fbpx
ಸಮಾಚಾರ

ಸ್ವಾತಂತ್ರ್ಯ ದಿನಾಚರಣೆಗೆ ಕನ್ನಡದಲ್ಲಿ ಶುಭ ಕೋರಿದ ಇಸ್ರೇಲ್: ಕನ್ನಡಾಭಿಮಾನಕ್ಕೆ ಮೆಚ್ಚುಗೆ

ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಹಲವು ದೇಶಗಳು ಶುಭ ಕೋರಿದ್ದವು. ಈ ಪೈಕಿ ವಿಭಿನ್ನವಾಗಿ ಶುಭಾಶಯ ಕೋರಿದ ಇಸ್ರೇಲ್ ಸರಕಾರ, ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಟ್ವಿಟ್ಟರ್‌ನಲ್ಲಿ ಶುಭ ಕೋರಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಕನ್ನಡದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

ಇಸ್ರೇಲ್ ಸರ್ಕಾರ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ‘ಆತ್ಮೀಯ #ಭಾರತ, ಸ್ವಾತಂತ್ರ್ಯ ದಿನದ ಶುಭಾಶಯಗಳು! ಎಂದು ಬರೆದು ಇಸ್ರೇಲ್ ಹಾಗೂ ಭಾರತದ ಧ್ವಜದ ಚಿತ್ರಗಳನ್ನು ಪ್ರಕಟಿಸಿದೆ. ಇನ್ನು ಪ್ರಧಾನಿ ಮೋದಿಯ ಮಿತ್ರರಾದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವೀಡಿಯೊ ಮೂಲಕ ಭಾರತೀಯರಿಗೆ ಶುಭಾಶಯ ಕೋರಿದ್ದಾರೆ.

 

 

ಇದೇ ರೀತಿ ಹಿಂದಿ, ಮತ್ತು ಮರಾಠಿಯಲ್ಲಿಯೂ ಶುಭ ಹಾರೈಸಿದೆ. ‘ವಿಧೇಯಪೂರ್ವಕವಾಗಿ ಇಸ್ರೇಲ್’ ಎಂದು ಕೆಳಬರಹ ಪ್ರಕಟಿಸಿರುವ ಅದು, ‘ಬೆಳೆಯುತ್ತಿರುವ ಸಹಭಾಗಿತ್ವ (#GrowingPartnership )’ ಎಂಬ ಹ್ಯಾಶ್ ಟ್ಯಾಗ್ ಬಳಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top