ಜೀವನದಿ ಕಾವೇರಿ ಉಳಿವಿಗಾಗಿ ಕಾವೇರಿ ಕಾಲಿಂಗ್(ಕಾವೇರಿ ಕೂಗು) ಎಂಬ ಅಭಿಯಾನವನ್ನು ಆರಂಭಿಸಲಾಗಿದೆ. ಈ ಅಭಿಯಾನಕ್ಕೆ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಕಾವೇರಿ ಕಾಲಿಂಗ್ ಅಭಿಯಾನಕ್ಕೆ ಸೇರ್ಪಡೆಯಾಗುವ ಮೂಲಕ ಪರಿಸರ ಪ್ರೇಮವನ್ನು ಮೆರೆದಿದ್ದಾರೆ.
Happy to be associated with #CauveryCalling campaign. A river that has flown for thousands of years has been destroyed in a span of two generations. We need to act now; to be part of the initiative log onto https://t.co/Dp6ng9c2Ka or call 8000980009 pic.twitter.com/nx2nVdInZk
— Rakshit Shetty (@rakshitshetty) August 15, 2019
ಕಾವೇರಿ ತಾಯಿ ಕೋಟ್ಯಂತರ ಕನ್ನಡಿಗರಿಗೆ ಹಾಗೂ ಭಾರತೀಯರಿಗೆ ನೀರು ನೀಡುವ ಮೂಲಕ ಎಲ್ಲರ ದಣಿವನ್ನು ನೀಗಿಸುವ ಮೂಲಕ ಸಾಕಿ ಸಲುಹಿದ್ದಾಳೆ. ಕಾಲ್ಪನಿಕ ಪಟ್ಟಣ ಮಾಲ್ಗುಡಿಯಿಂದ ಹಿಡಿದು ಈಗಿನ ಸಾಫ್ಟ್ ವೇರ್ ಜಗತ್ತಿನವರೆಗೂ ಎಲ್ಲ ರೀತಿಯ ಜನರಿಗೂ ಮೇಲೂ ಕೀಳೆಂಬ ಭಾವನೆ ಇಲ್ಲದೆ ಜೀವ ಕೊಟ್ಟಿದ್ದಾಳೆ. ಆದರೆ ಇಂದು ಬತ್ತಿ ಹೋಗುತ್ತಿರುವ ಕಾವೇರಿಯನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗಿಡಗಳನ್ನು ನೆಟ್ಟು, ಮರಗಳಾಗಿ ಬೆಳೆಸುವ ಮೂಲಕ ಕಾವೇರಿಯನ್ನು ಉಳಿಸಬಹುದಾಗಿದೆ.
ಹೀಗಾಗಿ ಕಾವೇರಿ ಕಾಲಿಂಗ್ ಎಂಬ ಅಭಿಯಾನ ಆರಂಭಿಸಲಾಗಿದೆ. ನಾನೂ ಈ ಅಭಿಯಾನದ ಜೊತೆಗಿದ್ದೇನೆ. ನೀವು ನಮ್ಮೊಂದಿಗೆ ಕೈಜೋಡಿಸಿ ಎಂದು ರಕ್ಷಿತ್ ಪರಿಸರ ಪ್ರೇಮವನ್ನು ಮೆರೆದಿದ್ದಾರೆ.
#CauveryCalling ಅಭಿಯಾನದೊಂದಿಗೆ ಕೈಜೋಡಿಸಿರುವುದಕ್ಕೆ ಸಂತೋಷವಾಗಿದೆ. ಸಾವಿರಾರು ವರ್ಷಗಳಿಂದ ಹರಿಯುತ್ತಿರುವ ನದಿಯನ್ನು ಎರಡು ತಲೆಮಾರುಗಳ ಅವಧಿಯಲ್ಲಿ ನಾಶಪಡಿಸಲಾಗಿದೆ. ನಾವು ಈಗ ಕಾರ್ಯ ನಿರ್ವಹಿಸಬೇಕಾಗಿದೆ, ಕಾವೇರಿ ರಕ್ಷಣೆಗಾಗಿ ನಿಲ್ಲಬೇಕಿದೆ ಎಂದು ತಮ್ಮ ಫೇಸ್ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
