ಜೈನ ದೇವಾಲಯಗಳಲ್ಲಿ ಧ್ವನಿವರ್ಧಕದಲ್ಲಿ ಹೆಚ್ಚಾಗಿ ಹಿಂದಿ ಭಾಷೆಯಲ್ಲಿ ಘೋಷಣೆ ಮಾಡಲಾಗುತ್ತಿದೆ. ಕನ್ನಡ ಬಳಕೆ ಹಿಂದಿಗಿಂತ ಕಡಿಮೆಯಾಗಿದೆ. ರಾಜಸ್ತಾನ, ಗುಜರಾತ್ ಮೂಲದ ಹಿಂದಿಗರಿಗಾಗಿ ಕನ್ನಡ ಕಡೆಗಣಿಸಿ ಹಿಂದಿಗೆ ಪ್ರಾಧ್ಯಾನ್ಯತೆ ಕೊಡುವುದು ಎಷ್ಟು ಸರಿ ಎಂಬ ಅಸಮಾಧಾನ ಕೆಲವೆಡೆ ಕೇಳಿ ಬರುತ್ತಿದೆ. ಕನ್ನಡದಲ್ಲಿ ಅಪಾರವಾಗಿ ಜೈನ ಭಕ್ತಿ ಗೀತೆಗಳು ಲಭ್ಯವಿದ್ದರೂ ಹೆಚ್ಚಾಗಿ ಹಿಂದಿ ಭಕ್ತಿ ಗೀತೆಗಳನ್ನು ಬಳಸುವುದು ಎಷ್ಟು ಸರಿ, ನಾಮಫಲಕಗಳು ಹಾಗೆಯೇ ಬಸ್ತಿಯ ಎಲ್ಲ ಕಡೆ ಹಿಂದಿ ಇರುವುದು ಮೂಲ ಕನ್ನಡಿಗ ಜೈನರ ಅಸಮಾಧಾನಕ್ಕೆ ಕಾರಣವಾಗಿದೆ.
ಜೈನ ಧರ್ಮ ಹಾಗು ಕನ್ನಡಕ್ಕೆ ಅವಿನಾಭಾವ ಸಂಬಂಧ ಇದೆ:
*ಗೊಮ್ಮಟೇಶ್ವರರ ಏಕಶಿಲಾ ಮೂರ್ತಿ ಕೆತ್ತಿಸಿದ್ದು ಕನ್ನಡಿಗ ಚಾವುಂಡರಾಯ.
*ಚಂದ್ರ ಗುಪ್ತ ಮೌರ್ಯ ಹಾಗು ಭದ್ರಬಾಹು ಶ್ರವಣಬೆಳಗೊಳಕ್ಕೆ ಬಂದಾಗ ಅವರಿಗೆ ಆಶ್ರಯ ಕೊಟ್ಟಿದ್ದು ಕನ್ನಡಿಗರು.
*ಇನ್ನು ಹಳೆಗನ್ನಡಲ್ಲಿ ಅಪಾರವಾದ ಜೈನ ಧರ್ಮದ ಸಾಹಿತ್ಯವಿದೆ. ಪಂಪ,ರನ್ನ,ಪೊನ್ನ ತ್ರಿವಳಿ ರತ್ನತ್ರಯರು ಕನ್ನಡಿಗರು. ಜೈನ ಧರ್ಮಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಬಹಳ ಮಹತ್ವವಾದದ್ದು. ಕನ್ನಡದಲ್ಲಿರುವ ಜೈನ ಸಾಹಿತ್ಯ ಓದಲು ಕುಳಿತರೆ, ಸಾಕ್ಷಾತ ಭಗವಂತರ ದರ್ಶನ ನಿಮಗೆ ಆಗುತ್ತದೆ, ಕನ್ನಡದ ಮೊದಲ ಗ್ರಂಥ ಆದಿಪುರಾಣ ಬರೆದದ್ದು ಆದಿ ಕವಿ ಪಂಪ ಇವೆ ಹೇಳುತ್ತವೆ ಜೈನ ಧರ್ಮ ಎಷ್ಟು ಶ್ರೀಮಂತವಾಗಿತ್ತು ಎಂದು.
*ಗೊಮ್ಮಟೇಶ್ವರ ಪದ ಹುಟ್ಟಿದ್ದು ಕನ್ನಡದದಿಂದಲೇ ಗೊಮ್ಮಟ ಎಂದರೆ ಸುಂದರ ಎಂದು ಅರ್ಥ.
*ಈ ಹಿಂದೆ ಅನೇಕ ಕನ್ನಡಿಗ ಜೈನ ರಾಜರು ಆಳಿದ್ದಾರೆ, ಚಾಲುಕ್ಯ,ಹೊಯ್ಸಳ,ಗಂಗರು ಜೈನ ಧರ್ಮಿಯ ರಾಜರಾಗಿದ್ದರು, ಹೊಯ್ಸಳ ರಾಜ ಬಿಟ್ಟಿ ದೇವರಾಯ ಜೈನ ಧರ್ಮವನ್ನು ಬಿಟ್ಟು ಹಿಂದೂ ಧರ್ಮಕ್ಕೆ ಬದಲಾಗಿ ವಿಷ್ಣುವರ್ಧನ ನೆಂದು ಮರುಹೆಸರಿಸಿಕೊಂಡನು ಆದರೂ ಸಹ ರಾಣಿ ಶಕುಂತಲೆ ಹಾಗು ವಿಷ್ಣುವರ್ಧನನ ಇಡೀ ಕುಟುಂಬ ಜೈನ ಧರ್ಮಿಯರಾಗಿಯೇ ಉಳಿದರು, ಈ ಒಂದು ಘಟನೆ ಜೈನ ಧರ್ಮ ನಿಧಾನವಾಗಿ ಅಳಿಯಲು ಕಾರಣವಾಯಿತು.ಜೈನ ಸಂಪ್ರದಾಯದಂತೆ ನಾಟ್ಯರಾಣಿ ಶಕುಂತಲೆ ಸತ್ತದ್ದು ಸಹ ಸಲ್ಲೇಖನ ತೆಗೆದುಕೊಂಡು.
* ಕರ್ನಾಟಕದ ಖ್ಯಾತ ದೇವಾಲಯ ಧರ್ಮಸ್ಥಳ ಕಟ್ಟಿಸಿದ್ದು ಜೈನ ಧರ್ಮಿಯ ಹೆಗ್ಗಡೆ ಮನೆತನ, ಇಲ್ಲೂ ಸಹ ನಾವು ಹಿಂದೂ – ಜೈನ ಧರ್ಮದ ಸಾಮರಸ್ಯವನ್ನು ಕಾಣಬಹುದು.
ಕನ್ನಡ ಹಾಗು ಜೈನ ಧರ್ಮದ ನಂಟು ಇಂದು ನಿನ್ನೆಯದಲ್ಲ. ಶ್ರವಣಬೆಳಗೊಳದಲ್ಲಿ ಅಲ್ಲಿಂದ ಇಲ್ಲಿವರೆಗೂ ಇಲ್ಲಿ ಕನ್ನಡಕ್ಕೆ ಮೊದಲನೇ ಪ್ರಾಮುಖ್ಯತೆ ಕೊಡಲಾಗುತ್ತಿತ್ತು ಆದರೆ ಈಗ ಹಿಂದಿಗೆ ಪ್ರಾಮುಖ್ಯತೆ ಕೊಡುತ್ತಿರುವುದು ನೋವಿನ ಸಂಗತಿಯಾಗಿದೆ. ಇನ್ನು ದರ್ಶನದ ವಿಚಾರಕ್ಕೆ ಬಂದರೆ ಅನ್ಯ ರಾಜ್ಯದ ಹಿಂದಿಗರಿಗೆ ಸುಲಭವಾಗಿ ಪಾಸ್ ಸಿಗುತ್ತಿವೆ. ಸ್ಥಳೀಯರಿಗೆ ಪಾಸ್ ಸಿಗದೇ ಮಧ್ಯಾಹ್ನದ ನಂತರ ಮಸ್ತಕಾಭಿಷೇಕ ಮುಗಿದ ಬಳಿಕ ದರ್ಶನ ಪಡೆಯಬೇಕಾದ ಸಂಧರ್ಬ ಎದುರಾಗುತ್ತಿದೆ.
ಇನ್ನು ಇತ್ತೀಚಿಗೆ ಸಂಸದನಾದ ಹಿಂದಿ ಪ್ರಿಯ ತೇಜಸ್ವಿ ಸೂರ್ಯ ಜೈನ ದೇವಾಲದಯಲ್ಲಿ ಹಿಂದಿ ಬ್ಯಾನರ್ ಇದ್ದದ್ದನ್ನು ಕಂಡು ಜೈನ ಸಹೋದರರ ಮೇಲೆ ಹಲ್ಲೆ ನಡೆಸಿದ ರೌಡಿಗಳು ಎಂಬಂತೆ ಟ್ವೀಟ್ ಮಾಡಿದ್ದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ, ನಮ್ಮ ರಾಜ್ಯದಲ್ಲಿ ನಮ್ಮ ಭಾಷೆಯನ್ನು ಕೇಳಿದರೆ ತಪ್ಪೇ ಎಂದು ಟ್ವೀಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
Many great poets like Pampa, Ponna & Ranna known as Ratnatraya or three gems of Kannada literature were Jains. Very beginning of Kannada literature is Jaina Yuga.
Therefore, I urge today’s young Jains in Karnataka to learn this history & also use Kannada in their communications.
— Tejasvi Surya (@Tejasvi_Surya) August 18, 2019
ಪ್ರತಿರೋಧ ಹೆಚ್ಚಾಗುತ್ತಿದ್ದಂತೆ ತನ್ನ ತಪ್ಪನ್ನು ಅರಿತ ತೇಜಸ್ವಿ ಮತ್ತೊಂದು ಟ್ವಿಟ್ ಮಾಡಿ ಪಂಪ,ರನ್ನ,ಪೊನ್ನ ತ್ರಿವಳಿ ರತ್ನತ್ರಯರು ಕನ್ನಡಿಗರು. ಜೈನ ಧರ್ಮಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಬಹಳ ಮಹತ್ವವಾದದ್ದು ಅದರಿಂದ ಕನ್ನಡ ಭಾಷೆ ಹಾಗು ಇತಿಹಾಸ ತಿಳಿದು ದಿನ ನಿತ್ಯದಲ್ಲಿ ಕನ್ನಡ ಬಳಸಿ ಎಂದು ತಮ್ಮ ರೂಟ್ ಬದಲಿಸಿದ್ದಾರೆ.
I am a ಕನ್ನಡಿಗ jain and stand with my Kannada brothers who are right in demanding Kannada .
Jains are kannadigas from the time immemorial Pampa Ranna and Ponna are Ratnatraya or three gems of Kannada literature .Let Hindi Jains in Karnataka learn jain history & use Kannada pic.twitter.com/ICzR0K89Sj
— Sandeep Parswanath (@sarpame) August 18, 2019
ಕನ್ನಡದ ಜೈನ ಧರ್ಮಕ್ಕೂ ಎಲ್ಲಿಂದಲೋ ವಲಸೆ ಬಂದ ಮಾರ್ವಾಡಿಗಳ ಜೈನ ಧರ್ಮಕ್ಕೂ ಹೋಲಿಕೆ ಬೇಡ
ರನ್ನ ಜನ್ನರಮತಹ ಜೈನ ಕವಿಗಳು ಕನ್ನಡ ಹಾಗು ಕನ್ನಡ ನಾಡಿನ ಏಳಿಗೆಗೆ ಶ್ರಮಿಸಿದ್ದಾರೆ
ಈ ಮಾರ್ವಾಡಿಗಳಿಂದ ಕನ್ನಡ ಎಷ್ಟು ಉದ್ಧಾರವಾಗಿದೆ?
ಕನ್ನಡ ನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ#StopHindiImposition@GargaC @GCC_MP pic.twitter.com/7PxWa2eP17— ಗೌತಮ್ ಗಣೇಶ್ ಎಂ ಹೆಚ್ (@gouthamganeshmh) August 18, 2019
ಮುಚ್ಚಪಾ ಸಾಕು. ಕನ್ನಡಿಗರಿಂದ ಗೆದ್ದು ಕನ್ನಡಿಗರನ್ನು ರೌಡಿ ಅಂತಿಯಾ ನಿಂಗೆ ದುರಹಂಕಾರ ಜಾಸ್ತಿ ಆಗಿದೆ. ಮೊದಲು ಕನ್ನಡಿಗರಿಗೆ ಆಗುತ್ತಿರುವ ದಬ್ಬಾಳಿಕೆ ನಿಲ್ಲಿಸಿ. ಭಾಷೆ ವಿಚಾರವಾಗಿ ಆದ ಜಗಳಕ್ಕೆ ಧರ್ಮದ ಹೆಸರು ಕಟ್ಟಬೇಡ. ನಿವೇಲ್ಲ ನಮ್ಮ ಜನಪ್ರತಿನಿಧಿಗಳು 😒😒😒
— ಮಂಜುನಾಥ್ Manjunath (@Manjugowda1992) August 18, 2019
ಕರ್ನಾಟಕದಲ್ಲಿ ಕನ್ನಡದಕ್ಕೆ ಮೊದಲ ಪ್ರಾಧ್ಯಾನ್ಯತೆ ಕೊಡಬೇಕೆಂಬುದು ನಮ್ಮ ಅಭಿಪ್ರಾಯ. ಇನ್ನಾದರೂ ಬೆಳಗೊಳದಲ್ಲಿ ಹಿಂದಿ ಬಳಕೆ ಕಡಿಮೆ ಮಾಡಿ ಕನ್ನಡ ಬಳಕೆ ಹೆಚ್ಚೆಚ್ಚು ಮಾಡಲಿ ಎಂದು ಆಶಿಸೋಣ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
