fbpx
ಸಮಾಚಾರ

ಹೆಣ್ಣು ಮಗುವಿನ ತಾಯಿಯಾಗಿದ್ದಾರೆ ‘ಅಗ್ನಿಸಾಕ್ಷಿ’ ಹಳೆ ಚಂದ್ರಿಕಾ- ಗುರುತೇ ಸಿಗದ ಹಾಗೆ ಬದಲಾಗಿದ್ದಾರೆ ರಾಜೇಶ್ವರಿ.

ಕನ್ನಡದ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಪೈಕಿ ‘ಅಗ್ನಿಸಾಕ್ಷಿ’ಯೂ ಒಂದು. ಈ ಧಾರಾವಾಹಿಯಲ್ಲಿ ‘ಚಂದ್ರಿಕಾ’ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇದೆ. ಊಸರವಳ್ಳಿಯಂತೆ ರೀತಿಯಲ್ಲಿ ಬಣ್ಣವನ್ನು ಬದಲಾಯಿಸುತ್ತಾ, ಮನೆಯವರ ಮೇಲೆ ದ್ವೇಷ ಸಾಧಿಸುತ್ತಿರುವ ಈ ಪಾತ್ರಕ್ಕೆ ಧಾರವಾಹಿಯ ಪ್ರಮುಖ ಪಾತ್ರದಷ್ಟೇ ಮನ್ನಣೆಯಿದೆ. ಈ ಪಾತ್ರವನ್ನು ಇದಕ್ಕೂ ಎಂದಳು ಪಾತ್ರ ಮಾಡುತ್ತಿದ್ದವರು ರಾಜೇಶ್ವರಿ ಪಾರ್ಥಸರ್ತಿ.. ಚಂದ್ರಿಕಾ ಪಾತ್ರಧಾರಿಯಾಗಿ ಅಭಿನಯ ಮಾಡುತ್ತಿದ್ದ ರಾಜೇಶ್ವರಿ ಅವರು ಮದುವೆ ಆದ ಬಳಿಕ ಈ ಪಾತ್ರದಿಂದ ದೂರ ಸರಿದರು. ನಂತರ ಈ ಪಾತ್ರಕ್ಕೆ ಪ್ರಿಯಾಂಕಾ ಅವರು ಜೀವ ತುಂಬಿದರು.

 

 

ರಾಜೇಶ್ವರಿ ಅವರು ಮದುವೆಯಾದ ನಂತರ ಸೀರಿಯಲ್‍ನಿಂದ ಹೊರಬಂದು ಪತಿ ಕಲ್ಯಾಣ್ ಕ್ರಿಶ್ ಅವರೊಂದಿಗೆ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ. ಈ ದಂಪತಿಗೆ ಹೆಣ್ಣು ಮಗುವಾಗಿದ್ದು, ಮಗುವಿಗೆ ಹವ್ಯಾ ಕೃಷ್ಣ ಎಂದು ನಾಮಕರಣವನ್ನೂ ಮಾಡಿದ್ದಾರೆ.

ಇದೀಗ ಆಸ್ಟ್ರೇಲಿಯಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜೇಶ್ವರಿ ಅವರ ವೇಷ ಭೂಷಣ ಕೂಡ ಸಂಪೂರ್ಣ ಬದಲಾಗಿದೆ. ಧಾರಾವಾಹಿಯಲ್ಲಿ ರಾಜೇಶ್ವರಿ ಅವರು ತಮ್ಮ ಉದ್ದವಾದ ಕೂದಲಿನಿಂದಲೇ ಎಲ್ಲರ ಗಮನ ಸೆಳೆದಿದ್ದರು. ಆದರೆ ಈಗ ಕೂದಲನ್ನು ಕತ್ತರಿಸಿ ವಿಭಿನ್ನವಾಗಿ ಕಾಣುತ್ತಿದ್ದಾರೆ.

ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮಾಡಿದ್ದ ಇವರು ವಯಕ್ತಿಕ ಜೀವನದಲ್ಲಿ ತುಂಬಾ ಮೃದು ಸ್ವಭಾವದವರಾಗಿದ್ದಾರೆ. ರಾಜೇಶ್ವರಿ ಮತ್ತೆ ಕಿರುತೆರೆಗೆ ಬರಬೇಕೆಂದು ಕಿರುತೆರೆ ವೀಕ್ಷಕರ ಬಯಕೆ ಆಗಿದೆ. ರಾಜೇಶ್ವರಿ ಅವರು ಮತ್ತೆ ಕಿರುತೆರೆಗೆ ಬರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ರಾಜೇಶ್ವರಿ ಆರಂಭದಲ್ಲಿ ಕಿರುತೆರೆ ಆಗಮಿಸಿದಾಗ ಕುಂಕುಮ ಭಾಗ್ಯ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿದ್ದರು. ಕೆಲವು ಸಿನೆಮಾದಲ್ಲೂ ಕೂಡ ಅಭಿನಯ ಮಾಡಿರುವ ರಾಜೇಶ್ವರಿ ಪ್ರಚಂಡ ರಾವಣ ಚಿತ್ರದಲ್ಲಿ ಸೀತೆಯ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top