fbpx
ಸಮಾಚಾರ

ಕೋಮಲ್ ಹೊಡೆದಾಟ ಪ್ರಕರಣ -ನಿಜಕ್ಕೂ ತಪ್ಪು ಯಾರದ್ದು?

ಮತ್ತು ಬೈಕ್ ಸವಾರ ವಿಜಯ್ ನಡುವೆ ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್​​​ ಬಳಿ ನಡು ರಸ್ತೆಯಲ್ಲೇ ಮಾರ ಮಾರಿ ನಡೆದಿತ್ತು. ಈ ಬಗ್ಗೆ ಸದ್ಯ ಕೋಮಲ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಲ್ಲೆ ಮಾಡಿರುವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಗಲಾಟೆಯಲ್ಲಿ ಕೋಮಲ್ ಅವರ ಮುಖ ಹಾಗೂ ಮೂಗಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನು ಘಟನೆ ಬಗ್ಗೆ ಪೊಲೀಸರು ಕೋಮಲ್ ಹಾಗೂ ಆರೋಪಿ ವಿಜಿ ಇಬ್ಬರ ಬಳಿಯೂ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.

 

 

ಆರೋಪಿ ವಿಜಯ್ ಹೇಳಿದ್ದೇನು?
ಕೋಮಲ್ ಕಾರಿನಲ್ಲಿ ಮಗಳನ್ನು ಟ್ಯೂಷನ್​ಗೆ ಬಿಟ್ಟು ವಾಪಸ್ ಬರುತ್ತಿದ್ದಾಗ ವಿಜಯ್ ಬೈಕ್​ಗೆ ತಾಗಿದೆ. ಆದರೆ, ಕೂಗಿದರೂ ಕಾರು ನಿಲ್ಲಿಸದೆ ಕೋಮಲ್ ಮುಂದೆ ಹೋದರು. ಹಾಗಾಗಿ ಶ್ರೀರಾಂಪುರದ ರೈಲ್ವೆ ಅಂಡರ್​ಪಾಸ್ ಬಳಿ ಕಾರನ್ನು ಅಡ್ಡಗಟ್ಟಿ ಪ್ರಶ್ನಿಸಿದೆ. ಇದರಿಂದ ಕೋಪಗೊಂಡ ಕೋಮಲ್ ಕಾರಿನಿಂದ ಇಳಿದು ಬೈದರು.. ಮಾತಿಗೆ ಮಾತು ಬೆಳೆದಾಗ ಕೋಮಲ್ ಅವರೇ ಮೊದಲು ಹಲ್ಲೆ ನಡೆಸಿದರು.. ಇದರಿಂದ ಕೋಪಬಂದು ನಾನು ಕೂಡ ಪ್ರತಿಯಾಗಿ ಕೋಮಲ್ ಮೇಲೆ ಹಲ್ಲೆ ನಡೆಸಿದೆ.” ಎಂದು ವಿಜಯ್ ಪೋಲೀಸರ ಬಳಿ ಹೇಳಿದ್ದಾನೆ ಎಂದು ಹೇಳಲಾಗಿದೆ.

ಕೋಮಲ್ ಹೇಳಿದ್ದೇನು?
‘ಅವರು(ಆರೋಪಿ ವಿಜಯ್) ಯಾರು ಎಂಬುದು ನನಗೆ ಗೊತ್ತಿಲ್ಲ. ನನ್ನ ಮಗಳನ್ನು ಟ್ಯೂಷನ್ ​ಗೆ ಬಿಟ್ಟು ವಾಪಸು ಬರುವಾಗ ಏಕಾಏಕಿ ಒಬ್ಬ ದ್ವಿಚಕ್ರ ವಾಹನದಿಂದ ಹಿಂದೆ ಬಂದು ಅಡ್ಡಗಟ್ಟಿ ಅವಾಚ್ಯ ಪದಗಳಿಂದ ನಿಂದಿಸಿದ. ಅದನ್ನು ನಾನು ಪ್ರಶ್ನಿಸಿದೆ. ಮತ್ತಷ್ಟು ಜೋರಾಗಿ ಮಾತನಾಡಿದ. ಅದನ್ನು ಕೇಳಿ ನಾನು ಕಾರಿನಿಂದ ಕೆಳಗೆ ಇಳಿದೆ. ಇಳಿದ ತಕ್ಷಣ ನನ್ನ ಮೇಲೆ ಹಲ್ಲೆ ಮಾಡಲು ಶುರು ಮಾಡಿದರು. ಆಗ ಪಕ್ಕದಲ್ಲಿದ್ದ ಜನ ಅವರನ್ನು ಹಿಡಿದುಕೊಂಡರು. ಅಲ್ಲೇ ಪೊಲೀಸರು ಇದ್ದರು. ಬಳಿಕ ಠಾಣೆಗೆ ಕರೆದು ತಂದರು ಎಂದು ಕೋಮಲ್ ಹೇಳಿದ್ದಾರೆ.

ಇಬ್ಬರ ಹೇಳಿಕೆ ಕೇಳಿದ ಮೇಲೆ ಮತ್ತು ವೈರಲ್ ಆಗಿರುವ ಕೋಮಲ್ ಮತ್ತು ವಿಜಯ್ ಅವರ ಹೊಡೆದಾಟದ ವಿಡಿಯೋ ನೋಡಿದ ನಂತರ ಮೇಲ್ನೋಟಕ್ಕೆ ತಪ್ಪು ಯಾರದ್ದು ಎಂಬುದು ಅವರವರ ದೃಷ್ಟಿಕೋನಕ್ಕೆ ಬಿಟ್ಟಿದ್ದು.. ಇನ್ನು ಪೊಲೀಸರು ಸೂಕ್ತವಾಗಿ ತನಿಖೆ ನಡೆಸಿ ತಪ್ಪು ಯಾರದ್ದೇ ಆದರೂ ಮುಲಾಜಿಲ್ಲದೆ ಒದ್ದು ಒಳಕ್ಕೆ ಹಾಕಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ನಿಮ್ಮ ದೃಷ್ಟಿಕೋನದಲ್ಲಿ ಈ ಇಬ್ಬರಲ್ಲಿ ಯಾರದ್ದು ತಪ್ಪು ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top