fbpx
ಸಮಾಚಾರ

ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ನೆರವು ನೀಡಿದ ನಟ ಪುನೀತ್‍

ವಿಪರೀತ ಮಳೆ ಮತ್ತು ಭೀಕರ ಭೂಕುಸಿತದಿಂದಾಗಿ ಕಣ್ಣ ಎದುರೇ ಕುಸಿದು ಹೋದ ಉತ್ತರಕ ಕರ್ನಾಟಕ ಜನರ ಕಷ್ಟದ ಬಗ್ಗೆ ಎಂಥವರಿಗಾದರೂ ಕರುಣೆ ಹುಟ್ಟುತ್ತದೆ. ಇಡೀ ಕರ್ನಾಟಕದ ಎಲ್ಲ ಕಡೆಗಳಿಂದಲೂ ಉತ್ತರಕ ಕರ್ನಾಟಕ ಸಂತ್ರಸ್ತರಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಕನ್ನಡ ಚಿತ್ರರಂಗ ಕೂಡ ಸ್ಪಂದಿಸಿದ್ದು ಅನೇಕ ಕಲಾವಿದರು ಆಹಾರ,ಹಣ ಮತ್ತು ಅಗತ್ಯ ವಸ್ತುಗಳನ್ನು ನೀಡಿ ಒಂದೊಂದು ರೀತಿಯಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಉತ್ತರ ಕರ್ನಾಟಕ ಸಂತ್ರಸ್ತರಿಗಾಗಿ ಸಹಾಯ ಹಸ್ತ ಚಾಚಿದ್ದಾರೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪುನೀತ್ ರಾಜಕುಮಾರ್ ಅವರು 5 ಲಕ್ಷ ರೂ. ನೆರವ ನೆರವು ನೀಡಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರು ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸಕ್ಕೆ ಭೇಟಿ ನೀಡಿ ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಅವರು ಸಂತ್ರಸ್ತರಿಗಾಗಿ 5 ಲಕ್ಷ ರೂ. ಚೆಕ್ ನೀಡಿದ್ದಾರೆ. ಬಳಿಕ ಯಡಿಯೂರಪ್ಪ ಅವರು ಪುನೀತ್ ರಾಜ್‍ಕುಮರ್ ಅವರಿಗೆ ಬೀಳ್ಕೊಡುಗೆ ಕೊಟ್ಟರು.

ನಂತರ ಮಾಧ್ಯಮದವರ ಜೊತೆ ಮಾತನಾಡಿದ ಪುನೀತ್ ರಾಜಕುಮಾರ್ “ಚೆಕ್ ಕೊಡಲು ಎಂದು ಮುಖ್ಯಮಂತ್ರಿಗಳ ನಿವಾಸಕ್ಕೆ ಬಂದಿದ್ದೇನೆ. ನನ್ನ ಕೈಯಲಾದಷ್ಟು ಸಹಾಯ ಮಾಡುತ್ತಿದ್ದೇನೆ. ಈಗ ಆಗಿರುವಂತಹ ನಷ್ಟಗಳನ್ನು ಪರಿಹಾರಕ್ಕೆ ನಮ್ಮ ಕೈಯಲಾದಷ್ಟು ಸಹಾಯ ಮಾಡುತ್ತೇವೆ. ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಇದಕ್ಕಾಗಿ ಹಾಕಿಕೊಂಡಿದ್ದೇವೆ” ಎಂದರು.

ಪುನೀತ್ ಮಾತ್ರವಲ್ಲದೇ ಹಲವು ಸ್ಯಾಂಡಲ್‍ವುಡ್ ಕಲಾವಿದರು ಕೂಡ ಪ್ರವಾಹ ಸಂತ್ರಸ್ತರಿಗೆ ನೆರವಾಗೋಣ, ಸಹಕರಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾದ್ದಾರೆ. ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿಗೆ ಸ್ಯಾಂಡಲ್​ವುಡ್​ ನಟರ ಮನ ಮಿಡಿದಿದೆ. ಪ್ರವಾಹ ಪೀಡಿತರ ಬೆಂಬಲಕ್ಕೆ ನಿಲ್ಲಿ ಎಂದು ದರ್ಶನ್ ಸುದೀಪ್, ಶ್ರೀ ಮುರುಳಿ, ಗಣೇಶ್ ಸೇರಿ ಅನೇಕ ನಟ ನಟಿಯರು​ ಕೋರಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top