fbpx
ಸಮಾಚಾರ

ರಮ್ಯಾ ಮದುವೆ ವಿಚಾರದ ಬಗ್ಗೆ ಅಚ್ಚರಿಯ ಟ್ವೀಟ್ ಮಾಡಿದ ಜಗ್ಗೇಶ್.

ಮಾಜಿ ಸಂಸದೆ, ನಟಿ ರಮ್ಯಾರನ್ನು ಕಂಡರೆ ಸದಾ ಉರಿದು ಬೀಳುತ್ತಿದ್ದ ನಟ ಜಗ್ಗೇಶ್ ವಿಚಾರವಾಗಿ ಮಾಡಿರುವ ಟ್ವೀಟ್ ಸದ್ಯ ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ ಈ ಟ್ವೀಟ್ ನಲ್ಲಿ ಜಗ್ಗೇಶ್ ಅವರು ರಮ್ಯಾ ಅವರಿಗೆ ಶುಭಾಶಯ ತಿಳಿಸಿ ಹಾರೈಸಿದ್ದಾರೆ. ರಮ್ಯಾ ಬಗ್ಗೆ ಯಾವಾಗಲೂ ಕೊಂಕು ಮಾತನಾಡುತ್ತಿದ್ದ ಜಗ್ಗೇಶ್ ಈಗ ಶುಭಾಶಯ ತಿಳಿಸಿದನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

 


 

ರಮ್ಯಾ ಮದುವೆಯಾಗಲಿದ್ದಾರೆ ಎಂಬ ಸುದ್ದಿಯನ್ನು ಖಾಸಗಿ ಪತ್ರಿಕೆಯೊಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿತ್ತು ಅದನ್ನು ರೀ ಟ್ವೀಟ್ ಮಾಡಿರುವ ಜಗ್ಗೇಶ್ “ಶುಭಮಸ್ತು..ಧೀರ್ಘಸುಮಂಗಲಿಯಾಗಿ ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ..God bless..” ಎಂದು ಬರೆಯುವ ಮೂಲಕ ರಮ್ಯಾ ಅವರಿಗೆ ಶುಭಾಶಯ ತಿಳಿಸಿದ್ದಾರೆ.. ಜಗ್ಗೇಶ್ ಅವರ ಟ್ವೀಟ್ ಅನ್ನು ನೋಡಿದ ನೆಟ್ಟಿಗರು ರಮ್ಯಾ ಮತ್ತು ಜಗ್ಗೇಶ್ ಹಿಂದಿನ ಮನಸ್ತಾಪ ಮರೆತು ಮತ್ತೆ ಸ್ನೇಹಿತರಾಗುತ್ತೀದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸುದ್ದಿ ವಾಹಿನಿಯೊಂದರ ವರದಿಯ ಪ್ರಕಾರ ನಟಿ ರಮ್ಯಾ ವಿವಾಹ ನಿಶ್ಚಯವಾಗಿದ್ದು, ವಿದೇಶಿ ಹುಡುಗನನ್ನು ವರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪೋರ್ಚುಗಲ್ ಗೆಳೆಯ ರಾಫೆಲ್ ಜೊತೆ ರಮ್ಯಾ ವಿವಾಹ ಶೀಘ್ರವೇ ನಡೆಯಲಿದೆ. ರಮ್ಯ ಇತ್ತೀಚಿನ ದಿನಗಳಲ್ಲಿ ಸಕ್ರಿಯ ರಾಜಕಾರಣದಿಂದಲೂ ಅಂತರ ಕಾಯ್ದುಕೊಂಡಿದ್ದರು.. ಏಳೆಂಟು ವರ್ಷಗಳಿಂದ ರಿಲೇಷನ್​ಶಿಪ್​ನಲ್ಲಿರುವ ಪೋರ್ಚುಗಲ್ ದೇಶದ ರಾಫೆಲ್​- ರಮ್ಯಾ ಸದ್ಯದಲ್ಲೇ ಹಸೆಮಣೆಯೇರುವುದು ಪಕ್ಕಾ ಎನ್ನಲಾಗಿದೆ.

ಕಳೆದ ವರ್ಷವೇ ಈ ಬಗ್ಗೆ ಸುಳಿವು ನೀಡಿದ್ದ ರಮ್ಯಾ ಅವರ ತಾಯಿ ರಂಜಿತಾ, ಮುಂದಿನ ವರ್ಷ ರಮ್ಯಾ ಮದುವೆಯಾಗುವುದಾಗಿ ತಿಳಿಸಿದ್ದರು. ಇದೀಗ ಮದುವೆಯ ಸಿದ್ಧತೆಗಳು ನಡೆದಿದ್ದು, ದುಬೈನಲ್ಲಿ ರಾಫೆಲ್​ ಅವರನ್ನು ರಮ್ಯಾ ವರಿಸಲು ರೆಡಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top