fbpx
ಸಮಾಚಾರ

ಜೈನ ಕಾಶಿ ಮೂಡುಬಿದಿರೆಯಲ್ಲಿ ಇಂದಿನಿಂದ ವಿಶೇಷ ಪೂಜೆ ಅಭಿಷೇಕಗಳು!

ಜೈನ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಮೂಡುಬಿದಿರೆಯಲ್ಲಿ ಇಂದಿನಿಂದ ವಿಶೇಷ ಪೂಜೆ ಮತ್ತು ಅಭಿಷೇಕಲು ನಡೆಯಲಿವೆ. ಶ್ರೀ ಜೈನ ಮಠ ದಲ್ಲಿ ಇಂದಿನಿಂದ ಸಿಂಹ ಮಾಸದ ವಿಶೇಷ ಮಂಗಳವಾರ ಹಾಗೂ ಶುಕ್ರವಾರ ಗುರುಗಳ ಬಸದಿ, ಶೆಟ್ರ ಬಸದಿ, ಅಮ್ಮನ ವರ ಬಸದಿಯಲ್ಲಿ ವಿಶೇಷ ಪೂಜೆ ಅಭಿಷೇಕಗಳು ನಡೆಯಲಿವೆ.

ಈ ಎಲ್ಲಾ ಮಹೋತ್ಸವಗಳು ಸ್ವಸ್ಥಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಗಳವರ ದಿವ್ಯ ಮಾರ್ಗ ದರ್ಶನ ದಲ್ಲಿ ಇಂದಿನಿಂದ (ದಿನಾಂಕ 20-8-19 ರಿಂದ) ಜರುಗಲಿದ್ದು ಶ್ರೀ ಮಠ ಸರ್ವರಿಗೂ ಆದರದ ಸ್ವಾಗತವನ್ನು ಕೋರಿದೆ.

ಮೂಡು ಬಿದ್ರೆಯು ಜೈನಕ್ಷೇತ್ರಗಳಲ್ಲಿ ಜೈನ ಕಾಶಿ ಎಂದೇ ಪ್ರಖ್ಯಾತ. ಅದಕ್ಕೆ ಕಾರಣ ಅಲ್ಲಿರುವ ಹದಿನೆಂಟು ಜೈನ ಬಸದಿಗಳು. ಇಲ್ಲಿ ೧೮ ದೇವಸ್ಥಾನಗಳು, ೧೮ ಜೈನ ಬಸದಿಗಳು ಮತ್ತು ೧೮ ಕೆರೆಗಳು ಇವೆ. ಇಲ್ಲಿನ ಬಸದಿಗಳಲ್ಲಿ ಸಾವಿರ ಕಂಬದ ಬಸದಿಯು ಒಂದು ಪ್ರೇಕ್ಷಣೀಯ ಸ್ಥಳವಾಗಿದೆ. ಗುರು ಬಸದಿಯು ಜೈನರ ಪವಿತ್ರ ಗ್ರಂಥಗಳಾದ ಶ್ರೀಧವಳ ಮತ್ತು ಮಹಾ ಧವಳಗಳ ಹಸ್ತಪ್ರತಿಗಳನ್ನು ಹೊಂದಿದ್ದು, ಆ ಕಾರಣದಿಂದ ಸಿದ್ಧಾಂತ ಬಸದಿ ಎಂದೂ ಕರೆಯಲ್ಪಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top