fbpx
ಸಮಾಚಾರ

ಯಶ್ ಮನೆಯಲ್ಲಿ ರಕ್ಷಾ ಬಂಧನ ಸಂಭ್ರಮ- ಫೋಟೋ ವೈರಲ್

ಅಣ್ಣ ತಂಗಿಯ ಸಂಬಂಧವನ್ನು ಗಟ್ಟಿಗೊಳಿಸುವ ಈ ಹಬ್ಬದಂದು ಸ್ಯಾಂಡಲ್ ವುಡ್ ತಾರೆಯರು ಭರ್ಜರಿಯಾಗಿ ತಮ್ಮ ಸೋದರ ಸೋದರಿಯರ ಜೊತೆ ರಕ್ಷಾಬಂಧನ ಹಬ್ಬವನ್ನು ಆಚರಿಸಿದ್ದಾರೆ . ಅಂತೆಯೇ ಪ್ರತಿ ವರ್ಷದಂತೆ ಈ ವರ್ಷ ಕೂಡಾ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ ಜೋರಾಗಿ ನಡೆದಿದೆ.

 

 

ರಾಕಿಂಗ್ ಸ್ಟಾರ್ ಯಶ್ ಅವರ ಸಹೋದರಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಅಣ್ಣನ ಜೊತೆ ತಮ್ಮ ಮೆಚ್ಚಿನ ರಾಖಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಯಶ್ ಸಹೋದರಿಯ ಜೊತೆ ಒಂದು ಪೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೊಟೋ ಅಪ್ ಲೋಡ್ ಮಾಡಿದ್ದಾರೆ. “ರಾಕಿ ಇರೋವಾಗ ನೀನು ನಿಶ್ಚಿಂತೆಯಿಂದ ಇರು, ನೀನು ಕಟ್ಟಿದ ರಾಕಿ ಇರೋವಾಗ ನನಗೆ ಚಿಂತೆ ಇಲ್ಲ” ಎಂದು ಯಶ್ ಟ್ವೀಟ್ ಮಾಡಿದ್ದಾರೆ.

 

 

ಹಾಗೆಯೇ ಸ್ಯಾಂಡಲ್ವುಡ್ನ ಖ್ಯಾತ ತಾರೆ ರಾಧಿಕಾ ಪಂಡಿತ್ ತಮ್ಮ ಸೋದರ ಗೌರವ್ ಪಂಡಿತ್ ಅವರನ್ನು ಇದೇ ಸಮಯದಲ್ಲಿ ನೆನಪಿಸಿ ಕೊಳ್ಳುವುದನ್ನು ಮರೆತಿಲ್ಲ ಅಮೆರಿಕಾದಲ್ಲಿರುವ ಸೋದರರನ್ನು ನೆನೆಯುತ್ತಾ ತಮ್ಮ ಹಳೆಯ ಫೋಟೋವನ್ನು ಶೇರ್ ಮಾಡಿದ್ದಾರೆ ರಾಧಿಕಾ. “ನನ್ನ ಪ್ರೀತಿ ಮತ್ತು ರಾಖಿಯನ್ನು ಚಿಕಾಗೋಗೆ ಕಳುಹಿಸುತ್ತಿದ್ದೇನೆ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಐ ಲವ್ ಯೂ, ಅಲ್ಲಿರುವ ಎಲ್ಲ ಸಹೋದರ, ಸಹೋದರಿಯರಿಗೆ ರಾಕ್ಷ ಬಂಧನದ ಶುಭಾಶಯಗಳು” ಎಂದು ವಿಶ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top