿಗಾದರೂ ಕರುಣೆ ಹುಟ್ಟುತ್ತದೆ. ಮಳೆ ಪ್ರಮಾಣ ತಗ್ಗಿದ್ದರೂ ಪ್ರವಾಹದ ಪ್ರಭಾವ ಹಾಗೇ ಇದೆ. ಸಂತ್ರಸ್ತರ ನೋವಿಗೆ ಸ್ಪಂದಿಸಬೇಕಾದ ಸಕಾಲ ಇದಾಗಿದ್ದು, ರಾಜ್ಯಾದ್ಯಂತ ಜನರು ಉತ್ತರ ಕರ್ನಾಟಕದ ನೆರವಿಗೆ ಆಗುತ್ತಿದ್ದಾರೆ. ಆದರೆ ಉತ್ತರ ಪ್ರವಾಹದ ವಿಚಾರದಲ್ಲೂ ಬಿ ಟಿವಿ ತನ್ನ ಹೊಸಲು ಬುದ್ದಿಯನ್ನು ತೋರಿಸಿದೆ..

ಗ್ರಾಫ್ಹಿಕ್ಸ್ ಮೂಲಕ ಪ್ರವಾಹವಾಗುತ್ತಿರುವ ಸನ್ನಿವೇಶವನ್ನು ಸೃಷ್ಟಿಸಿ ಸುದ್ದಿ ವಾಚಕರು ಪ್ರವಾಹದಲ್ಲಿ ನಿಂತು ಸುದ್ದಿ ಹೇಳುತ್ತಿರುವಂತೆ ಎಡಿಟ್ ಮಾಡಿ ಪ್ರಸಾರ ಮಾಡಿದ್ದಾರೆ.. ನಿರೂಪಕಿ ಪ್ರವಾಹದಲ್ಲಿ ಕೊಚ್ಚಿಕೊಂಡು ಮುಳುಗಿ ಹೋಗುತ್ತಿರುವ ಹಾಗೆ ಜನರಿಗೆ ತೋರಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದ್ದು ಟ್ರಾಲಿಗರ ಪಾಲಿಗೆ ಆಹಾರವಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು btv ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top