fbpx
ಸಮಾಚಾರ

ನಟ ದರ್ಶನ್ ಬಗ್ಗೆ ಹೊಸ ಬಾಂಬ್ ಸಿಡಿಸಿದ ಪತ್ರಕರ್ತ ರವಿಬೆಳಗೆರೆ.

“ಚಾಲೆಜಿಂಗ್ ಸ್ಟಾರ್ ದರ್ಶನ್​ ತೂಗುದೀಪ್​ ಇತ್ತೀಚೆಗೆ ಪಾನಮತ್ತರಾಗಿ ತಮ್ಮ ಪತ್ನಿ ವಾಸವಿರುವ ಅಪಾರ್ಟ್​ಮೆಂಟ್​ಗೆ ಹೋಗಿ ಪತ್ನಿ ವಿಜಯಲಕ್ಷ್ಮೀ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಜಗಳ ಬಿಡಿಸಲು ಬಂದ ಅದೇ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿರುವ ಹಾಸ್ಯನಟ ರವಿಶಂಕರ್​ ಗೂ ದರ್ಶನ್​ ಚೆನ್ನಾಗಿ ಹೊಡೆದಿದ್ದಾರೆ” ಎಂದು ಹಿರಿಯ ಪತ್ರಕರ್ತ ರವಿ ಬೆಳಗೆರೆ ಹೇಳಿದ್ದಾರೆ.

ರವಿ ಬೆಳೆಗೆರೆಯವರ ವಿಡಿಯೋ ನೋಡಿ:

ಬೆಳ್​ಬೆಳಗ್ಗೆ ಬೆಳಗೆರೆ ಎಂಬ ಯುಟ್ಯೂಬ್​ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ರವಿಬೆಳಗೆರೆ “ಸಾರ್ವಜನಿಕ ಜೀವನದಲ್ಲಿ ಇರುವ ಚಿತ್ರರಂಗದಲ್ಲಿ ಭಾರಿ ಜನಪ್ರಿಯತೆ ಗಳಿಸಿಕೊಂಡಿರುವ ನಟರು ತಮ್ಮ ವೈಯಕ್ತಿಕ ಜೀವನದಲ್ಲಿ ಸಂಯಮ ಕಾಯ್ದುಕೊಳ್ಳುವುದು ತುಂಬಾ ಅವಶ್ಯ. ಬರಬಾರದ ವಯಸ್ಸಿನಲ್ಲಿ, ಬರಬಾರದ ರೀತಿಯಲ್ಲಿ, ಬರಬಾರದಷ್ಟು ಹಣ ಬಂದರೆ ಹೀಗೆಲ್ಲ ಆಗುತ್ತದೆ” ಎಂದು ಹೇಳಿದ್ದಾರೆ.

“ವಿಜಯಲಕ್ಷ್ಮೀ ಮೇಲೆ ಅತೀವ ಪ್ರೀತಿ ಇದ್ದಾಗ ಆಕೆಯ ಹೆಸರಿನಲ್ಲಿ ದರ್ಶನ್​ ಕೋಟಿಗಟ್ಟಲೆ ಆಸ್ತಿ ಮಾಡಿಟ್ಟಿದ್ದಾರೇ. ಅದನ್ನು ವಾಪಸು ಕೊಡುವಂತೆ ಪತ್ನಿಯನ್ನು ದರ್ಶನ್​ ಪೀಡಿಸುತ್ತಿದ್ದಾರೇ. ಇದಕ್ಕೆ ಆಕೆ ಒಪ್ಪದಿರುವುದೇ ಇವರಿಬ್ಬರ ನಡುವಿನ ಜಗಳಕ್ಕೆ ಕಾರಣ” ಎಂದು ರವಿಬೆಳಗೆರೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ದರ್ಶನ್ ಸದ್ಯ ಪವಿತ್ರ ಗೌಡ ಎಂಬ ಹುಡುಗಿಯ ಜೊತೆ ಸಂಭಂದ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಅಂದಹಾಗೆ ಇನ್ನು ಇತ್ತೀಚೆಗಷ್ಟೇ ವರಮಹಾಲಕ್ಷ್ಮಿ ಹಬ್ಬದ ದಿನ ಚಾಲೆಂಜಿಂಗ್ ಸ್ಟಾರ್ ತಮ್ಮ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆಂಬ ಸುದ್ದಿ ಹರಿದಾಡಿತ್ತು. ಅಲ್ಲದೇ, ಟ್ವಿಟರ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್ ಅಂತಿದ್ದ ಹೆಸರನ್ನ ವಿಜಯಲಕ್ಷ್ಮಿ ಅಂತಷ್ಟೇ ಚೇಂಜ್ ಮಾಡಿದ್ದು, ಹಲವು ಅನುಮಾನಕ್ಕೆ ಎಡೆಮಾಡಿ ಕೊಟ್ಟಿತ್ತು. ಆದ್ರೆ ವಿಜಯಲಕ್ಷ್ಮಿ ಟ್ವೀಟ್ ಮಾಡಿ, ಇದೆಲ್ಲ ಗಾಳಿ ಸುದ್ದಿ ಇದನ್ನೆಲ್ಲ ನಂಬಬೇಡಿ ಎಂದು ಹೇಳಿದ್ರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top