fbpx
ಸಮಾಚಾರ

ನಿವೇದಿತಾ ಗೌಡ ವಿರುದ್ಧ ನೆಟ್ಟಿಗರು ಆಕ್ರೋಶ: ವಾಹಿನಿಗೆ ಛೀಮಾರಿ.

ಪಕ್ಕಾ ಕನ್ನಡಿಗ ಕುಟುಂಬದಿಂದ ಬಂದು ಅದರಲ್ಲೂ ಮೈಸೂರಿನಲ್ಲೇ ಹುಟ್ಟಿ ಬೆಳೆದಿದ್ದರೂ ತಾನು ಮಾತಾಡಿದ್ದು ಕನ್ನಡವೋ ಇಂಗ್ಲಿಶೋ ಎಂಬ ಬಗ್ಗೆ ಖುದ್ದು ಆಕೆಗೇ ಅನುಮಾನ ಮೂಡುವಂತೆ, ಚಿತ್ರ-ವಿಚಿತ್ರವಾಗಿ ನುಲಿಯುತ್ತ ಬಿಗ್‌ಬಾಸ್-5 ಶೋದ ಪ್ರಮುಖ ಆಕರ್ಷಣೆಯಾಗಿದ್ದಾಕೆ ನಿವೇದಿತಾ ಗೌಡ. ಇಂತಹ ನಿವೇದಿತಾ ಗೌಡ್ಡಾ ಉರ್ಫ್ ಬೊಂಬೆ ಮತ್ತೊಮ್ಮೆ ಸುದ್ದಿಯಾಗಿದ್ದು ನೆಟ್ಟಿಗರ ಕೋಪಕ್ಕೆ ಕಾರಣರಲಿದ್ದಾರೆ.

ನಿವೇದಿತಾ ಗೌಡ ಸದ್ಯಕ್ಕೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಹಾಗಂತ ಅವರೇನು ಇಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿಲ್ಲ ಬದಲಾಗಿ ತೀರ್ಪುಗಾರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.. ಇದೇ ಈಗ ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ಕಾಮಿಡಿ ಕಾರ್ಯಕ್ರಮಕ್ಕೆ ನಿವೇದಿತಾ ರಂಥಾ ಎಳಸು ಹುಡುಗಿಯನ್ನು ಆಯ್ಕೆ ಮಾಡಿರುವುದಕ್ಕೆ ವಾಹಿನಿ ಮತ್ತು ಆ ಶೋ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಕನ್ನಡ ವಾಹಿನಿಯಲ್ಲಿ ಕಾಮಿಡಿ ಕಂಪನಿ ಎಂಬ ಹೊಸ ಕಾಮಿಡಿ ಷೋ ಆರಂಭವಾಗಿದೆ. ಈ ಶೋನಲ್ಲಿ ಅಕುಲ್ ಬಾಲಾಜಿ ನಿರೂಪಣೆ ಮಾಡುತ್ತಿದ್ದು ನಟ ಕಾರ್ತಿಕ್ ಜಯರಾಂ ಮತ್ತು ನಟಿ ಕೃಷಿ ತಾಪಂಡ ತೀರ್ಪುಗಾರರಾಗಿದ್ದಾರೆ. ಇವರಿಬ್ಬರ ನಡುವೆ ಮುಖ್ಯವಾಗಿ ನಿವೇದಿತಾ ಗೌಡ ಮುಖ್ಯ ತೀರ್ಪುಗಾರ್ತಿಯಾಗಿ ತಂದು ಕೂರಿಸಿದ್ದಾರೆ…

”ಕಾಮಿಡಿ ಶೋಗೆ ಮುಖ್ಯ ತೀರ್ಪುಗಾರ್ತಿಯಾಗಲು ಕಾಮಿಡಿ ಕ್ಷೇತ್ರದಲ್ಲಿ ನಿವೇದಿತಾ ಗೌಡ ಯಾವ ಸಾಧನೆ ಮಾಡಿದ್ದಾಳೆ ಅಂತಾ ಅವಳನ್ನ ಜಡ್ಜ್ ಮಾಡಿದ್ದೀರಾ? ಬೇರೆ ಯಾರು ಕಾಣಿಸ್ಲಿಲ್ವ? ಕನ್ನಡದಲ್ಲಿ ಹಿರಿಯ ಹಾಸ್ಯ ಕಲಾವಿದರು ಯಾರು ಇಲ್ಲವೇ? ಟೆನ್ನಿಸ್ ಕೃಷ್ಣ, ಬ್ಯಾಂಕ್ ಜನಾರ್ಧನ್, ಬುಲೆಟ್ ಪ್ರಕಾಶ್, ಉಮೇಶ್, ಬಿರಾದರ್, ರಂಗಾಯಣ ರಘು, ರಂಥಾ ದಿಗ್ಗಜ ಕಲಾವಿದರಿದ್ದಾರೆ. ದಯವಿಟ್ಟು ಅಂಥವರನ್ನು ಆಯ್ಕೆ ಮಾಡಿ ಆ ಸೀಟಲ್ಲಿ ಕೂರಸಿ. ಅವರಿಂದ ಅಲ್ಲಿನ ಕಂಟೆಂಸ್ಟೆಂಟ್ ಗಳು ಕಲಿಯಲು ಒಳ್ಳೆಯ ಅವಕಾಶ ಸಿಗುತ್ತೆ ಹಾಗೂ ನಿಮ್ ಚಾನೆಲಗೂ ಒಂದೊಳ್ಳೆ ಹೆಸರು ಬರುತ್ತೆ.. ಅದನ್ನು ಬಿಟ್ಟು TRP ಗಾಗಿ ನಿವೇದಿತಾಳಂಥ ಎಳಸನ್ನು ತಂದು ಕೂರಿಸಿದರೆ ಜನರು ಉಗಿಯುತ್ತಾರೆ” ಎಂದು ನೆಟ್ಟಿಗರು ಸಾಮೀಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top