fbpx
ಸಮಾಚಾರ

ರಿಲೀಸ್ ಆಯ್ತು ಪೈಲ್ವಾನ್ ‘ಧ್ರುವತಾರೆ’ ಸಾಂಗ್- ನೆರೆ ಸಂತ್ರಸ್ತರಿಗೆ ನೆರವಾದವರಿಗೆ ಈ ಹಾಡು ಸಮರ್ಪಣೆ.

ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಮೇಲಿನ ಕುತೂಹಲ ದಿನೇ ದಿನೇ ಹೆಚ್ಚುತ್ತಲೇ ಇದೆ. ಕನ್ನಡವೂ ಸೇರಿ ಒಟ್ಟು 5 ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಬಗ್ಗೆ ಸ್ವತಃ ಕಿಚ್ಚನ ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದರೇ ಮಾಮೂಲಿ ಪ್ರೇಕ್ಷಕರಲ್ಲೂ ವಿಭಿನ್ನ ಕ್ರೇಜ್ ಹುಟ್ಟುಹಾಕುತ್ತಿದೆ. ಬಿಡುಗಡೆ ದಿನಾಂಕ ಸೆಪ್ಟೆಂಬರ್ 12ಕ್ಕೆ ಫಿಕ್ಸ್ ಆಗಿದೆ. ನಡುವೆ ಈಗ ‘ಪೈಲ್ವಾನ್​’ ಚಿತ್ರತಂಡ ಈಗ ನಾಲ್ಕನೇ ಲಿರಿಕಲ್​ ಹಾಡನ್ನು ಬಿಡುಗಡೆ ಮಾಡಿದೆ.

 

 

ಹಾಡಿನಲ್ಲಿ ಸುದೀಪ್ ಎಮೋಷನಲ್ ಮೂಡ್​ನಲ್ಲಿದ್ದಾಗ ಹಾಡುವ ಸಾಂಗ್ ಇದಾಗಿದ್ದು ಪಂದ್ಯದಲ್ಲಿ ಸೋತಾಗ ಧೈರ್ಯ ತುಂಬುವ ಹೊಸ ಧ್ರುವತಾರೆಯಾಗಿ ಕಿಚ್ಚ ಮತ್ತೆ ಮಿಂಚಲಿದ್ದಾರೆ. ಹಾಡಿಗೆ ನಾಗೇಂದ್ರ ಪ್ರಸಾದ್ ಲಿರಿಕ್ಸ್ ಬರೆದಿದ್ದು ಅರ್ಮನ್ ಮಲ್ಲಿಕ್ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ.

ವಿಶೇಷವೆಂದರೆ ಈ ಹಾಡನ್ನು ಕರ್ನಾಟಕ, ಮಹಾರಾಷ್ಟ್ರ ಕೇರಳ ನೆರೆ ಸಂತ್ರಸ್ತರ ನೆರವಿಗೆ ಬಂದ ಧ್ರುವತಾರೆಗಳಾದ ಭಾರತೀಯ ಸೇನೆ, ನೆರೆ ಪರಿಹಾರ ತಂಡಗಳು, ಸ್ವಯಂ ಸೇವಾ ಕಾರ್ಯಕರ್ತರಿಗೆ ಪೈಲ್ವಾನ್ ಚಿತ್ರತಂಡ ಸಮರ್ಪಿಸಿದೆ.

ಸೆಪ್ಟೆಂಬರ್ 12ಕ್ಕೆ ತೆರೆಗೆ:
ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದ್ದು ಸೆಪ್ಟೆಂಬರ್ 12ರಂದು ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದಾರೆ. ಇನ್ನು ಐದೂ ಭಾಷೆಯಲ್ಲಿಯೂ ಅಂದೇ ಚಿತ್ರ ತೆರೆಕಾಣಲಿದೆ. ಪಂಚಭಾಷೆಯಲ್ಲಿ ನಿರ್ಮಾಣವಾಗಿರುವ ಪೈಲ್ವಾನ್ ವಿತರಣಾ ಹಕ್ಕನ್ನು ಜೀ ಸ್ಟುಡಿಯೋಸ್ ಪಡೆದುಕೊಂಡಿದ್ದು, ದೇಶದಾದ್ಯಂತ ಚಿತ್ರವನ್ನು ಏಕಕಾಲದಲ್ಲಿ 2500ಕ್ಕಿಂತ ಹೆಚ್ಚಿನ ಚಿತ್ರಮಂದಿರದಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.

ಪೈಲ್ವಾನ್ ಬಗ್ಗೆ:
ಪೈಲ್ವಾನ್ ಚಿತ್ರದ ಬಗ್ಗೆ ಹೇಳಬೇಕೆಂದರೆ ಮುಂಬೈ ಬೆಡಗಿ ಆಕಾಂಕ್ಷ ಸಿಂಗ್ ಸುದೀಪ್’ಗೆ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಬಾಲಿವುಡ್ ನಟ ಸುನಿಲ್ ಶೆಟ್ಟಿ, ಕರುಣ್ ದುಹಾನ್ ಸಿಂಗ್, ಸುಶಾಂತ್ ಸಿಂಗ್, ಅವಿನಾಶ್ ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. RRR ಮೋಶನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಪೈಲ್ವಾನ್ ಚಿತ್ರವನ್ನು ನಿರ್ದೇಶಕ ಕೃಷ್ಣಾ ಅವರ ಪತ್ನಿ ಸ್ವಪ್ನ ಕೃಷ್ಣಾ ನಿರ್ಮಾಣ ಮಾಡುತ್ತಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಕರುಣಾಕರ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top