fbpx
ಸಮಾಚಾರ

ಬಹುನಿರೀಕ್ಷಿತ ಪೈಲ್ವಾನ್ ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್- ಎಲ್ಲಾ ಭಾಷೆಗಳಲ್ಲಿಯೂ ನಾಳೆಯೇ ರಿಲೀಸ್.

ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಟ್ರೈಲರ್ ನಾಳೆ ಬಿಡುಗಡೆಯಾಗುತ್ತಿದೆ. ಕನ್ನಡವೂ ಸೇರಿ ಒಟ್ಟು 5 ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾ ನಾಳೆಯೇ ಎಲ್ಲಾ ಭಾಷೆಗಳಲ್ಲಿ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದೆ. ಚಿತ್ರತಂಡ ನೀಡಿರುವ ಮಾಹಿತಿಯ ಪ್ರಕಾರ ಚಿತ್ರದ ಟ್ರೈಲರ್ ನಾಳೆ ಮದ್ಯಾಹ್ನ
1 ಗಂಟೆಗೆ ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದೆಯಂತೆ.

 

 

ಸೆಪ್ಟೆಂಬರ್ 12ಕ್ಕೆ ಸಿನಿಮಾ ತೆರೆಗೆ:
ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದ್ದು ಸೆಪ್ಟೆಂಬರ್ 12ರಂದು ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದಾರೆ. ಇನ್ನು ಐದೂ ಭಾಷೆಯಲ್ಲಿಯೂ ಅಂದೇ ಚಿತ್ರ ತೆರೆಕಾಣಲಿದೆ. ಪಂಚಭಾಷೆಯಲ್ಲಿ ನಿರ್ಮಾಣವಾಗಿರುವ ಪೈಲ್ವಾನ್ ವಿತರಣಾ ಹಕ್ಕನ್ನು ಜೀ ಸ್ಟುಡಿಯೋಸ್ ಪಡೆದುಕೊಂಡಿದ್ದು, ದೇಶದಾದ್ಯಂತ ಚಿತ್ರವನ್ನು ಏಕಕಾಲದಲ್ಲಿ 2500ಕ್ಕಿಂತ ಹೆಚ್ಚಿನ ಚಿತ್ರಮಂದಿರದಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.

ಪೈಲ್ವಾನ್ ಬಗ್ಗೆ:
ಪೈಲ್ವಾನ್ ಚಿತ್ರದ ಬಗ್ಗೆ ಹೇಳಬೇಕೆಂದರೆ ಮುಂಬೈ ಬೆಡಗಿ ಆಕಾಂಕ್ಷ ಸಿಂಗ್ ಸುದೀಪ್’ಗೆ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಬಾಲಿವುಡ್ ನಟ ಸುನಿಲ್ ಶೆಟ್ಟಿ, ಕರುಣ್ ದುಹಾನ್ ಸಿಂಗ್, ಸುಶಾಂತ್ ಸಿಂಗ್, ಅವಿನಾಶ್ ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. RRR ಮೋಶನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಪೈಲ್ವಾನ್ ಚಿತ್ರವನ್ನು ನಿರ್ದೇಶಕ ಕೃಷ್ಣಾ ಅವರ ಪತ್ನಿ ಸ್ವಪ್ನ ಕೃಷ್ಣಾ ನಿರ್ಮಾಣ ಮಾಡುತ್ತಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಕರುಣಾಕರ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top