fbpx
ಸಮಾಚಾರ

ಕನ್ನಡ ಬಳಸದ ಯಶ್​​-ರಾಧಿಕಾರನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು!

ಇತ್ತೀಚೆಗೆ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಅವರ ತಾಯಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದು ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಈಗ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಒಂದೇ ಒಂದು ಕನ್ನಡ ಪದ ಮಾತನಾಡದೆ ಇಂಗ್ಲಿಷ್‌ನಲ್ಲಿ ಮಾತನಾಡಿ ಹಂಚಿಕೊಂಡಿರುವ ವಿಡಿಯೊ ಬಗ್ಗೆ ನೆಟ್ಟಿಗರಿಂದ ಭಾರಿ ಆಕ್ಷೇಪ ವ್ಯಕ್ತವಾಗಿದೆ.

 

 

ಯಶ್​ ಅವರ ಮಗಳು ಆಯ್ರಾಗೆ ಅವರ ರಾಧಿಕಾರ ಮೇಕಪ್​ ಮ್ಯಾನ್​ ಒಂದು ಉಡುಗೊರೆ ನೀಡಿದ್ದಾರೆ. ಅದರ ಕುರಿತಾಗಿ ರಾಕಿಂಗ್​ ದಂಪತಿ ಧನ್ಯವಾದ ತಿಳಿಸಲು ಒಂದು ವಿಡಿಯೋ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ಇವರು ಸಂಪೂರ್ಣವಾಗಿ ಇಂಗ್ಲಿಷ್​ನಲ್ಲೇ ಮಾತನಾಡಿದ್ದಾರೆ.

 

 

“ಕನ್ನಡ ಜೊತೆಗೆ ಇಂಗ್ಗೀಷ್ ಬಳಸಿ ಸಲ್ಪ ಅದನ್ನ ಬಿಟ್ಟು ಬರಿ ಇಂಗ್ಗಿಷ್ ನಲ್ಲಿ ಮಾತನಾಡುವುದು ಎಷ್ಟು ಸರಿ? ನಿಮಗೆ ಹೊರರಾಜ್ಯದಲ್ಲಿ ಅಭಿಮಾನಿಗಳು ಇರಬಹುದು ಆಗಂತ ಕನ್ನಡನ ಕಡೆಗಣಿಸುದು ತಪ್ಪು. ನಿಮ್ಮ ಬೇರೆ ಭಾಷೆಯ ಅಭಿಮಾನಿಗಳಿಗೆ ಕನ್ನಡ ಅರ್ಥ ಆಗಲ್ಲ ಅಂತ ಬರಿ ಇಂಗ್ಗೀಷ್ ಬಳಸುವುದು ತಪ್ಪಾಗುತ್ತೆ. ತಿಳಿದು ತಿಳಿದು ನಿಮ್ಮಂತವರೆ ಈ ರೀತಿ ಮಾಡಬಾರದು. ಎಂದೆಲ್ಲಾ ಕಾಮೆಂಟ್ ಕಾಡುತ್ತಿದ್ದಾರೆ.

ಇಂಗ್ಲಿಷ್​ನಲ್ಲಿ ಮಾತನಾಡುವ ಮೂಲಕ ಬೇರೆ ಭಾಷೆಯವರನ್ನು ಓಲೈಕೆ ಮಾಡಲು ಹೋಗಿ ನಿಮ್ಮ ಮೇಲೆ ಇಟ್ಟಿರುವ ಅಭಿಮಾನ ಕಡಿಮೆಯಾಗುವಂತೆ ಮಾಡಿಕೊಳ್ಳಬೇಡಿ ಎಂದೆಲ್ಲ ಕೆಲವರು ಬರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top