fbpx
ಸಮಾಚಾರ

ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನಸ್ಸು ಗೆದ್ದ ವಿರಾಟ್ ಪತ್ನಿ ಅನುಷ್ಕಾ ಶರ್ಮಾ- ವಿಡಿಯೋ ವೈರಲ್.

ಸದ್ಯ ಪತಿ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜತೆ ವೆಸ್ಟ್‌ಇಂಡೀಸ್ ಪ್ರವಾಸದಲ್ಲಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕನ್ನಡದಲ್ಲಿ ಒಂದೇ ಒಂದು ಪದವನ್ನು ಮಾತನಾಡುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ.

 

 

ಬಾಲಿವುಡ್ ಚಿತ್ರರಂಗದಿಂದ ದೂರವಿರುವ ಅನುಷ್ಕಾ ಶರ್ಮಾ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹೀಗಿರುವಾಗ ಅವರು ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮಗೆ ಬಂದಂತಹ ಪಾಸಿಟಿವ್ ಟ್ವೀಟ್‍ಗಳನ್ನು ಓದಿ ಅದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ.

 

 

ಸಾಮಾಜಿಕ ಜಾಲತಾಣದಲ್ಲಿ ಋಣಾತ್ಮಕ ಅಂಶವೇ ತುಂಬಿರುವ ಈ ಕಾಲದಲ್ಲಿ ಅನುಷ್ಕಾ ಧನಾತ್ಮಕ ಅಂಶ ಹರಡುವ ಕೆಲಸದಲ್ಲಿ ತೊಡಗಿದ್ದಾರೆ. ಪಾಸಿಟಿವ್​ ಅಂಶಗಳನ್ನು ಹೇಳುವ ಟ್ವೀಟ್​ಗಳನ್ನು ಅನುಷ್ಕಾ ಓದಿದ್ದಾರೆ. ಕೊನೆಯ ಟ್ವೀಟ್​ ಓದಿ ಮುಗಿಸುವಾಗ, ಅನುಷ್ಕಾ, ದಟ್ಸ್​​ ಇಟ್​ ಎಂದು ಹೇಳುವ ಬದಲು ‘ಅಷ್ಟೇ’ (#Ashte) ಎಂದು ಅಚ್ಚ ಕನ್ನಡದಲ್ಲಿ ಹೇಳಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ರೀಟ್ವೀಟ್ ಮಾಡಿಕೊಂಡಿದ್ದಾರೆ.

 

 

ಕನ್ನಡದ ಒಂದು ಪದವನ್ನಷ್ಟೇ ಹೇಳಿದರೂ ಕೂಡ ಅನುಷ್ಕಾರ ಕನ್ನಡದ ಮೇಲಿನ ಪ್ರೀತಿಗೆ ಕನ್ನಡಿಗ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ. ಅಲ್ಲದೆ ಈ ವಿಡಿಯೋ ನೋಡಿದ ಅನೇಕರು ರೀಟ್ವೀಟ್ ಮಾಡಿಕೊಂಡು ಧನ್ಯವಾದಗಳನ್ನು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top