fbpx
ಸಮಾಚಾರ

ಮತ್ತೊಂದು ವಿವಾದ ಮಾಡಿಕೊಂಡ ಆರ್​ಜಿವಿ: ನಟಿಗೆ ವರ್ಮಾ ಕಳುಹಿಸಿದ ವಿಡಿಯೋದಲ್ಲಿ ಏನಿತ್ತು?

ಬಾಲಿವುಡ್ ವಿಕ್ಷಿಪ್ತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಸಿನಿಮಾಗಳ ಮೂಲಕ ಸದ್ದು ಮಾಡುವ ಬದಲು ವಿವಾದಗಳ ಮೂಲಕವೇ ಹೆಚ್ಚು ಸುದ್ದಿ ಆದವರು.. ಸುದ್ದಿಯಾಗಲು ಏನೂ ವಿಷಯವಿಲ್ಲದಿದ್ದರೇ, ಅವರಿರಿವರ ಮೇಲೆ ಸುಖಾ ಸುಮ್ಮನೆ ಹರಿ ಹಾಯುತ್ತಾ, ಕೆಣಕುವ ಮೂಲಕ ನಾನಾ ರೀತಿಯ ವಿವಾದಗಳನ್ನು ಎಬ್ಬಿಸಿ ಒಳಗೊಳಗೇ ವಿಕೃತಾನಂದವನ್ನು ಪಡೆಯುತ್ತಾ ಬಂದಿದ್ದ ವರ್ಮಾ ಇತ್ತೀಚಿಗೆ ಯಾವುದೇ ವಿವಾದದ ಗೋಜಿಗೆ ಹೋಗದೆ ಸುಮ್ಮನಾಗಿದ್ದಾರೆ ಎನ್ನುವಷ್ಟರಲ್ಲೇ ಮತ್ತೊಂದು ವಿವಾದ ಮಾಡಿಕೊಂಡಿದ್ದಾರೆ.

ವಿಡಿಯೋ ನೋಡಿ

 

ಶೆರ್ಲಿನ್ ಚೋಪ್ರಾ ಅವರಿಗೆ ರಾಮ್ ಗೋಪಾಲ್ ವರ್ಮಾ ನೋಡಬಾರದಂತಹ ವಿಡಿಯೋವನ್ನು ಕಳುಹಿಸಿದ್ದರಂತೆ. ಶರ್ಲಿನ್​ ಅವರಿಗೆ ವಯಸ್ಕರ ಸಿನಿಮಾದಲ್ಲಿ ಅಭಿನಯಿಸೋಕೆ ರಾಮ್​ಗೋಪಾಲ್​ ವರ್ಮಾ ಆಫರ್​ ಕೊಟ್ಟಿದ್ದರಂತೆ. ಅದಕ್ಕಾಗಿ ಅವರು ಒಂದು ವಿಡಿಯೋವನ್ನು ಕಳುಹಿಸಿದ್ದರಂತೆ. ಅದರಲ್ಲಿ ಲೈಂಗಿಕತೆಯ ಹೊರತಾಗಿ ಯಾವುದೇ ಕತೆ ಇರಲಿಲ್ಲವಂತೆ. ಅದಕ್ಕಾಗಿಯೇ ಶರ್ಲಿನ್​ ಆ ಆಫರ್​ ಅನ್ನು ತಿರಸ್ಕರಿಸಿದ್ದರಂತೆ. ಈ ಬಗ್ಗೆ ಶರ್ಲಿನ್​ ಖುದ್ದು ಸಂದರ್ಶನವೊಂದರಲ್ಲಿ ಬಾಯಿಬಿಟ್ಟಿದ್ದಾರೆ.

ರಾಮ್ ಗೋಪಾಲ್ ವರ್ಮಾ ‘ಜಿಎಸ್‍ಟಿ’ ಎಂಬ ವಯಸ್ಕರ ಸಿನಿಮಾ ಮಾಡಿದ್ದರು. ಸಿನಿಮಾದಲ್ಲಿ ಪೋರ್ನ್ ಸ್ಟಾರ್ ಮಿಯಾ ಮಲ್ಕೋವಾ ನಟಿಸಿದ್ದರು. ಈ ಸಿನಿಮಾಗೆ ಮೊದಲು ರಾಮ್ ಗೋಪಾಲ್ ವರ್ಮಾ ಶರ್ಲಿನ್ ಚೋಪ್ರಾ ಅವರಿಗೆ ಆಫರ್ ನೀಡಿದ್ದರಂತೆ. ಈ ರೀತಿಯ ಸಿನಿಮಾದಲ್ಲಿ ನಟಿಸೋಕೆ ಸಾಧ್ಯಾನಾ ಅಂತ ಕೇಳಿದ್ರಂತೆ. ಬೋಲ್ಡ್ ನಟಿಯಾಗಿದ್ರೂ ಶೆರ್ಲಿನ್ ಈ ಪಾತ್ರದಲ್ಲಿ ನಟಿಸೋಕೆ ಒಪ್ಪಲಿಲ್ಲವಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top