fbpx
ಸಮಾಚಾರ

ರಿಲೀಸ್ ಆಯ್ತು ಕಿಚ್ಚನ ‘ಪೈಲ್ವಾನ್’ ಪವರ್ ಪುಲ್ ಟ್ರೈಲರ್- ಇಲ್ಲಿ ನೋಡಿ

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೈಲವಾನ್ ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಟ್ರೈಲರ್ ನಲ್ಲಿ ಆಕ್ಷನ್ ಮತ್ತು ಡೈಲಾಗ್ ಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ”ನಾನು ಗೆಲ್ತಿನೋ.. ಇಲ್ವೋ.. ನನಗೆ ಗೊತ್ತಿಲ್ಲ ಆದ್ರೆ, ಸೋಲನ್ನು ಮಾತ್ರ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ.” ಎಂದು ಸುದೀಪ್ ಅಬ್ಬರಿಸಿದ್ದಾರೆ.

ಟ್ರೈಲರ್ ಇಲ್ಲಿ ನೋಡಿ:

 

ಮೊದಲ ಬಾರಿಗೆ ಕಿಚ್ಚ ಕುಸ್ತಿ ಪಟುವಾಗಿ ಅಖಾಡದಲ್ಲಿ ಜಗಜಟ್ಟಿಮಲ್ಲನಂತೆ ಅಬ್ಬರಿಸೋದನ್ನ ಟ್ರೈಲರ್ ಕಾಣಬಹುದು. ದೇಸಿ ಶೈಲಿಯ ಕುಸ್ತಿಪಟುವಾಗಿ ಜೊತೆಗೆ ಬಾಕ್ಸರ್ ಆಗಿ ಕಿಚ್ಚ ಡಬಲ್ ಶೇಡ್​ನಲ್ಲಿ ಅಬ್ಬರಿಸಿದ್ದಾರೆ. ದಸರಾ ಸೇರಿದಂತೆ ಹಲವು ಸಣ್ಣ ಮಟ್ಟದ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡೋ ಕಿಚ್ಚ ಬಳಿಕ ಬಾಕ್ಸರ್ ಆಗಿ ದೊಡ್ಡ ಹೆಸರು ಮಾಡೋಕೆ ಮುಂದಾಗ್ತಾರೆ. ಈ ವೇಳೆ ಮೆಂಟರ್ ಆಗಿ ಸುನೀಲ್ ಶೆಟ್ಟಿ ಪೈಲ್ವಾನನಿಗೆ ಸಾಥ್ ನೀಡಿದ್ದಾರೆ.

ಸೆಪ್ಟೆಂಬರ್ 12ಕ್ಕೆ ಸಿನಿಮಾ ತೆರೆಗೆ:
ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದ್ದು ಸೆಪ್ಟೆಂಬರ್ 12ರಂದು ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದಾರೆ. ಇನ್ನು ಐದೂ ಭಾಷೆಯಲ್ಲಿಯೂ ಅಂದೇ ಚಿತ್ರ ತೆರೆಕಾಣಲಿದೆ. ಪಂಚಭಾಷೆಯಲ್ಲಿ ನಿರ್ಮಾಣವಾಗಿರುವ ಪೈಲ್ವಾನ್ ವಿತರಣಾ ಹಕ್ಕನ್ನು ಜೀ ಸ್ಟುಡಿಯೋಸ್ ಪಡೆದುಕೊಂಡಿದ್ದು, ದೇಶದಾದ್ಯಂತ ಚಿತ್ರವನ್ನು ಏಕಕಾಲದಲ್ಲಿ 2500ಕ್ಕಿಂತ ಹೆಚ್ಚಿನ ಚಿತ್ರಮಂದಿರದಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.

ಪೈಲ್ವಾನ್ ಬಗ್ಗೆ:
ಪೈಲ್ವಾನ್ ಚಿತ್ರದ ಬಗ್ಗೆ ಹೇಳಬೇಕೆಂದರೆ ಮುಂಬೈ ಬೆಡಗಿ ಆಕಾಂಕ್ಷ ಸಿಂಗ್ ಸುದೀಪ್’ಗೆ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಬಾಲಿವುಡ್ ನಟ ಸುನಿಲ್ ಶೆಟ್ಟಿ, ಕರುಣ್ ದುಹಾನ್ ಸಿಂಗ್, ಸುಶಾಂತ್ ಸಿಂಗ್, ಅವಿನಾಶ್ ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. RRR ಮೋಶನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಪೈಲ್ವಾನ್ ಚಿತ್ರವನ್ನು ನಿರ್ದೇಶಕ ಕೃಷ್ಣಾ ಅವರ ಪತ್ನಿ ಸ್ವಪ್ನ ಕೃಷ್ಣಾ ನಿರ್ಮಾಣ ಮಾಡುತ್ತಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಕರುಣಾಕರ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top