fbpx
ಸಮಾಚಾರ

ಕೆಜಿಎಫ್ ಕ್ರೇಜ್: ಮಾರುಕಟ್ಟೆಗೆ ಲಗ್ಗೆಯಿಟ್ಟ ‘ರಾಕಿ ಭಾಯ್’ ಗಣೇಶ.

ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಪ್ರತಿ ಮನೆ ಮನೆಯಲ್ಲೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ಸಡಗರ ಸಂಭ್ರಮದಿಂದ ಆಚರಿಸೋಕೆ ಸಕಲ ತಯಾರಿಗಳು ನಡೆಯುತ್ತಿವೆ. ಹಾಗೆಯೆ ಈ ಬಾರಿಯ ಗಣೇಶೋತ್ಸವವನ್ನು ನಾನಾ ಬಗೆಯ ಗಣೇಶ ಮೂರ್ತಿಗಳು ಮತ್ತಷ್ಟು ರಂಗೇರಿಸುತ್ತಿವೆ. ಈಗಾಗಲೇ ಮಾರುಕಟ್ಟೆ ಪ್ರವೇಶ ಮಾಡಿರುವ ಮೂರ್ತಿಗಳ ಕೆಲವು ವಿಶೇಷ ಮೂರ್ತಿಗಳು ಭಕ್ತರ ಗಮನ ಸೆಳೆಯುತ್ತಿದೆ.

ಕಳೆದ ಬಾರಿ ಪ್ರಭಾಸ್‌ ಅಭಿನಯದ ‘ಬಾಹುಬಲಿ’, ಸುದೀಪ್‌ ಮತ್ತು ಶಿವರಾಜ್‌ ಕುಮಾರ್‌ ನಟನೆಯ ‘ದಿ ವಿಲನ್‌’ ಸೇರಿದಂತೆ ಹಲವು ಚಿತ್ರಗಳ ಥೀಮ್‌ ಬಳಸಿಕೊಂಡು ಗಣೇಶ ಮೂರ್ತಿಯನ್ನು ತಯಾರು ಮಾಡಲಾಗಿತ್ತು. ಈ ಬಾರಿ ಯಶ್‌ ನಟನೆಯ ‘ಕೆಜಿಎಫ್‌ 2’ ಚಿತ್ರದ ಅವತಾರ ತಾಳಿದ್ದಾನೆ ಗಣೇಶ. ಈ ‘ಕೆಜಿಎಫ್‌’ ಸಿನಿಮಾದ ವಿಘ್ನನಾಶಕ ಕೇವಲ ಕರ್ನಾಟಕದಲ್ಲಿಮಾತ್ರವಲ್ಲ, ಮುಂಬಯಿಯಲ್ಲೂದರ್ಶನ ನೀಡಲಿದ್ದಾನೆ.

ಸದ್ಯ ಟ್ರೆಂಡಿಂಗ್​ನಲ್ಲಿ ದೊಡ್ಡ ಕ್ರೇಜ್ ಕ್ರಿಯೇಟ್ ಮಾಡಿದ್ದ ಸಿನಿಮಾ ಕೆಜಿಎಫ್ ವಿಶ್ವದಾದ್ಯಂತ ತೆರೆಕಂಡು ಬಹುದೊಡ್ಡ ಯಶಸ್ಸು ಗಳಿಸಿತ್ತು. ಅದ್ರಲ್ಲೂ ರಾಕಿಂಗ್ ಸ್ಟಾರ್ ಯಶ್​ರ ಸ್ಟೈಲಿಷ್ ಲುಕ್ ಅಂತೂ ಪ್ರೇಕ್ಷಕರ ದಿಲ್​ ಕದ್ದಿತ್ತು. ಇದೀಗ ಅದೇ ಕೆಜಿಎಫ್ ಸಿನಿಮಾದ ರಾಕಿಯ ಗೆಟಪ್​​ನಲ್ಲಿ ಸ್ಟೈಲಿಶ್ ಗಣಪನ ಮೂರ್ತಿಗಳು ರೆಡಿಯಾಗ್ತಿದ್ದು ಮಾರುಕಟ್ಟೆಗೆ ಬರೋಕೆ ಸಿದ್ದವಾಗ್ತಿವೆ.

‘ಕೆಜಿಎಫ್‌’ ಗಣಪ ಕೇವಲ ಕರ್ನಾಟಕದಲ್ಲಿಮಾತ್ರವಲ್ಲ, ಮುಂಬಯಿ, ಪುಣೆ, ಹೈದರಾಬಾದ್‌, ತೆಲಂಗಾಣದಲ್ಲೂಕೆಜಿಎಫ್‌ ಮಾದರಿ ಗಣೇಶನ ಮೂರ್ತಿಗಳು ಲಭ್ಯವಿವೆ. ಅಭಿಮಾನಿಗಳ ಕಡೆಯಿಂದ ಬೇಡಿಕೆ ಬಂದಿರುವುದರಿಂದ ಈ ಗಣಪನಿಗೆ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ. ಈ ಮೂಲಕ ಅಭಿಮಾನಿಗಳಿಗೂ ಹಬ್ಬಕ್ಕೆ ಭರ್ಜರಿ ಗಿಫ್ಟ್‌ ದೊರೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top