fbpx
ಸಿನಿಮಾ

ಕಿಚ್ಚ ಸುದೀಪ್ ಅಭಿನಯದ ಬಹುಭಾಷ ಬಿಗ್ ಬಜೆಟ್ ಚಿತ್ರ ಬಿಡುಗಡೆಗೆ ಇನ್ನೇನು ಕ್ಷಣಗಣನೆ

ತೆಲುಗಿನಲ್ಲಿ ತಯಾರಾಗ್ತಿರೋ ಅತ್ಯಂತ ಹೈ ಬಜೆಟ್ ಸಿನಿಮಾ ಎಂದೇ ಖ್ಯಾತಿ ಗಳಿಸಿರುವ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈ ರಾ ನರಸಿಂಹರೆಡ್ಡಿ ಪ್ರೇಕ್ಷಕ ವರ್ಗದಲ್ಲಿ ಚಿತ್ರದ ಬಗೆಗಿನ ನಿರೀಕ್ಷೆಯ ಮಟ್ಟವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ಮಲ್ಟಿ ಸ್ಟಾರ್ ಕಾಸ್ಟಿಂಗ್ ಸಿನಿಮಾ ಆಗಿರುವ ಸೈ ರಾ ನರಸಿಂಹರೆಡ್ಡಿ ಸಿನಿಮಾದಲ್ಲಿ ಹಿಂದಿ ಸೂಪರ್​ ಸ್ಟಾರ್ ಅಮಿತಾಭ್​ ಬಚ್ಚನ್ , ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ , ತಮಿಳು ಸ್ಟಾರ್ ವಿಜಯ್ ಸೇತುಪತಿ, ಸೇರಿದಂತೆ ಹಲವು ಸ್ಟಾರ್​ಗಳು ಕೂಡ ನಟಿಸಲಿದ್ದಾರೆಂಬ ಸುದ್ದಿ ಹೀಗಾಗಲೇ ಎಲ್ಲೆಡೆ ಹರಿದಾಡುತ್ತಿದ್ದು, ಕನ್ನಡದ ಕಿಚ್ಚ ಈ ಸಿನಿಮಾದಲ್ಲಿ ನಟಿಸುತ್ತಿರುವುದು ಕನ್ನಡಿಗರಿಗೆ ಖುಷಿ ತಂದಿದೆ. ಒಟ್ಟಿನಲ್ಲಿ ಸಿನಿ ಪ್ರಿಯರು ಈ ಸಿನಿಮಾದ ಬಿಡುಗಡೆಗೆ ಕಾಯುತ್ತಿರುವುದಂತೂ ಹೌದು.

ಕನ್ನಡ ಚಿತ್ರರಂಗದಲ್ಲಿ ಪರಭಾಷಾ ಚಿತ್ರಗಳ ಡಬ್ಬಿಂಗ್ ಬಗೆಗಿನ ಚರ್ಚೆ, ವಾದ ವಿವಾದ ಚಾಲ್ತಿಗೆ ಬಂದು ವರ್ಷಗಳೇ ಕಳೆದಿವೆ. ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡುವ ವಿಚಾರವಾಗಿ ಮತ್ತೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಪರ ವಿರೋಧಗಳ ಕಾದಾಟ ಕಾವೇರಿಕೊಂಡಿದೆ. ಇಂಥಾ ಸಂದರ್ಭದಲ್ಲಿ ಬಹು ನಿರೀಕ್ಷಿತ ತೆಲುಗಿನ ‘ಸೈರಾ ನರಸಿಂಹ ರೆಡ್ಡಿ’ ಚಿತ್ರ ಕನ್ನಡಕ್ಕೆ ಡಬ್‌ ಆಗಲಿದೆ, ಮೆಗಾಸ್ಟಾರ್​ ಚಿರಂಜೀವಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ಸೈರಾ ನರಸಿಂಹರೆಡ್ಡಿ’ ಚಿತ್ರದಲ್ಲಿ ಕನ್ನಡ ಸ್ಟಾರ್ ಕಿಚ್ಚ ಸುದೀಪ್ ಅವರು​ ಅವುಕು ರಾಜ್ಯದ ರಾಜನಾಗಿ ನಟಿಸುತ್ತಿದ್ದಾರೆ. ಮೊನ್ನೆಯಷ್ಟೇ ಅವರ ಫಸ್ಟ್​ ಲುಕ್​ ರಿವೀಲ್ ಆಗಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಹೀಗಾಗಿ, ಇದು ಸ್ಯಾಂಡಲ್ ವುಡ್ ಅಭಿಮಾನಿಗಳಿಗೂ ಚಿತ್ರದ ಮೇಲೆ ಒಂದು ರೀತಿ ಕುತೂಹಲ ಮನೆಮಾಡಿದೆ

ಅಂದಹಾಗೆ ಈ ಚಿತ್ರವನ್ನು ಚಿರಂಜೀವಿ ಅವರ ಮಗ ರಾಮ್ ಚರಣ್ ಅವರೇ ನಿರ್ಮಾಣ ಮಾಡುತ್ತಿದ್ದು ಖ್ಯಾತ ನಿರ್ದೇಶಕ ಸುರೇಂದರ್ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬೇರೆ ಬೇರೆ ಭಾಷೆಗಳ ನಟರದ್ದೊಂದು ಮಹಾ ಸಂಗಮವಾಗಲಿರೋದು ಅಸಲೀ ಕುತೂಹಲ!ಈ ಚಿತ್ರದ ಮೇಕಿಂಗ್ ವಿಡಿಯೋ 73ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಿಲೀಸ್ ಮಾಡಲಾಗಿತ್ತು. ಲೇಡಿ ಸೂಪರ್​ಸ್ಟಾರ್ ನಯನತಾರಾ ಚಿತ್ರದ ನಾಯಕಿಯಾಗಿದ್ದು, ಮತ್ತೊಂದು ಹಿರೋಯಿನ್ ಆಗಿ ಮಿಲ್ಕ್​ ಬ್ಯೂಟಿ ತಮನ್ನಾ ಕಾಣಿಸಲಿದ್ದಾರೆ,ಹಾಗೆಯೇ ಬ್ರಿಟಿಷರ ಜತೆ ಕೈ ಜೋಡಿಸುವ ದೇಶದ್ರೋಹಿ ಪಾತ್ರವನ್ನು ಜಗಪತಿ ಬಾಬು ನಿರ್ವಹಿಸಿದ್ದಾರೆ ಎನ್ನಲಾಗಿದೆ. ಅದೇ ರೀತಿ ನಿಹಾರಿಕಾ ಹಾಗೂ ವಿಜಯ್ ಸೇತುಪತಿ ಸ್ವಾತಂತ್ರ ಹೋರಾಟಕ್ಕೆ ಕೈ ಜೋಡಿಸಿದ ಆದಿವಾಸಿ ನಾಯಕ-ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top