fbpx
ಸಮಾಚಾರ

ತೊಡೆ ಕಚ್ಚಿದ ಪ್ರಕರಣ: ಪ್ರಥಮ್‌-ಭುವನ್‌ ನಡುವಿನ ವಿವಾದ ಸುಖಾಂತ್ಯ, ಬಹಿರಂಗವಾಗಿ ಕ್ಷಮೆಯಾಚಿಸಿದ ಒಳ್ಳೆ ಹುಡುಗ.

ಬಿಗ್ ಬಾಸ್ ಪ್ರಥಮ್ ಭುವನ್ ತೊಡೆ ಕಚ್ಚಿದ ಪ್ರಕರಣ ಈಗ ನಿರ್ಮಾಪಕ ವಿತರಕ ಜಯಣ್ಣ ಮತ್ತು ರಮೇಶ್ ಮಧ್ಯಸ್ಥಿಕೆಯಲ್ಲಿ ಸಂಧಾನವಾಗಿದೆ. ಪ್ರಥಮ್‌ ಬಹಿರಂಗವಾಗಿ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ಭುವನ್‌ ಕೇಸ್ ವಾಪಸ್ ಪಡೆಯಲು ಸಮ್ಮತಿ ಸೂಚಿಸಿದ್ದಾರೆ.

ಆದ್ರೆ ಭುವನ್ ಈ ಸಂದಾನಕ್ಕೆ ಒಂದು ಕಂಡೀಶನ್ ಹಾಕಿದ್ದಾರೆ. ಪ್ರಥಮ್ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. ಮೊದಲ ಕ್ಷಮೆ ಕೇಳಲು ಹಿಂಜರಿದ ಪ್ರಥಮ್ ನಂತರ ಜಯಣ್ಣ ಮಾತಿನ್ನು ಕೇಳಿ ಒಪ್ಪಿಕೊಂಡು ಮಾಧ್ಯಮದ ಮುಂದೆ ಕ್ಷಮೆಯಾಚಿಸಿದ್ದಾರೆ. ಮಾಧ್ಯಮಗಳ ಮುಂದ ಹಾಜರಾಗಿ, ನನಗೆ ನನ್ನ ತಪ್ಪಿನ ಅರಿವಾಗಿದೆ. ನಾನು ಬದಲಾಗಿದ್ದೇನೆ. ಆದ್ದರಿಂದ ಈ ಕೇಸ್ ವಾಪಸ್ ಪಡೆಯಿರಿ ಎಂದು ಪ್ರಥಮ್ ಹೇಳಿದರು.

ಅಂದ್ಹಾಗೇ, ಪ್ರಕರಣದಿಂದ ರೋಸಿ ಹೋಗಿದ್ದ ಪ್ರಥಮ್‌ ಹಲವು ಬಾರಿ ಕೇಸ್ ವಾಪಸ್ ಪಡೆಯುವಂತೆ ಭುವನ್ ಹಿಂದೆ ದುಂಬಾಲು ಬಿದ್ದಿದ್ದರು. ಆದ್ರೆ, ಭುವನ್‌ ಕೇಸ್ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದಾಗ, ಪ್ರಥಮ್‌ ನಿರಾಶೆಗೊಂಡಿದ್ದರು. ಈ ನಡುವೆ ಜಯಣ್ಣ ಅವರು ಇವರಿಬ್ಬರನ್ನ ಕರೆಸಿ, ರಾಜಿ ಸಂಧಾನ ಮಾಡಿದ್ದಾರೆ.

ಏನಿದು ಪ್ರಕರಣ?
ಕಿರುತೆರೆ ದಾರಾವಾಹಿಯೊಂದರ ಚಿತ್ರೀಕರಣ ಸಮಯದಲ್ಲಿ ನಡೆದಿದ್ದ ಭುವನ್ ಮತ್ತು ಪ್ರಥಮ್ ನಡುವಿನ ಕಿತ್ತಾಟದ ಪ್ರಕರಣ ಇದಾಗಿದ್ದು ಪ್ರಥಮ್, ಭುವನ್ ಗೆ ಹಸುವಿನ ಮಾಂಸ ತಿನ್ನುತ್ತೀಯಾ ಎಂದು ಹೇಳಿ ಕರೆಳಿಸಿ ಭುವನ್ ತೊಡೆಗೆ ಸರಿಯಾಗಿ ಕಚ್ಚಿದ್ದರು. ಪ್ರಥಮ್ ಕಚ್ಚಿದ ಎಫೆಕ್ಟ್ ಗೆ ಭುವನ್ ಆಸ್ಪತ್ರೆ ಸೇರಿದ್ದರು. ತನ್ನ ತೊಡೆಯನ್ನು ಪ್ರಥಮ್ ಕಚ್ಚಿದ್ದಾನೆ ಎಂದು ಆರೋಪಿಸಿ ಭುವನ್ ಕೇಸು ಹಾಕಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top