fbpx
ಸಮಾಚಾರ

ರಿಲೀಸ್ ಆಯ್ತು ‘ಸೈರಾ’ ಟೀಸರ್- ಕನ್ನಡದಲ್ಲೂ ರಿಲೀಸ್ ಮಿಂಚುಹರಿಸಿದ ನರಸಿಂಹ ರೆಡ್ಡಿ.

ಟಾಲಿವುಡ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುನೀರಿಕ್ಷಿತ ಚಿತ್ರ ಸೈರಾ ನರಸಿಂಹ ರೆಡ್ಡಿ, ಭಾರತೀಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಿಚ್ಚ ಸುದೀಪ್ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಈಗ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

 

 

ತೆಲುಗು, ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದ್ದು, ಈ ಎಲ್ಲ ಭಾಷೆಗಳಲ್ಲಿ ಟೀಸರ್​ ರಿಲೀಸ್ ಆಗಿರುವುದು ವಿಶೇಷ. ಇಂದು ಮಧ್ಯಾಹ್ನ ಸರಿಯಾಗಿ 2.40ಕ್ಕೆ ಟೀಸರ್​ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಪ್ರಕಟಿಸಿತ್ತು. ಅದರಂತೆ ಟೀಸರ್​ ರಿಲೀಸ್​ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದು ರಿಲೀಸ್​ ಆಗಿ ಕೆಲವೇ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ.

ಈ ಟೀಸರ್ ನೋಡುತ್ತಿದ್ದರೇ, ಚಿತ್ರದ ಮೇಲಿನ ನಿರೀಕ್ಷೆಯನ್ನು ಹಿಮ್ಮಡೆಗೊಳಿಸುತ್ತಿದೆ. ಸಿನಿಮಾದಲ್ಲಿ ಬಿಗ್‌ಬಿ ಅಮಿತಾಭ್ ಬಚ್ಚನ್, ತಮಿಳು ನಟ ವಿಜಯ್ ಸೇತುಪತಿ, ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್, ಬಹುಭಾಷಾ ನಟಿ ನಯನತಾರಾ, ಜಗಪತಿ ಬಾಬು ನಟಿಸಿದ್ದಾರೆ. ರಾಮ್‌ಚರಣ್‌ ತೇಜ ಚಿತ್ರಕ್ಕೆ ಹಣ ಹೂಡಿದ್ದು, ಸುರೇಂದರ್ ರೆಡ್ಡಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ದೇಶಭಕ್ತನ ಕತೆಯಾಗಿದ್ದು, ನೈಜ ಘಟನೆ ಆಧಾರಿತವಾಗಿದೆ. 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಇದೇ ಅಕ್ಟೋಬರ್​ 2ಕ್ಕೆ ತೆರೆಕಾಣಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top