fbpx
ಸಮಾಚಾರ

ರಮ್ಯಾ ಮದುವೆ ಸುದ್ದಿ ಬಗ್ಗೆ ಕೊನೆಗೂ ಸಿಕ್ಕ ಸ್ಪಷ್ಟನೆ: ಏನು ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆ, ಸ್ಯಾಂಡಲ್ ವುಡ್ ಕ್ವೀನ್ ಅಂತಲೇ ಕರೆಸಿಕೊಂಡು ಬೇಡಿಕೆ ಇರುವಾಗಲೇ ರಾಜಕಾರಣದಲ್ಲಿ ಕಳೆದು ಹೋದವರು ನಟಿ ರಮ್ಯಾ. ಆದರೆ ಖುದ್ದು ಕಾಂಗ್ರೆಸ್ ಕಾರ್ಯಕರ್ತರಿಗೇ ಆಕೆಯ ರಾಜಕೀಯ ನಡೆ ಏನು ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣಗಳಿಲ್ಲ.. ಆ ವಿಷ್ಯ ಹಾಗಿರಲಿ, ಈಗ ರಾಜಕೀಯ ಹೊರತುಪಡಿಸಿದರೆ ರಮ್ಯಾ ಹೆಚ್ಚಾಗಿ ಸುದ್ದಿಯಾಗುತ್ತಿರೋದು ಮದುವೆ ವಿಚಾರವಾಗಿ ಮಾತ್ರ., ಈಕೆಯ ಮದುವೆ ವಿಚಾರವಾಗಿ ಬಹಳ ಹಿಂದಿನಿಂದಲೂ ಪುಂಖಾನುಪುಂಖವಾಗಿ ನಾನಾ ರೀತಿಯ ಸುದ್ದಿ ಹರಿದಾಡುತ್ತಲೇ ಇತ್ತು ಹೀಗಿರೋವಾಗಲೇ ಈಗ ಮತ್ತೊಮ್ಮೆ ರಮ್ಯಾ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ.

 

 

ಹೀಗೆ ಮುನ್ನೆಲೆಗೆ ಬಂದಿರುವ ಮದುವೆ ಶುದ್ಧ ಸುಳ್ಳು ಎಂದು ರಮ್ಯಾ ಅವರ ಫ್ಯಾನ್ಸ್ ಪೇಜ್ ಟ್ವಿಟ್ಟರ್ ನಲ್ಲಿ ತಿಳಿಸಿದೆ. “ಸಾಮಾಜಿಕ ಮಾಧ್ಯಮದಲ್ಲಿ ರಮ್ಯಾ ಅವರು ಸಕ್ರಿಯವಾಗಿಲ್ಲದ ಕಾರಣ, ಅವರ ವಯಕ್ತಿಕ ಜೀವನದ ಬಗ್ಗೆ ನಕಲಿ ಸುದ್ದಿ ಲೇಖನಗಳು ಮತ್ತೆ ಸುದ್ದಿಯಾಗುತ್ತಿವೆ. ಕನ್ನಡ ಮಾಧ್ಯಮಗಳು ಹರಡಿಸುತ್ತಿರುವ ‘ನಕಲಿ ಸುದ್ದಿಗಳನ್ನು ನಿರ್ಲಕ್ಷಿಸಲು ವಿನಂತಿಸುತ್ತೇವೆ. ನಾವು ಮೊದಲೇ ಹೇಳಿದಂತೆ, ಮಾಧ್ಯಮದಿಂದ ಏನನ್ನೂ ನಂಬಬೇಡಿ! ಅಗತ್ಯವಿದ್ದರೆ ಸ್ವತಃ ರಮ್ಯಾ ಅಥವಾ ರಮ್ಯಾ ಅವರ ಫ್ಯಾನ್ ಪೇಜ್ ಹೇಳಿಕೆಗಳನ್ನು ನೀಡುತ್ತದೆ! ಧನ್ಯವಾದಗಳು” ಎಂದು ರಮ್ಯಾ ಫ್ಯಾನ್ ಪೇಜ್ ತನ್ನ ಟ್ವಿಟ್ಟರ್ ನಲ್ಲಿ ತಿಳಿಸಿದೆ.

 

 

ರಮ್ಯಾ ಮದುವೆಯಾಗಲಿದ್ದಾರೆ ಎಂಬ ಸುದ್ದಿಯನ್ನು ಖಾಸಗಿ ಪತ್ರಿಕೆಯೊಂದು ಪ್ರಕಟಿಸಿತ್ತು. ನಟಿ ರಮ್ಯಾ ವಿವಾಹ ನಿಶ್ಚಯವಾಗಿದ್ದು, ವಿದೇಶಿ ಹುಡುಗನನ್ನು ವರಿಸುತ್ತಿದ್ದಾರೆ. ಪೋರ್ಚುಗಲ್ ಗೆಳೆಯ ರಾಫೆಲ್ ಜೊತೆ ರಮ್ಯಾ ವಿವಾಹ ಶೀಘ್ರವೇ ನಡೆಯಲಿದೆ. ರಮ್ಯ ಇತ್ತೀಚಿನ ದಿನಗಳಲ್ಲಿ ಸಕ್ರಿಯ ರಾಜಕಾರಣದಿಂದಲೂ ಅಂತರ ಕಾಯ್ದುಕೊಂಡಿದ್ದರು.. ಏಳೆಂಟು ವರ್ಷಗಳಿಂದ ರಿಲೇಷನ್​ಶಿಪ್​ನಲ್ಲಿರುವ ಪೋರ್ಚುಗಲ್ ದೇಶದ ರಾಫೆಲ್​- ರಮ್ಯಾ ಸದ್ಯದಲ್ಲೇ ಹಸೆಮಣೆಯೇರುವುದು ಪಕ್ಕಾ.” ಎಂದು ಖಾಸಗಿ ವಾಹಿನಿ ವರದಿ ಮಾಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top