fbpx
ಸಮಾಚಾರ

ಕನ್ನಡ ರಕ್ಷಿಸಲು ಹೋಗಿ ಧರ್ಮಕ್ಕೆ ಅಪಚಾರ ಮಾಡಿದರೇ ಕನ್ನಡಪರ ಹೋರಾಟಗಾರರು!

ಬೆಂಗಳೂರಿನ ಜೈನ ಧಾರ್ಮಿಕ ಕೇಂದ್ರದ ಮುಂದೆ ಹಾಕಿದ್ದ ಹಿಂದಿ ಭಾಷೆಯನಾಮ ಫಲಕ ಕಿತ್ತು ಹಾಕಿದ ಘಟನೆಗೆ ತಾಯ್ನಾಡು, ಧರ್ಮದ, ಆತ್ಮಾಭಿಮಾನ, ರಾಜಕೀಯ, ಕಾನೂನಿನ ಆಯಾಮಗಳು ಸಿಕ್ಕಿವೆ. ಹಿಂದಿ ಬ್ಯಾನರ್‌ ಕಿತ್ತಿದ್ದಕ್ಕೆ ಜೈನ ಸಮುದಾಯದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದ್ದರೆ ಕನ್ನಡ ಕಾರ್ಯಕರ್ತರನ್ನು ಬಂಧಿಸಿದ್ದಕ್ಕೆ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಸಂಘಟನೆಗಳು ಸಾಮಾಜಿಕ ತಾಣಗಳ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

 

 

ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯಲ್ಲಿರುವ ಜೈನ ದೇವಾಲಯದ ಪ್ರವೇಶ ದ್ವಾರದಲ್ಲಿ ಹಾಕಿದ್ದ ಹಿಂದಿ ಬ್ಯಾನರ್ ಅನ್ನು ಕನ್ನಡ ಪರ ಕಾರ್ಯಕರ್ತರು ಕಿತ್ತುಹಾಕಿದ್ದರು. ಘಟನೆಯ ಸಂಬಂಧ ಆರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಕಾರ್ಯಕರ್ತರ ಬಂಧನವಾಗುತ್ತಲೇ ಸಾಮಾಜಿಕ ತಾಣಗಳಲ್ಲಿ ಕನ್ನಡದ ಚರ್ಚೆ ಆರಂಭವಾಗಿವೆ.

ಧರ್ಮಕ್ಕೆ ಅಪಚಾರ?
ಈ ನಡುವೆ ಕನ್ನಡ ಹೋರಾಟಗಾರರು ಕನ್ನಡದ ರಕ್ಷಣೆಯ ಹೆಸರಿನಲ್ಲಿ ಜೈನ ಧರ್ಮಕ್ಕೆ ಅಪಚಾರ ಮಾಡಿದ್ದಾರೆ ಎನ್ನುವ ಆರೋಪವೊಂದು ಕೇಳಿಬರುತ್ತಿದೆ. ಹಿಂದಿ ಬ್ಯಾನರ್ ಅನ್ನು ಕಿತ್ತುಹಾಕುವ ವೇಳೆ ಕನ್ನಡ ಪರ ಹೋರಾಟಗರು ‘ಜೈನ ಧರ್ಮನ ಪವಿತ್ರ ನಮೋಕಾರ ಮಂತ್ರವನ್ನು ಕಾಲಿನಿಂದ ತುಳಿದು ಧರ್ಮ ನಿಂದನೆ ಮಾಡಿದ್ದಾರೆ.. ಕನ್ನಡ ಪರ ಕಾರ್ಯಕರ್ತರ ಈ ನಡೆಯಿಂದ ಜೈನ ಧರ್ಮೀಯರ ಧಾರ್ಮಿಕ ನಂಬಿಕೆಗೆ ಧಕ್ಕೆಯುಂಟಾಗಿದೆ, ಕನ್ನಡ ಪರ ಕಾರ್ಯಕರ್ತರು ಕನ್ನಡ ಉಳಿಸುವ ಸಲುವಾಗಿ ಈ ರೀತಿ ಧರ್ಮಕ್ಕೆ ಅಪಚಾರ ಮಾಡಿರುವುದು ತಪ್ಪು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಇನ್ನು ಜೈನ ದೇವಾಲಯಗಳಲ್ಲಿ ಧ್ವನಿವರ್ಧಕದಲ್ಲಿ ಹೆಚ್ಚಾಗಿ ಹಿಂದಿ ಭಾಷೆಯಲ್ಲಿ ಘೋಷಣೆ ಮಾಡಲಾಗುತ್ತಿದೆ. ಕನ್ನಡ ಬಳಕೆ ಹಿಂದಿಗಿಂತ ಕಡಿಮೆಯಾಗಿದೆ. ರಾಜಸ್ತಾನ, ಗುಜರಾತ್ ಮೂಲದ ಹಿಂದಿ ಜೈನಗರಿಗಾಗಿ ಕನ್ನಡಿಗ ಜೈನರನ್ನು ಕಡೆಗಣಿಸಿ ಹಿಂದಿಗೆ ಪ್ರಾಧ್ಯಾನ್ಯತೆ ಕೊಡುವುದು ಎಷ್ಟು ಸರಿ? ಎಂಬ ಅಸಮಾಧಾನ ಕೆಲವೆಡೆ ಕೇಳಿ ಬರುತ್ತಿದೆ. ಕನ್ನಡದಲ್ಲಿ ಅಪಾರವಾಗಿ ಜೈನ ಭಕ್ತಿ ಗೀತೆಗಳು ಲಭ್ಯವಿದ್ದರೂ ಹೆಚ್ಚಾಗಿ ಹಿಂದಿ ಭಕ್ತಿ ಗೀತೆಗಳನ್ನು ಬಳಸುವುದು ಎಷ್ಟು ಸರಿ, ನಾಮಫಲಕಗಳು ಹಾಗೆಯೇ ಬಸ್ತಿಯ ಎಲ್ಲ ಕಡೆ ಹಿಂದಿ ಇರುವುದು ಮೂಲ ಕನ್ನಡಿಗ ಜೈನರ ಅಸಮಾಧಾನಕ್ಕೆ ಕಾರಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top