fbpx
ಸಮಾಚಾರ

ಪೈಲ್ವಾನನಿಗೆ ಶುಭಕೋರಿದ ಖ್ಯಾತ ನಿರ್ದೇಶಕ ರಾಜಮೌಳಿ.

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೈಲವಾನ್ ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಪ್ರೇಕ್ಷಕರಿಂದ ಅತ್ಯುತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಈ ನಡುವೆ ತೆಲುಗಿನ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಪೈಲ್ವಾನ್ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಟ್ರೈಲರ್ ಇಲ್ಲಿ ನೋಡಿ:

 

ಪೈಲ್ವಾನ್ ಟ್ರೈಲರ್ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ರಾಜಮೌಳಿ ಕಿಚ್ಚ ಸುದೀಪ್ ಗೆ, ಪೈಲ್ವಾನ್ ಚಿತ್ರತಂಡಕ್ಕೆ ಹಾಗೂ ಪೈಲ್ವಾನ್ ಚಿತ್ರವನ್ನು ತೆಲುಗು ರಾಜ್ಯಗಳಲ್ಲಿ ವಿತರಣೆ ಮಾಡುತ್ತಿರುವ ವಾರಾಹಿ ಚಲನಚಿತ್ರಂ ಅವರಿಗೆ ಶುಭಾಶಯ ಕೋರಿದ್ದಾರೆ.. ಅಷ್ಟೇ ಅಲ್ಲದೇ ಪೈಲ್ವಾನ್ ಟ್ರೈಲರ್ ಅನ್ನು ಕೂಡ ಶೇರ್ ಮಾಡಿದ್ದಾರೆ.

 

 

ಮೊದಲ ಬಾರಿಗೆ ಕಿಚ್ಚ ಕುಸ್ತಿ ಪಟುವಾಗಿ ಅಖಾಡದಲ್ಲಿ ಜಗಜಟ್ಟಿಮಲ್ಲನಂತೆ ಅಬ್ಬರಿಸೋದನ್ನ ಟ್ರೈಲರ್ ಕಾಣಬಹುದು. ದೇಸಿ ಶೈಲಿಯ ಕುಸ್ತಿಪಟುವಾಗಿ ಜೊತೆಗೆ ಬಾಕ್ಸರ್ ಆಗಿ ಕಿಚ್ಚ ಡಬಲ್ ಶೇಡ್​ನಲ್ಲಿ ಅಬ್ಬರಿಸಿದ್ದಾರೆ. ದಸರಾ ಸೇರಿದಂತೆ ಹಲವು ಸಣ್ಣ ಮಟ್ಟದ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡೋ ಕಿಚ್ಚ ಬಳಿಕ ಬಾಕ್ಸರ್ ಆಗಿ ದೊಡ್ಡ ಹೆಸರು ಮಾಡೋಕೆ ಮುಂದಾಗ್ತಾರೆ. ಈ ವೇಳೆ ಮೆಂಟರ್ ಆಗಿ ಸುನೀಲ್ ಶೆಟ್ಟಿ ಪೈಲ್ವಾನನಿಗೆ ಸಾಥ್ ನೀಡಿದ್ದಾರೆ.

ಸೆಪ್ಟೆಂಬರ್ 12ಕ್ಕೆ ಸಿನಿಮಾ ತೆರೆಗೆ:
ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದ್ದು ಸೆಪ್ಟೆಂಬರ್ 12ರಂದು ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದಾರೆ. ಇನ್ನು ಐದೂ ಭಾಷೆಯಲ್ಲಿಯೂ ಅಂದೇ ಚಿತ್ರ ತೆರೆಕಾಣಲಿದೆ. ಪಂಚಭಾಷೆಯಲ್ಲಿ ನಿರ್ಮಾಣವಾಗಿರುವ ಪೈಲ್ವಾನ್ ವಿತರಣಾ ಹಕ್ಕನ್ನು ಜೀ ಸ್ಟುಡಿಯೋಸ್ ಪಡೆದುಕೊಂಡಿದ್ದು, ದೇಶದಾದ್ಯಂತ ಚಿತ್ರವನ್ನು ಏಕಕಾಲದಲ್ಲಿ 2500ಕ್ಕಿಂತ ಹೆಚ್ಚಿನ ಚಿತ್ರಮಂದಿರದಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top