fbpx
ಸಮಾಚಾರ

ಸಾವಿರ ಕಂಬ ಬಸದಿಯ ಹುಂಡಿ ಕಳ್ಳತನದ ಮಾಡಿದ್ದ ಕಳ್ಳನ ಬಂಧನ.

ಸಾವಿರ ಕಂಬ ಬಸದಿ ಹುಂಡಿ ಕಳ್ಳನನ್ನು ಬಂಧಿಸಿ ನ್ಯಾಯ ಒದಗಿಸಿದ ಮೂಡಬಿದ್ರಿ ಪೊಲೀಸ ಇಲಾಖೆಯ ಸರ್ಕಲ್ ಇನ್ಸ್ಪೆಕ್ಟರ್ ಶ್ರೀ ದಿನೇಶ್, ಹಿಂದಿನ ಸರ್ಕಲ್ ಇನ್ಸ್ಪೆಕ್ಟರ್ ಶ್ರೀ ಅನಂತ ಪದ್ಮನಾಭ ಈಗಿನ ಎಸ್ ಐ ಶ್ರೀ ಕೃಷ್ಣ, ಹಾಗೂ ಸಿಬ್ಬಂದಿಗಳು, ಕ್ರೈಂ ವಿಭಾಗದ ಎ ಸಿ ಪಿ ಶ್ರೀನಿವಾಸಗೌಡ ಹಾಗೂ ಪೊಲೀಸ ಹಿರಿಯ ಅಧಿಕಾರಿಗಳಿಗೆ ಜಿಲ್ಲಾ ಎಸ್.ಪಿ ಯವರಿಗೆ ಅಭಿನಂದನೆಗಳನ್ನು ಮೂಡಬಿದಿರೆ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳವರು ತಿಳಿಸಿರುತ್ತಾರೆ.

29-8-19ರಂದು ಮೂಡಬಿದಿರೆ ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿ ಗಳನ್ನು ಶ್ರೀ ಮಠದ ವತಿಯಿಂದ ಸನ್ಮಾನಿಸಲಾಗುವುದು. ಈಗಾಗಲೆ ಬಸದಿಗಳಿಗೆ 2 ಹೆಚ್ಚುವರಿ ಭದ್ರತಾ ಕಾವಲುಗಾರರನ್ನು ನೇಮಿಸಿದ್ದು. ಪೊಲೀಸ ಇಲಾಖೆ ಉತ್ತಮ ಸಹಕಾರ ನೀಡುತ್ತಿರುವುದು ನೆಮ್ಮದಿ ನೀಡಿದೆಂದು ಮೂಡುಬಿದಿರೆ ಶ್ರೀ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ತಿಳಿಸಿದರು. ಮತ್ತೊಮ್ಮೆ ಶ್ರೀ ಕೂಷ್ಮಾಂಡಿನಿ ಮಾತೆ, ಶ್ರೀ ಜ್ವಾಲಾ ಮಾಲಿನಿ ಮಾತೆಯ ಕಾರ್ಣಿಕ ನಿಜವಾಯಿತು.

ಶ್ರೀಗಳವರು ಕಳ್ಳರ ಶೀಘ್ರ ಪತ್ತೆಗೆ ಪೋಲಿಸ್ ಇಲಾಖೆಗೆ ಆಗ್ರಹಿಸಿದ ಸಂದರ್ಭ,ವಿಶೇಷ ಪ್ರಾರ್ಥನೆಯನ್ನು ಜಿನ ಶಾಶನ ದೇವತೆ ಕೂಷ್ಮಾಂಡಿನಿದೇವಿ ಹಾಗೂ ಜ್ವಾಲಾಮಾಲಿನಿದೇವಿ ಯವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಹಿಂದೆ 2013 ರಲ್ಲೂ ಕಳ್ಳನ ಪತ್ತೆಯಾಗಿ ನೆಮ್ಮದಿಯಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top