fbpx
ಸಿನಿಮಾ

ಯಶ್ ಕೆ.ಜಿ.ಎಫ್ ದಾಖಲೆ ಉಡೀಸ್ ಮಾಡಿ ಅಬ್ಬರಿಸಿದ ಬಾಕ್ಸ್ ಆಫೀಸ್ ಸುಲ್ತಾನನ ಕುರುಕ್ಷೇತ್ರ

‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ಕಳೆದ ಶುಕ್ರವಾರ ವಿಶ್ವದ್ಯಾಂತ 500 ಕ್ಕಿಂತ ಹೆಚ್ಚಿನ ಸ್ಕ್ರೀನ್ ಗಳಲ್ಲಿ ಅದ್ಧೂರಿಯಾಗಿ ತೆರೆಕಂಡು ಸಿನಿಮಾ ಜಗತ್ತಿನಲ್ಲೇ ಹೊಸ ದಾಖಲೆಯನ್ನು ಸೃಷ್ಟಿಸುವುದರತ್ತ ಧಾಪುಗಾಲು ಹಾಕುತ್ತಿದೆ. ಮುನಿರತ್ನ ಕುರುಕ್ಷೇತ್ರ ಸಿನಿಮಾದ ಆರ್ಭಟಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿದ್ದು. ಎಲ್ಲೆಲ್ಲೂ ಕುರುಕ್ಷೇತ್ರ ಬಗ್ಗೆಯೇ ಮಾತಾಗುತ್ತಿದೆ, ಸಕ್ಕತ್ ಸಂಚಲನವನ್ನು ಸೃಷ್ಟಿ ಮಾಡುತ್ತಿದೆ, ದರ್ಶನ್ 50ನೇ ಸಿನಿಮಾ ಹಾಗೂ ಒಂದು ಬಿಗ್ ಬಜೆಟ್ ಪೌರಾಣಿಕ ಸಿನಿಮಾ ಎಂಬ ಕಾರಣಕ್ಕೆ ‘ಕುರುಕ್ಷೇತ್ರ’ ಎಲ್ಲೆಡೆ ಒಳ್ಳೆಯ ಕಲೆಕ್ಷನ್ ನೊಂದಿಗೆ ಮುನ್ನುಗ್ಗುತ್ತಿದೆ.

 

 

ದರ್ಶನ್, ಅರ್ಜುನ್ ಸರ್ಜಾ, ನಿಖಿಲ್, ರವಿಚಂದ್ರನ್, ಸೋನು ಸೂದ್, ಅಂಬರೀಷ್, ಸ್ನೇಹಾ ಮತ್ತು ಮೇಘನಾ ರಾಜ್ ತಾರಾಗಣದಲ್ಲಿದ್ದಾರೆ. ದುರ್ಯೋಧನನ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದಾರೆ. ಭೀಷ್ಮನಾಗಿ ಅಂಬರೀಷ್, ಕರ್ಣನಾಗಿ ಅರ್ಜುನ್ ಸರ್ಜಾ, ಅಭಿಮನ್ಯು ಆಗಿ ನಿಖಿಲ್ ಕಾಣಿಸಲಿದ್ದಾರೆ. ಶಕುನಿ ಪಾತ್ರದಲ್ಲಿ ರವಿಶಂಕರ್, ದ್ರೌಪದಿಯಾಗಿ ಸ್ನೇಹಾ, ಅರ್ಜುನನಾಗಿ ಸೋನು ಸೂದ್, ಕೃಷ್ಣನಾಗಿ ರವಿಚಂದ್ರನ್ ಹಾಗೂ ಶಲ್ಯನ ಪಾತ್ರದಲ್ಲಿ ರಾಕ್‌ಲೈನ್ ವೆಂಕಟೇಶ್ ತೆರೆಯ ಮೇಲೆ ಅಬ್ಬರಿಸಲಿದ್ದಾರೆ. ಬಹುತಾರಾಗಣದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲಿಯೂ ಚಿತ್ರ ಬಿಡುಗಡೆಯಾಗಿದ್ದು ಬಾಕ್ಸ್ ಆಫೀಸ್ ಸುಲ್ತಾನನ ಅಬ್ಬರಕ್ಕೆ ದಂಗಾಗಿದ್ದಾರೆ.

ಬಿಡುಗಡೆಗೆ ಮೊದಲೇ 20 ಕೋಟಿ ಗಳಿಸಿಕೊಂಡಿದ್ದ ಕುರುಕ್ಷೇತ್ರ , ಹಿಂದಿ ಸ್ಯಾಟಿಲೈಟ್‌ ಹಕ್ಕುಗಳನ್ನು 9.5 ಕೋಟಿಗೆ ಮಾರಲಾಗಿದೆ, ಆಡಿಯೋ ಹಕ್ಕು 1.5 ಕೋಟಿಗೆ ಮಾರಾಟವಾಗಿದೆ, ಕನ್ನಡದಲ್ಲಿ ಟೀವಿ ಹಕ್ಕುಗಳನ್ನು 9 ಕೋಟಿಗೆ ಮಾರಾಟ ಮಾಡಿದ್ದಾರೆ ಜೊತೆಗೆ ಬಹುಭಾಷಾ ಚಿತ್ರವಾದ್ದರಿಂದ ಬೇರೆ ಭಾಷೆಗಳ ಸ್ಯಾಟೆಲೈಟ್ ಹಕ್ಕುಗಳಿಗಾಗಿಯೂಭಾರಿ ಡಿಮ್ಯಾಂಡ್ ಬರುತ್ತಿದೆ.

ಯಶ್ ಕೆ.ಜಿ.ಎಫ್ ದಾಖಲೆ ಉಡೀಸ್

 

 

ಈ ಹಿಂದೆ ಕೆ.ಜಿ.ಎಫ್ ಬಿಡುಗಡೆಯಾದ ಎರಡು ವಾರದಲ್ಲಿ 44 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿ ಮಾಡಿತ್ತು, ತಮಿಳು ಹಾಗೂ ತೆಲುಗಿನಲ್ಲಿ 3 ಕೋಟಿಗು ಹೆಚ್ಚು ಕಲೆಕ್ಷನ್ ಈಗಾಗಲೇ ಆಗಿದೆ , ಬಿಡುಗಡೆಯಾದ ಮೊದಲ ದಿನ 13 ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ , 2ನೇ ದಿನ 9.8 ಕೋಟಿ ಗಳಿಸಿದೆ , 3ನೇ ದಿನ 6 .5 ಕೋಟಿ,ನಾಲ್ಕನೇ ದಿನ 5.25 ಕೋಟಿ, 5ನೇ ದಿನ 3.8 ಕೋಟಿ ಹಾಗು ಶನಿವಾರ ಭಾನುವಾರ 8 ಕೋಟಿ ಕಲೆಕ್ಷನ್ ದಾಟಬಹುದು ಎಂದು ಅಂದಾಜಿಸಲಾಗಿದೆ.ಕುರುಕ್ಷೇತ್ರ ಕರ್ನಾಟಕ ಒಂದರಲ್ಲೇ 40 ಕೋಟಿಗು ಹೆಚ್ಚು ಹಣ ಬಾಚಿಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top