fbpx
ಸಮಾಚಾರ

ಚೆನ್ನೈ ಬೀದಿಯಲ್ಲಿ ನಿಜವಾಗಿಯೂ ಹುಚ್ಚನಾದ ಹುಚ್ಚ ವೆಂಕಟ್- ವಿಡಿಯೋ ವೈರಲ್.

ಮಾತೆತ್ತಿದ್ದರೆ ‘ನನ್ನ್ ಎಕ್ಕಡ’ ಎಂದು ಹೇಳುತ್ತಿದ್ದ ಹುಚ್ಚ ವೆಂಕಟ್ ಈಗ ಕಾಲಿಗೆ ಚಪ್ಪಲಿ ಕೂಡ ಇಲ್ಲದೇ ಅಲೆಯುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ಚೆನ್ನೈನ ಬೀದಿ ಎಂದು ಹೇಳಲಾಗುತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅವರ ಕಾಲಿನಲ್ಲಿ ಚಪ್ಪಲ್ಲಿ ಇಲ್ಲದಿರುವುದು ಎಲ್ಲರ ಗಮನಕ್ಕೆ ಬಂದಿದೆ.

ವಿಡಿಯೋ ನೋಡಿ:

 

ಚೆನ್ನೈನ ಬೀದಿ ಬೀದಿಗಳಲ್ಲಿ ಚಪ್ಪಲಿಯೇ ಇಲ್ಲದೇ ಓಡಾಡುತ್ತಿರೋ ದೃಶ್ಯ ಕಂಡುಬಂದಿದೆ. ಚೆನ್ನೈ ರಸ್ತೆಯಲ್ಲಿ ಅಕ್ಷರಶಃ ಹುಚ್ಚನಂತೆ ಅಲೆದಾಡುತ್ತಿದ್ದಾರೆ. ‘ದುರಹಂಕಾರಿ ಹುಚ್ಚ ವೆಂಕಟ್’ ಸಿನಿಮಾ ಮಾಡ್ತೀನಿ ಅಂತ ಹೇಳಿದ್ದ ಹುಚ್ಚ ವೆಂಕಟ್ ಇದೀಗ ಬರಿಗಾಲಿನಲ್ಲಿ ಚೆನ್ನೈ ಬೀದಿಗಳಲ್ಲಿ ಸುತ್ತುತ್ತಿರುವುದು ಯಾಕೆ ಅನ್ನೋದಿನ್ನೂ ಗೊತ್ತಾಗಿಲ್ಲ. ಏಕಾಏಕಿ ಚೆನ್ನೈಗೆ ತೆರಳಿರುವ ಹುಚ್ಚ ವೆಂಕಟ್ ಗೆ ಅಲ್ಲೇನು ಕೆಲಸ ಎಂಬ ಮಾಹಿತಿ ಲಭ್ಯವಾಗಿಲ್ಲ.

ಭುವನ್ ಪೊನ್ನಣ್ಣ ಅಭಿನಯದ ರಾಂಧವ ಚಿತ್ರ ಇದೆ ವಾರ ಬಿಡುಗಡೆಯಾಗಲಿದೆ. ಈ ಹಿನ್ನಲೆಯಲ್ಲಿ ಚಿತ್ರತಂಡ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕಾಗಿ ಚೆನ್ನೈಗೆ ತೆರಳಿತ್ತು. ಈ ವೇಳೆ ದಾರಿಯಲ್ಲಿ ಹುಚ್ಚ ವೆಂಕಟ್ ಹುಚ್ಚನಂತೆ ಹೋಗುತ್ತಿರುವುದನ್ನು ಗಮನಿಸಿದ್ದಾರೆ.

ಕಾಲಿಗೆ ಚಪ್ಪಲಿಯಿಲ್ಲದೆ , ವಿಚಿತ್ರ ಹುಚ್ಚನ ಹಾಗೆ ಬಟ್ಟೆ ಹರಿದುಕೊಂಡ ಹುಚ್ಚ ವೆಂಕಟ್ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಚೆನ್ನೈಲ್ಲಿ ತಿರುಗಾಡುತ್ತಿರುವ ಬಗ್ಗೆ ವಿಡಿಯೋ ಮೂಲಕ ನಟ ಭುವನ್ ಅವರು ತಿಳಿಸಿದ್ದಾರೆ. ಭುವನ್ ಪೊನ್ನಣ್ಣ ಹುಚ್ಚ ವೆಂಕಟ್ ಬಗ್ಗೆ ಕಾಳಜಿ ವಹಿಸಿದ್ದು ಆತನ ಸುಳಿವಿಗಾಗಿ ಹುಡುಕಾಟ ನಡೆಸಿದ್ದಾರೆ. ವೆಂಕಟ್ ಈ ಸ್ಥಿತಿಯಲ್ಲಿ ಇರುವುದನ್ನ ಕಂಡು ಮರುಗಿರುವ ಭುವನ್ ಹುಚ್ಚ ವೆಂಕಟ್ ನೆರವಿಗೆ ಸ್ಪಂದಿಸಲು ಮನವಿ ಮಾಡಿದ್ದಾರೆ.

ಇತ್ತಿಚೇಗಷ್ಟೆ ‘ದುರಹಂಕಾರಿ ಹುಚ್ಚ ವೆಂಕಟ್’ ಚಿತ್ರದ ಪ್ರೋಮೊ ರಿಲೀಸ್ ಮಾಡಿದ್ದ ವೆಂಕಟ್​, ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದರು. ಆರ್.ಆರ್. ನಗರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು, ಚುನಾವಣಾ ಆಯೋಗದಿಂದ ಚಪ್ಪಲ್ಲಿ ಗುರುತು ಪಡೆದುಕೊಂಡಿದ್ದರು. ಚಪ್ಪಲ್ಲಿ ಮೇಲೆ ಇಷ್ಟೆಲ್ಲ ಪ್ರೀತಿ ಹೊಂದಿರುವ ಅವರು ಬರಿಗಾಲಿನಲ್ಲಿ ಓಡಾಡುತ್ತಿರುವುದೇಕೆ ಎಂದು ಅನೇಕರು ಪ್ರಶ್ನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top