fbpx
ಸಮಾಚಾರ

ಭಾರತೀಯ ಯುವತಿ ಜೊತೆ ಮದುವೆಯಾದ ಪಾಕ್ ಕ್ರಿಕೆಟಿಗ!

ಭಾರತೀಯ ಮೂಲದ ಶಾಮಿಯಾ ಅರ್ಜೂ ಜೊತೆ ಪಾಕಿಸ್ತಾನ ಕ್ರಿಕೆಟಿಗ ಹಸನ್ ಅಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಾಕ್ ಕ್ರಿಕೆಟಿಗ ಶೋಯೆಬ್​ ಮಲಿಕ್ ಸಾನಿಯಾ ಮಿರ್ಜಾ ವಿವಾಹದ ನಂತರ ಇದೇ ಮಾದರಿಯಲ್ಲಿ ಮತ್ತೋರ್ವ ಪಾಕಿಸ್ತಾನದ ಕ್ರಿಕೆಟಿಗ ಭಾರತೀಯ ಯುವತಿಯನ್ನು ದುಬೈನಲ್ಲಿ ಆಗಸ್ಟ್ 20ರಂದು ವಿವಾಹವಾಗಿದ್ದಾರೆ.

ಮದುವೆಯಲ್ಲಿ ಎರಡು ಕುಟುಂಬಗಳ ಆಪ್ತರು ಮಾತ್ರ ಭಾಗಿಯಾಗಿದ್ದರು. ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ತರಬೇತಿ ಹಿನ್ನೆಲೆಯಲ್ಲಿ ಗೈರಾಗಿದ್ದರು. ಹಸನ್ ಅಲಿ ಕುಟುಂಬಸ್ಥರು ಆಯೋಜಿಸುವ ವಲೀಮಾ (ಆರತಕ್ಷತೆ)ದಲ್ಲಿ ಪಾಕ್ ಕ್ರಿಕೆಟ್ ತಂಡ ಭಾಗಿಯಾಗಲಿದೆ ಎಂದು ವರದಿಯಾಗಿದೆ.

ಹರಿಯಾಣ ಮೂಲದ ಶಮಿಯಾ, ವೈಮಾನಿಕ ವಿಜ್ಞಾನ ಪದವೀಧರೆಯಾಗಿದ್ದಾರೆ. 25 ವರ್ಷದ ಹಸನ್ ಅಲಿ ಪಾಕ್ ಪರ 9 ಟೆಸ್ಟ್, 51 ಏಕದಿನ ಮತ್ತು 29 ಟಿ20 ಪಂದ್ಯ ಆಡಿದ್ದಾರೆ. ಇವರಿಬ್ಬರ ವೆಡ್ಡಿಂಗ್ ಫೋಟೋಶೂಟ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಸನ್ ಭಾರತದ ಅಳಿಯನಾದ ಪಾಕಿಸ್ತಾನದ 4ನೇ ಕ್ರಿಕೆಟಿಗರೆನಿಸಿದ್ದಾರೆ. ಜಹೀರ್ ಅಬ್ಬಾಸ್, ಮೊಹ್ಸಿನ್ ಖಾನ್ ಮತ್ತು ಶೋಯಿಬ್ ಮಲಿಕ್ ಹಿಂದಿನ ಮೂವರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top