‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ಕಳೆದ ಶುಕ್ರವಾರ ವಿಶ್ವದ್ಯಾಂತ 500 ಕ್ಕಿಂತ ಹೆಚ್ಚಿನ ಸ್ಕ್ರೀನ್ ಗಳಲ್ಲಿ ಅದ್ಧೂರಿಯಾಗಿ ತೆರೆಕಂಡು ಸಿನಿಮಾ ಜಗತ್ತಿನಲ್ಲೇ ಹೊಸ ದಾಖಲೆಯನ್ನು ಸೃಷ್ಟಿಸುವುದರತ್ತ ಧಾಪುಗಾಲು ಹಾಕುತ್ತಿದೆ. ಮುನಿರತ್ನ ಕುರುಕ್ಷೇತ್ರ ಸಿನಿಮಾದ ಆರ್ಭಟಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿದ್ದು. ಎಲ್ಲೆಲ್ಲೂ ಕುರುಕ್ಷೇತ್ರ ಬಗ್ಗೆಯೇ ಮಾತಾಗುತ್ತಿದೆ, ಸಕ್ಕತ್ ಸಂಚಲನವನ್ನು ಸೃಷ್ಟಿ ಮಾಡುತ್ತಿದೆ, ದರ್ಶನ್ 50ನೇ ಸಿನಿಮಾ ಹಾಗೂ ಒಂದು ಬಿಗ್ ಬಜೆಟ್ ಪೌರಾಣಿಕ ಸಿನಿಮಾ ಎಂಬ ಕಾರಣಕ್ಕೆ ‘ಕುರುಕ್ಷೇತ್ರ’ ಎಲ್ಲೆಡೆ ಒಳ್ಳೆಯ ಕಲೆಕ್ಷನ್ ನೊಂದಿಗೆ ಮುನ್ನುಗ್ಗುತ್ತಿದೆ.
ದರ್ಶನ್, ಅರ್ಜುನ್ ಸರ್ಜಾ, ನಿಖಿಲ್, ರವಿಚಂದ್ರನ್, ಸೋನು ಸೂದ್, ಅಂಬರೀಷ್, ಸ್ನೇಹಾ ಮತ್ತು ಮೇಘನಾ ರಾಜ್ ತಾರಾಗಣದಲ್ಲಿದ್ದಾರೆ. ದುರ್ಯೋಧನನ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದಾರೆ. ಭೀಷ್ಮನಾಗಿ ಅಂಬರೀಷ್, ಕರ್ಣನಾಗಿ ಅರ್ಜುನ್ ಸರ್ಜಾ, ಅಭಿಮನ್ಯು ಆಗಿ ನಿಖಿಲ್ ಕಾಣಿಸಲಿದ್ದಾರೆ. ಶಕುನಿ ಪಾತ್ರದಲ್ಲಿ ರವಿಶಂಕರ್, ದ್ರೌಪದಿಯಾಗಿ ಸ್ನೇಹಾ, ಅರ್ಜುನನಾಗಿ ಸೋನು ಸೂದ್, ಕೃಷ್ಣನಾಗಿ ರವಿಚಂದ್ರನ್ ಹಾಗೂ ಶಲ್ಯನ ಪಾತ್ರದಲ್ಲಿ ರಾಕ್ಲೈನ್ ವೆಂಕಟೇಶ್ ತೆರೆಯ ಮೇಲೆ ಅಬ್ಬರಿಸಲಿದ್ದಾರೆ. ಬಹುತಾರಾಗಣದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲಿಯೂ ಚಿತ್ರ ಬಿಡುಗಡೆಯಾಗಿದ್ದು ಬಾಕ್ಸ್ ಆಫೀಸ್ ಸುಲ್ತಾನನ ಅಬ್ಬರಕ್ಕೆ ದಂಗಾಗಿದ್ದಾರೆ.
ಬಿಡುಗಡೆಗೆ ಮೊದಲೇ 20 ಕೋಟಿ ಗಳಿಸಿಕೊಂಡಿದ್ದ ಕುರುಕ್ಷೇತ್ರ , ಹಿಂದಿ ಸ್ಯಾಟಿಲೈಟ್ ಹಕ್ಕುಗಳನ್ನು 9.5 ಕೋಟಿಗೆ ಮಾರಲಾಗಿದೆ, ಆಡಿಯೋ ಹಕ್ಕು 1.5 ಕೋಟಿಗೆ ಮಾರಾಟವಾಗಿದೆ, ಕನ್ನಡದಲ್ಲಿ ಟೀವಿ ಹಕ್ಕುಗಳನ್ನು 9 ಕೋಟಿಗೆ ಮಾರಾಟ ಮಾಡಿದ್ದಾರೆ ಜೊತೆಗೆ ಬಹುಭಾಷಾ ಚಿತ್ರವಾದ್ದರಿಂದ ಬೇರೆ ಭಾಷೆಗಳ ಸ್ಯಾಟೆಲೈಟ್ ಹಕ್ಕುಗಳಿಗಾಗಿಯೂಭಾರಿ ಡಿಮ್ಯಾಂಡ್ ಬರುತ್ತಿದೆ.
ವಿದೇಶಿಯರಿಗು ಡಿ ಬಾಸ್ ಅಂದ್ರೆ ಅಭಿಮಾನ
ಜಪಾನ್ನಿಂದ ಡಿ ಬಾಸ್ ಅಭಿಮಾನಿಗಳು ಚಿತ್ರ ನೋಡಲು ಬೆಂಗಳೂರಿಗೆ ಆಗಮಿಸಿದ್ದಾರೆ. ಅಲ್ಲದೆ ಸುಯೋಧನನ ಅಭಿನಯಕ್ಕೆ ಮನ ಸೋತಿದ್ದಾರೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಮೂವರು ಜಪಾನಿಯರು ಕುರುಕ್ಷೇತ್ರವನ್ನು ವೀಕ್ಷಿಸಿದ್ದು, ಐತಿಹಾಸಿಕ ಕಥೆಗೆ, ದರ್ಶನ್ ಅಭಿನಯಕ್ಕೆ ಮನಸೋತಿದ್ದಾರೆ.
Japaneese Watching “Sandalwood Monarch Challenging Star Darshan BOSS” Movie In Narthaki Theater Gandhinagar
Once A Time Kannada Movies Struggled To Release In Other Countries, Nowadays Foreigners R Impressed To Watch Our Kannada Movies Well.. Duryodhana Loved By All @dasadarshan pic.twitter.com/7A9Wddpluz— Thoogudeepa Dynasty ® (@Darshanfans171) August 16, 2019
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
